
ಮೈಸೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಆಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೈಸೂರಿನ ಲಲಿತಾದ್ರಿಪುರದಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆರ್ ಟಿ ವೆಂಕಟೇಶ್ ಅಜ್ಜಮಾಡ ರಮೇಶ್ ಕುಟ್ಟಪ್ಪ ತೆರೆಮರೆಯ ಸಾಧಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ನಡೆದ ತೆರೆಮರೆಯ ಸಾಧಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆ ಆರ್ ಪೇಟೆ ತಾಲೂಕಿನ ಪ್ರಖ್ಯಾತ ವೈದ್ಯರಾದ ಆರ್ ಟಿ ವೆಂಕಟೇಶ್ ಹಾಗೂ ಮಡಿಕೇರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ತೆರೆ ಮರೆಯ ಸಾಧಕ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಯೋಗ ಶಿಕ್ಷಕರಾದ ರಾಜಲಕ್ಷಿ÷್ಮ ಕೆ, ವೆಂಕಟೇಶ್ ಎಸ್ ಆರ್ ಅವರು ಪ್ರದಾನ ಮಾಡಿ ಸನ್ಮಾನಿಸಿದರು
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಕೌಶಿಕ ಸ್ವಾಮೀಜಿ ಹಾಗೂ ದಿವ್ಯಪಾದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಆಶ್ರಮದ ಸ್ವಯಂಸೇವಕರಾದ ವೀಣಾ, ಗೋಕುಲ್, ಅಪೂರ್ವ ಸುರೇಶ್, ರವಿಕುಮಾರ್ ಆನಂದ್, ನಾಗ ನಂದಿನಿ , ಮಹೇಶ್, ಪ್ರತಿಭಾ ಹಾಗೂ ಇನ್ನಿತರರು ಶಿಕ್ಷಕ ವೃಂದ ಹಾಜರಿದ್ದರು