
ಬೆಂಗಳೂರು; ಮಧುಮೇಹ ಸೇರಿದಂತೆ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ನೇರಳೆ ಹಣ್ಣು,
ಈ ಬಾರಿ ವಿಪರೀತ ಎನ್ನಿಸುವಷ್ಟು ಫಸಲು ಬಿಟ್ಟಿದೆ. ಕಳೆದ 30-40 ವರ್ಷಗಳಿಗಿಂತಲೂ ಈ ಬಾರಿ ಅಧಿಕ ಫಸಲು ಬಂದಿದೆ ಹೇಳಲಾಗುತ್ತಿದೆ. ಈ ರೀತಿ ವಿಪರೀತ ಎನಿಸುವಷ್ಟು ಫಸಲು ಬಿಟ್ಟಿರುವುದು ರೈತರಿಗೂ ಸಕತ್ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ನೂರಾರು ವರ್ಷಗಳಿಂದ ಇರುವ ಗಾದೆ ಮಾತೊಂದು ಈ ವರ್ಷ ಹಿರಿಯರ ಬಾಯಲ್ಲಿ ಭಯಂಕಾರವಾದ ಸುದ್ದಿಯನ್ನು ಹೊರ ಹಾಕುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಅದೇನೆಂದರೆ, ಯಾವ ಬೇಸಿಗೆಯಲ್ಲಿ ನೇರಳೆ ಹಣ್ಣು ಹೀಗೆ ರಾಶಿ ರಾಶಿಯಾಗಿ ಬೀಳುತ್ತದೆಯೋ, ಆ ವರ್ಷ ಬರಗಾಲ ಆವರಿಸುತ್ತದೆ ಎನ್ನುವುದು. ನೇರಳೆ ಹಣ್ಣು ಹೇರಳವಾಗಿ ಬಂದ ವರ್ಷ ಬರಗಾಲ ಕಟ್ಟಿಟ್ಟದ್ದು ಎನ್ನುವುದು ಹಿರಿಯರ ಅನುಭವದ ಮಾತು.
ಆದರೆ, ಅಚ್ಚರಿಯ ವಿಷ್ಯ ಎಂದರೆ, ಹಿರಿಯರ ಮಾತಿಗೂ, ವಿಜ್ಞಾನಕ್ಕೂ ಸಂಬAಧವಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಕೂಡ ಇದಾಗಲೇ ಹರಿದಾಡುತ್ತಿದೆ. ರಾಶಿ ರಾಶಿಯಾಗಿ ನೇರಳೆ ಹಣ್ಣುಗಳು ಬಿಟ್ಟರೆ ಅದು ನಿಜಕ್ಕೂ ಬರಗಾಲದ ಸೂಚನೆ ಎನ್ನುತ್ತದೆ ವಿಜ್ಞಾನ! ಇದಕ್ಕೆ ವೈಜ್ಞಾನಿಕ ಭಾಷೆಯಲ್ಲಿ ಮಾಸ್ಟಿಂಗ್ ಅಥವಾ ಸ್ಟೆçಸ್ ಫ್ರೂಟಿಂಗ್ ಎಂದು ಕರೆಯುತ್ತಾರೆ. ಇದರ ಅರ್ಥ, ಮರಗಳು ತಮ್ಮನ್ನು ತಾವು ಮುಗಿಸಿಕೊಂಡು ಗರಿಷ್ಠ ಹಣ್ಣು ಕೊಡುವ ಈ ಕೊನೆಯ ಪ್ರಯತ್ನ ಎನ್ನಲಾಗುತ್ತದೆ. ಇದನ್ನು ಮರಗಳ “ಸೂಸೈಡ್ ಫ್ರೂಟಿಂಗ್ ಅಥವಾ “ಬಂಪರ್ ಕ್ರಾಪ್” ಎಂದೂ ಕರೆಯುತ್ತಾರೆ.
ಇದನ್ನು ಅಸ್ತಿತ್ವದ ಹೋರಾಟ ಎಂದು ಕರೆಯಲಾಗುತ್ತದೆ. ಇದು ಪ್ರಕೃತಿಯ ‘ಜಾತಿಯನ್ನು ಉಳಿಸಿಕೊಳ್ಳುವ’ ನಿಯಮ. ಮರಕ್ಕೆ ಭೂಮಿಯೊಳಗಿನ ನೀರಿನ ಅಭಾವ ಅನಿಸಲು ಪ್ರಾರಂಭಿಸಿದಾಗ ಅಥವಾ ಹವಾಮಾನದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ಸೂಚನೆ ಸಿಕ್ಕಾಗ, ಮರವು “ರಕ್ಷಣಾತ್ಮಕ ಮೋಡ್” ಗೆ ಹೋಗುತ್ತದೆ. ಮರಕ್ಕೆ ಅನಿಸುತ್ತದೆ, ಬಹುಶಃ ಮುಂದಿನ ದಿನಗಳಲ್ಲಿ ನಾವು ಬದುಕದೇ ಇರಬಹುದು. ಆಗ ತನ್ನನ್ನು ಉಳಿಸಿಕೊಳ್ಳುವ ಬದಲು, ತನ್ನ ಪ್ರಜಾತಿ ಭೂಮಿಯ ಮೇಲೆ ಉಳಿಯಲಿ ಎಂದು ಮರವು ತನ್ನ ಸಂಪೂರ್ಣ ಶಕ್ತಿಯನ್ನು ‘ಬೀಜ’ (ಹಣ್ಣು) ತಯಾರಿಸಲು ಬಳಸುತ್ತದೆ.ಹೊಸ ಎಲೆ-ಕೊಂಬೆಗಳಿಗೆ ನಿಷೇಧ
ಅಂತಹ ವರ್ಷದಲ್ಲಿ ಮರವು ಹೊಸ ಚಿಗುರು ಬಿಡುವುದನ್ನು ಅಥವಾ ಕೊಂಬೆಗಳನ್ನು ಬೆಳೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಏಕೆಂದರೆ ಹೊಸ ಎಲೆಗಳನ್ನು ಬದುಕಿಸಲು ಹೆಚ್ಚು ನೀರು ಮತ್ತು ಆಹಾರ ಬೇಕಾಗುತ್ತದೆ. ಮರವು ಆ ಶಕ್ತಿಯನ್ನು ಉಳಿಸಿ ಕೇವಲ ನೇರಳೆ ಹಣ್ಣಿನ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದರಿಂದಲೇ ಕಳೆದ ವರ್ಷ ತೀರಾ ಕಡಿಮೆ ಹಣ್ಣು ಬಿಟ್ಟಿದ್ದ ಮರಗಳೂ ಈ ವರ್ಷ ಹಣ್ಣುಗಳಿಂದ ತುಂಬಿ ಹೋಗಿವೆ.
ನೇರಳೆ ಮರದ ಬೇರು ‘ಆಣಿ ಬೇರು’ ಆಗಿದ್ದು, ಭೂಮಿಯ ತೀರಾ ಆಳದ ಪದರದವರೆಗೂ ಹೋಗುತ್ತದೆ. ಭೂಗರ್ಭದ ನೀರಿನ ಮಟ್ಟ ವಿಪರೀತ ಕುಸಿದಾಗ ಮಾತ್ರ ಈ ಬೇರುಗಳಿಗೆ ಒತ್ತಡ ಅನಿಸುತ್ತದೆ. ಈ ನೀರಿನ ಒತ್ತಡವೇ ಮುಂದೆ ಬರುವ ಬರಗಾಲದ ಅಥವಾ ತೀವ್ರ ಬೇಸಿಗೆಯ ಸೂಚನೆಯಾಗಿರುತ್ತದೆ. ಅದಕ್ಕಾಗಿಯೇ, ಯಾವ ಬೇಸಿಗೆಯಲ್ಲಿ ನೇರಳೆಯ ಅಭೂತಪೂರ್ವ ಫಸಲು ಬರುತ್ತದೆಯೋ, ಅದು ಪ್ರಕೃತಿಯು ಭವಿಷ್ಯದ ಶುಷ್ಕ ಕಾಲದ ಬಗ್ಗೆ ನೀಡುವ ಎಚ್ಚರಿಕೆಯಾಗಿರುತ್ತದೆ