Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಗ್ನಿ ದುರಂತದಲ್ಲಿ ಮೃತರಾದ ಕುಟುಂಬದವರಿಗೆ ತಲಾ 50 ಲಕ್ಷರೂ ಪರಿಹಾರ ನೀಡಿ; ಸಿ.ನಾರಾಯಣಗೌಡ ಆಗ್ರಹ


ಮೈಸೂರು; ಮೈಸೂರಿನ ದಟ್ಟಗಳ್ಳಿಯ ಪಬ್‌ವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಜೀವವಾಗಿ ದಹನವಾದ ಅಡುಗೆ ಸಿಬ್ಬಂದಿಗಳ ಕುಟುಂಬವರಿಗೆ ಕೂಡಲೇ 25 ಲಕ್ಷ ಪರಿಹಾರ ನೀಡಬೇಕೆಂದು ಮೈಸೂರು ಹೋಟಲು ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಟ್ಟಗಳ್ಳಿಯ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಅಡುಗೆ ಸಿಬ್ಬಂದಿಗಳು ಸಾವನ್ನಪ್ಪಿದ್ದು ಅತ್ಯಂತ ದು:ಖದ ವಿಷಯವಾಗಿದೆ. ಅವರ ಕುಟುಂಬದವರಿಗೆ ಭಗವಂತ ದು:ಖ ತಡೆಯುವ ಶಕ್ತಿನೀಡಲೆಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಮೃತರು ಡಾರ್ಜಲಿಂಗ್ ಮತ್ತು ನೇಪಾಳ ಮೂಲದವರಾಗಿದ್ದು, ಜೀವನ ನಿರ್ವಹಣೆಗೆ ಮೈಸೂರಿಗೆ ಕಾರ್ಮಿಕರಾಗಿ ಬಂದು, ಪಬ್ ನಲ್ಲಿ ದುಡಿದು ಕಾರ್ಯನಿರ್ವಹಿಸುತ್ತಿದ್ದು ಅವರುಗಳು ಬೆಂಕಿಗಾಹುತಿಗೆ ಬಲಿಯಾಗಿದ್ದು, ಪಬ್ ಮಾಲೀಕರಿಂದ 25 ಲಕ್ಷ ರೂ ಹಾಗು ಸರಕಾರದಿಂದ 25 ಲಕ್ಷ ರೂಗಳು ಸೇರಿ ಒಟ್ಟು 50 ಐವತ್ತು ಲಕ್ಷ ರೂಗಳನ್ನು ಸತ್ತ ಕುಟುಂಬದವರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಸತ್ತವರೆಲ್ಲಾ 24-26 ವರ್ಷಗಳ ಆಸುಪಾಸಿನವರು. ಅವರ ಕುಟುಂಬಗಳ ಕಷ್ಟಗಳು ತೀವ್ರವಾಗಿವೆ.ತಕ್ಷಣ 25 ಲಕ್ಷ ಪರಿಹಾರ ನೀಡಿ, ಅವರುಗಳ ದೇಹವನ್ನು ಅವರ ಹುಟ್ಟೂರಿಗೆ ಕಳಿಸಲು ವ್ಯವಸ್ಥೆಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮುಂದಾದರೂ ಅನುಭವ ಇಲ್ಲದವರಿಗೆ ಸಿಕ್ಕ ಸಿಕ್ಕಿದ ಕಡೆ, ಲಕ್ಷಗಟ್ಟಲೇ ಹಣ ಪಡೆದು ಅಬಕಾರಿ ಲೈಸನ್ಸ್ ನೀಡುವುದನ್ನು ನಿಲ್ಲಿಸಬೇಕು. ಸಿಎಲ್ 2,ಸಿಎಲ್ 7 ಹಾಗೂ ಸಿಎಲ್ 9 ಈ ಲೈಸನ್ಸ್ ಗಳು ಕೊಟ್ಟ ಕಡೆ ಅದೇ ರೀತಿ ನಡೆಸಲಾಗುತ್ತಿದಿಯೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಹುಲ್ಲು, ಮೆದೆ, ಬಂಬೂ, ಸೌದೆ ಅಲಂಕಾರ ಇವೆಲ್ಲಾ ಅಲಂಕಾರ ಮಾಡುವುದನ್ನು ನಿಷೇಧ ಮಾಡಬೇಕು, ಈಗಿನ ವ್ಯಾಪಾರಿಗಳಿಗೆ ಸಿಲೆಂಡರ್ ಎಲ್ಲಿಡಬೇಕು, ವಿದ್ಯುತ್ ಪವರ್ ಎಲ್ಲಿ ಹಾಕಿಸಬೇಕು, ಒಲೆಗಳು ಹೇಗಿರಬೇಕು ಎಂಬುದೇ ತಿಳುವಳಿಕೆ ಇರುವುದಿಲ್ಲ. ನಗರಪಾಲಿಕೆ, ಅಗ್ನಿಶಾಮಕ, ಚೆಸ್ಕಾಂ , ಮತ್ತು ಅಬಕಾರಿ ಇಲಾಖೆಗಳು ಸರಿಯಾಗಿ ಕೆಲಸ ಮಾಡಿದರೆ, ಈ ತರಹ ಅವಘಡಗಳನ್ನು ತಡೆಗಟ್ಟಬಹುದಾಗಿದೆ, ಇವೆಲ್ಲದಕ್ಕೂ ಅಧಿಕಾರಿಗಳೇ ಹೊಣೆಯಾಗಿದ್ದಾರೆ ಎಂದು ಹೇಳಿದ್ದಾರೆ.