
ಮೈಸೂರು; ಜಿಲ್ಲೆಯ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಮವಾರ ನಾಯಕ ಸಮುದಾಯದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಜಮಾಯಿಸಿದ್ದ ಮೈಸೂರು ಮತ್ತು ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯ ದಿವಂಗತ ಎಸ್ ಚಿಕ್ಕಮಾದು ಮತ್ತು ಹೆಚ್ ಡಿ ಕೋಟೆಯ ಶಾಸಕ ಅನಿಲ್ ಚಿಕ್ಕಮಾದು, ಹಾಗೂ ಎಸ್ ಸಿ ಬಸವರಾಜು ರವರ ಅಭಿಮಾನಿಗಳು ಹಾಗೂ ನಾಯಕ ಸಮಾಜದ ಮುಖಂಡರು, ಕಾರ್ಯಕರ್ತರು, ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದರು. ಮಹರ್ಷಿ ವಾಲ್ಮೀಕಿ ಮತ್ತು ದಿವಂಗತೆ ಎಸ್ ಚಿಕ್ಕಮಾದು, ಶಾಸಕ ಅನಿಲ್ ಚಿಕ್ಕ ಮಾದು, ಮತ್ತು ಎಸ್ ಸಿ.ಬಸವರಾಜು ರವರಿಗೆ ಜೈಕಾರವನ್ನು ಕೂಗುತ್ತಾ ದಿವಾನ್ಸ್ ರಸ್ತೆಯ ಮುಖಾಂತರ ಕಾಲಾಡಗಿಯಲ್ಲಿ ಕಾಂಗ್ರೆಸ್ ಕಚೇರಿ ಹತ್ತಿರ ಆಗಮಿಸಿ ದಾಸಪ್ಪ ವೃತ್ತದಲ್ಲಿ ಮಾನವ ಸರಪಳಿ ಮಾಡಿದರು.
ನಂತರ ತೆರಳಿದ ಮುಖಂಡರು ಅಭಿಮಾನಿಗಳು ಕಾಂಗ್ರೆಸ್ ಕಚೇರಿಗೆ ತಲುಪಿದರು. ಪ್ರತಿಭಟನೆಯ ವೇಳೆ ಮಾತನಾಡಿದ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ (ಪಿಯಾ), ನಾಯಕ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊAಡು ಬಂದಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದೆ. ಆದರೆ ನಮ್ಮ ಸಮುದಾಯಕ್ಕೆ ಸೂಕ್ತ ಸಚಿವ ಸ್ಥಾನಮಾನಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ನಾಯಕ ಸಮಾಜ ಹೊಂದಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಮಾಜದ ಮತಗಳೇ ನಿರ್ಣಯಕವಾಗಿದೆ. ಕಾಂಗ್ರೆಸ್ ಪಕ್ಷವನ್ನು ನಮ್ಮ ಸಮಾಜ ಬೆಂಬಲಿಸಿದ್ದರಿAದ ಕಾಂಗ್ರೆಸ್ ಪಕ್ಷ ಈಗ ಅಧಿಕಾರ ನಡೆಸುತ್ತಿದೆ. ಮೂರು ವರ್ಷಗಳೇ ಕಳೆದರೂ ನಮ್ಮ ಸಮಾಜಕ್ಕೆ ನೀಡಬೇಕಾದಂತ ಪ್ರಾತಿನಿಧ್ಯ, ಸಚಿವ ಸ್ಥಾನಗಳನ್ನು ನೀಡದೆ ಅನ್ಯಾಯ ಮಾಡಲಾಗಿದೆ. ಸಮಾಜದಿಂದ ಸಚಿವರಾಗಿದ್ದ ಎನ್.ನಾಗೇಂದ್ರ, ರಾಜಣ್ಣರನ್ನೂ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಆ ಸ್ಥಾನವನ್ನೂ ತುಂಬಿಲ್ಲ. ಹಾಗಾಗಿ ಸಚಿವರಾದ ಸತೀಶ್ ಜಾರಕಿ ಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಅನಿಲ್ ಚಿಕ್ಕಮಾದುರಿಗೆ ಸಚಿವ ಸ್ಥಾನವನ್ನು ನೀಡಬೇಕು. ಬಸವರಾಜು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ವರಿಷ್ಠರನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ನಾಯಕ ಯುವ ಸೇನೆಯ ಅಧ್ಯಕ್ಷ ದೇವರಾಜು ಕಾಟೂರು ಮಾತನಾಡಿ, ಸಚಿವ ಸತೀಶ್ ಜಾರಕಿ ಹೊಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಸಚಿವ ಸಂಪುಟ ವಿಸûರಣೆ, ನಿಗಮ ಮಂಡಳಿಯ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯರ ನೇಮಕಾತಿಯಲ್ಲಿ ನಾಯಕ ಸಮಾಜಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಬಳಿಕ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಬಿ.ಕೆ.ವಿಜಯಕುಮಾರ್ ಮತ್ತು ಆರ್ ಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಅವರು ನೀವು ಕೊಟ್ಟಿರುವ ಮನವಿಯನ್ನು ಕೂಡಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಕರ್ನಾಟಕದ ಉಸ್ತುವಾರಿಗಳಿಗೆ ತಕ್ಷಣದಲ್ಲಿ ಫ್ಯಾಕ್ಸ್ ಮಾಡುವುದಾಗಿ ತಿಳಿಸುವುದರು.
ಪ್ರತಿಭಟನೆಯಲ್ಲಿ ನಾಯಕ ಸಮಾಜದ ಹಿರಿಯ ಮುಖಂಡ ಉದ್ಬೂರು ಕೃಷ್ಣ, ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಚಾಮರಾಜನಗರ ಪಾಳ್ಯ ಕೃಷ್ಣ, ಅರಕಲವಾಡಿ ಸೋಮನಾಯಕ, ಹೊಂಗನೂರು ಚಂದ್ರು, ಕೋಳಗಾಲ ಕೆ.ಎನ್ ಮಹೇಶನಾಯಕ, ಸರಗೂರು ಶ್ರೀನಿವಾಸ್, ಆಗತ್ತೂರು ಅಂಕಪ್ಪ,ಕೆ ಆರ್ ನಗರ ಜೆ ಶ್ರೀನಿವಾಸ್, ಹೊನ್ನನಾಯಕ, ನಂಜನಗೂಡು ನಾಗರಾಜು, ತಿಪ್ಪೂರು ಮಹದೇವ, ಆಲಗೂಡು ನಾಗರಾಜು,ಇಟ್ನಾ ಬೆಟ್ಟನಾಯಕ, ಕುಣಿಗಲು ಸಣ್ಣಸ್ವಾಮಿನಾಯಕ, ಸಾಹುಕಾರಹುಂಡಿ ಮಹದೇವ, ನಾಗವಾಲ ಮಹೇಶ, ವೇಣುಗೋಪಾಲ, ಸಾಲಿಗ್ರಾಮ ಮಹದೇವನಾಯಕ, ಮಣಿ,ರಮ್ಮನ್ನಹಳ್ಳಿ ಸೋಮಣ್ಣ , ಶೇಖರ್,ರಂಗಸ್ವಾಮಿ, ನಾಗನಾಯಕ, ಸಿಂಡಿಕೇಟ್ ಸದಸ್ಯ ಬಸವರಾಜು,ಬಿಓಎಂ ಸದಸ್ಯ ಮಂಜು ಸ್ಭೆರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.