Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

11 ಮಂದಿ ರೋಗಿಗಳ ಸಾವಿನ ಪ್ರಕರಣದಲ್ಲಿ ಜಯದೇವ ಹೃದ್ರೋಗ ಸಂಸ್ಥೆಗೆ ಮಸಿ ಬಳಿಯುವ ಕೆಲಸ ಮಾಡಬೇಡಿ; ಡಾ.ದಿನೇಶ್


ಮೈಸೂರು; ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ 11 ಮಂದಿ ರೋಗಿಗಳ ಸಾವಿಗಿದೆ ಎಂಬ ಪ್ರಕರಣದಲ್ಲಿ ಆಸ್ಪತ್ರೆಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಹೇಳಿದರು.
ಬುಧವಾರ ಮೈಸೂರಿನ ಮೇಟಗಳ್ಳಿಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಬೋರ್ಡ್ ರೂಮ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ 11 ಜನ ಗೋಲ್ಡನ್ ಅವರ್ ಮೀರಿ ಬಂದವರು. ತೀವ್ರ ನಿಗಾ ಘಟಕದಲ್ಲಿ ಇಟ್ಟು ಔಷಧೋಪಚಾರ ಮಾಡಲಾಗುತ್ತಿತ್ತು. ಎಲ್ಲರೂ ಒಂದೇ ದಿನ ಅಡ್ಮಿಟ್ ಆಗಿಲ್ಲ. 11 ಜನರು ಇವರೆಲ್ಲರೂ ಹಾರ್ಟ್ ಅಟ್ಯಾಕ್ ಆಗಿ ಬಂದವರು. 11 ಜನರು ತುಂಬಾ ವಯಸ್ಸಾದವರು ಹಾಗೂ ತುಂಬಾ ಸಿಕ್ ಆಗಿ ಬಂದಿದ್ದರು. ಅವರು ಇಲ್ಲಿಗೆ ಬರುವವರಗೆ ಜೀವನ್ಮರಣದಿಂದ ಹೋರಾಟ ನಡೆಸಿದ್ದಾರೆ. ಜೊತೆಗೆ ಡಯಾಬಿಟಿಸ್ ರೋಗಿಗಳು ಆಗಿರುತ್ತಾರೆ, ಈತರದ ಸನ್ನಿವೇಶದಲ್ಲಿ 09% ನಷ್ಠೇ ರೋಗಿಗಳು ಬದುಕುವ ಸಾಧ್ಯತೆ ಇದೆ ಎಂದರು. ಆಸ್ಪತ್ರೆ ಯಲ್ಲಿ ವೈದ್ಯರ ಕೊರತೆ ಇರುವುದಿಲ್ಲ , ವೈದ್ಯರ ಕೊರತೆ ಸುಳ್ಳು ಆರೋಪ, ನಮ್ಮ ಆಸ್ಪತ್ರೆ ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿದೆ. ಕೆಲವು ಕಡೆ ತಪುö್ಪ ಸುದ್ದಿ ಹರಡಲಾಗಿದೆ.
ಆಸ್ಪತ್ರೆಯಲ್ಲಿ 40 ಜನ ವೈದ್ಯರು ಇದ್ದಾರೆ, 24 ಜನ ಕಾರ್ಡೀಯೋಲಾಜಿಸ್ಟ್ ಇದ್ದಾರೆ , 10 ಅನಸ್ಥಾಸಿಯೇಸ್ಟ್ , 01 ಸರ್ಜನ್ ಇದ್ದಾರೆ ಪೋಸ್ಟ್ ಗ್ರಾ÷್ಯಜುಯೇಟ್ಸ್ 10 ಜನ ವೈದ್ಯರು ಇದ್ದಾರೆ ಎಂದು ತಿಳಿಸಿದರು.
ಜಯದೇವ ಆಸ್ಪತ್ರೆಗೆ ಪ್ರತಿದಿನ 600 ರಿಂದ 800 ಜನ ರೋಗಿಗಳು ಬರುತ್ತಾರೆ , 20 % ಜನ ರೋಗಿಗಳು ತೀವ್ರ ಅನಾರೋಗ್ಯದಿಂದ ಬರುತ್ತಾರೆ. ರೋಗಿಗಳಿಗೆ ಚಿಕಿತ್ಸೆ ಕೊಡುವುದು ಹಾಗೂ ಬದುಕುಳಿಯಬೇಕು ಎನ್ನುವ ಉದ್ದೇಶದಿಂದ ಅಡ್ಮಿಟ್ ಮಾಡಿಕೊಳ್ಳಲಾಗುತ್ತದೆ. ಸಂಸ್ಥೆ ಹಣವನ್ನು ನೋಡಲ್ಲ , ಮೊದಲು ಚಿಕಿತ್ಸೆ ಕೊಡುತ್ತೇವೆ. ಇಲ್ಲಿರುವ ಡಾಕ್ಟರ್ ಡೆಡಿಕೇಷನ್ ಪದಕ್ಕೆ ಅನುಗುಣವಾಗಿ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.
ಕಳೆದ ಬೇಸಿಗೆ ಯಿಂದ ರೋಗಿಗಳ ಸಂಖ್ಯೆ ಹೆಚ್ಚಳ ಕಂಡಿದೆ, 5 ರಿಂದ 8 % ನಷ್ಟು ವೈದ್ಯರ ಅವಶ್ಯಕತೆ ಇದೆ. ರಾಜ್ಯಾದ್ಯಂತ 24 ವೈದ್ಯರ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಮುಂದಿನ ಒಂದು ತಿಂಗಳಲ್ಲಿ 200 ಬೆಡ್ ಗೆ ಕೊಟ್ಟಿದೆ ,ಇದರಲ್ಲಿ 60 ಬೆಡ್ ಐಸಿಯು ಬರಲಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಜಯದೇವ ಸಬ್ ಸೆಂಟರ್ ಮಾಡಲಿದ್ದೇವೆ, ಮುಂದಿನ ದಿನಗಳಲ್ಲಿ ಸುತ್ತಲೂ ಇರುವ ಜಿಲ್ಲೆಯಲ್ಲಿ ಸಬ್ ಸೆಂಟರ್ ಗಳನ್ನು ನಿರ್ಮಾಣ ಮಾಡಲಿದ್ದೇವೆ.
ಹಣ ಇರಲಿ, ಇಲ್ಲದಿರಲಿ , ಮೊದಲು ಚಿಕಿತ್ಸೆ ನೀಡುವ ಉದ್ದೇಶವನ್ನು ಜಯದೇವ ಹೃದ್ರೋಗ ಆಸ್ಪತ್ರೆ ಹೊಂದಿದೆ ಎಂದು ತಿಳಿಸಿದರು.