Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರ ಅಹೋರಾತ್ರಿ ಧರಣಿ


ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪ್ರವೇಶಾತಿ ಪಡೆದ ಸಂಶೋಧಕರುಗಳಿಗೆ ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ವಿವಿ ಸಂಶೋಧಕರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ನಗರದ ಕ್ರಾಫಡ್9 ಹಾಲ್ ಬಳಿಯೇ ಸೋಮವಾರ ರಾತ್ರಿಯಿಂದಲೇ ಅಹೋರಾತ್ರಿ ಧರಣಿ ಆರಂಭಿಸಿದ್ದು, ಕೂಡಲೇ ಶಿಷ್ಯವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಧರಣಿ ನಿರತರು, 2026-2027 ನೇ ಸಾಲಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡಲಾಗುವ ಶಿಷ್ಯವೇತನಕ್ಕೆ 2025 ಹಾಗೂ 2026 ನೇ ಸಾಲಿನ ಸಂಶೋಧಕರುಗಳು ಸೇರಿ ಒಟ್ಟು 96 ಅರ್ಜಿಗಳನ್ನು ಸಲ್ಲಿಸಿರುತ್ತೇವೆ. ಆದರೆ ಮೈಸೂರು ವಿಶ್ವವಿದ್ಯಾನಿಲಯವು ಕೇವಲ 20 ಸಂಶೋಧಕರುಗಳಿಗೆ ಮಾತ್ರ ಶಿಷ್ಯವೇತನ ಮಂಜೂರು ಮಾಡಿರುವುದು ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಶಿಷ್ಯವೇತನರಹಿತವಾಗಿ ಪಿಎಚ್.ಡಿ. ಪದವಿ ಪಡೆಯಲು ಹರಸಾಹಸ ಪಡುವಂತಾಗಿದೆ. ಮೈಸೂರು ವಿಶ್ವವಿದ್ಯಾನಿಲಯವು ಕಳೆದ ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಸಂಶೋಧಕರುಗಳಿಗೂ ಶಿಷ್ಯವೇತನ ಮಂಜೂರು ಮಾಡಿದೆ. ಅದಾಗಿಯೂ, ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳಿಗೆ ವರ್ಷಕ್ಕೆ ರೂ. 23 ಕೋಟಿಗಳನ್ನು ಅನಾವಶ್ಯಕವಾಗಿ ನೀಡುತ್ತಿದ್ದು, ಇದು ವಿಶ್ವವಿದ್ಯಾನಿಲಯದ ಹಣ ಪೋಲಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಅದಲ್ಲದೆ, ಈ ವರ್ಷದ ವಿಶ್ವವಿದ್ಯಾನಿಲಯದ ಬಜೆಟ್‌ನ ಒಟ್ಟು ರೂ. 400 ಕೋಟಿಗಳಲ್ಲಿ ನಿಯಮಾನುಸಾರ 24% ಮೊತ್ತವನ್ನು ಎಸ್.ಸಿ./ಎಸ್.ಟಿ. ಉಪಯೋಜನೆಗಳಿಗೆ ಮೀಸಲಿಟ್ಟರೆ ಸರಿ ಸುಮಾರು ರೂ. 96 ರಿಂದ 97 ಕೋಟಿ ನೀಡಬೇಕಾಗುತ್ತದೆ. ಆದರೆ ವಿಶ್ವವಿದ್ಯಾನಿಲಯವು ಎಸ್.ಸಿ./ಎಸ್.ಟಿ. ಸಂಶೋಧನೆಗೆ ಯಾವುದೇ ರೀತಿಯ ಮೊತ್ತವನ್ನು ಮೀಸಲಿಡದೆ ವಂಚಿಸುತ್ತಿದೆ ಎಂದು ದೂರಿದರು.
ಈ ಹಿಂದೆ ಪ್ರತಿಭಟನೆಯನ್ನು ಮಾಡಿದಾಗ ಸ್ಥಳಕ್ಕೆ ಬಂದ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳು ಸೋಮವಾರ ನಿಮಗೆ ಆರ್ಡರ್ ಕಾಪಿ ನೀಡುತ್ತೇನೆ ಎಂದು ಮಾತು ಕೊಟ್ಟರು. ಅದರಂತೆ ಜೂನ್ 1 ರ ಸೋಮವಾರ ಹೋಗಿ ಕುಲಪತಿಗಳನ್ನ ಭೇಟಿಯಾದಾಗ ಕುಲಪತಿಗಳು ಜೂನ್ 10ರ ತನಕ ನನಗೆ ಸಮಯ ಕೊಡಿ, ಅಲ್ಲಿಯವರೆಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದರು ಅದರಂತೆ 15 ದಿನಗಳ ಕಾಲ ನಾವು ಸಮಯವನ್ನು ನೀಡಿ, ಇಂದು ಬಂದು ಕೇಳಿದಾಗ ಕುಲಪತಿಗಳು ವಿದ್ಯಾರ್ಥಿಗಳ ನಡುವಿನ ಸೌಜನ್ಯಕ್ಕಾದರೂ ಮಾತನಾಡದೆ ಸಭೆ ನಡುವೆ ಎದ್ದು ಹೋಗಿ, ಅವರ ದಲಿತ ವಿರೋಧಿ ನಡೆಯನ್ನ ತೋರಿಸಿದ್ದಾರೆ. ಹಾಗಾಗಿ ನಾವುಗಳು ಕುಲಪತಿಗಳು ಬಂದು ನಮ್ಮ ಸಮಸ್ಯೆಯನ್ನು ಬಗೆಹರಿಸುವವರೆಗೂ ಈ ಸ್ಥಳದಿಂದ ಹೇಳುವುದಿಲ್ಲ ಎಂದು ಧರಣಿ ನಿರತರು ಹೇಳಿದರು. ಮಂಗಳವಾರವೂ ಧರಣಿಯನ್ನು ಮುಂದುವರಿಸಿದರು..
ಧರಣಿಯಲ್ಲಿ ಸಂಶೋಧಕರುಗಳಾದ, ನವೀನ್, ರವಿಕುಮಾರ್, ಮೌನ, ದೀಪ, ಸಣ್ಣಮಾದು, ಸಿದ್ಧರಾಜು, ಶಿವರಾಜು ದಸಂಸ ಜಿಲ್ಲಾ ಸಂಚಾಲ ಚೋರನಹಳ್ಳಿ, ಎಡದೊರೆ ಮಹದೇವಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.