Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಪರಿಸರ ದಿನಾಚರಣೆ


ಮೈಸೂರು; ಇಲ್ಲಿನ ಕುವೆಂಪು ನಗರದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಹಸಿರಿದ್ದರೆ ಉಸಿರು ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಸಮಾಜದ ಸದಸ್ಯರಿಗೆ ಗಿಡ ನೀಡುವುದರ ಮೂಲಕ ವಿಶ್ವ ಪರಿಸರದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಅಲ್ಲದೆ ಮೆನೂ ಪಾಸ್ ಅವೇರ್ನೆಸ್ ಬಗ್ಗೆ ಜೆ ಎಸ್ ಎಸ್ ಆಸ್ಪತ್ರೆಯ ( ಆಯುರ್ವೇದ ವಿಭಾಗ ) ಡಾ. ತೇಜಸ್ವಿನಿ ಅವರ ತಂಡದಿAದ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಇದರ ಉಪಯೋಗವನ್ನು ಸಮಾಜದ ಎಲ್ಲಾ ಸದಸ್ಯರು ಪಡೆದುಕೊಂಡರು. ಈ ವೇಳೆ ಸಂಘದ ಉಪಾಧ್ಯಕ್ಷರಾದ ವಿಜಯ ಮಂಜುನಾಥ್, ಲತಾ ರಮೇಶ್, ಯೋಗೀಶ್ವರಿ, ಭಾಗ್ಯ, ಪ್ರೇಮ ಅಶೋಕ್, ಸರಸ್ವತಿ, ಮೀನಾ, ಲತಾ ಮಹೇಶ್, ಹಂಸ ಪದಾಧಿಕಾರಿಗಳು ಉಪಸ್ಥಿತರಿದ್ದರು.