Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

14 ಮಂದಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ


ಮೈಸೂರು; ನಗರದಲ್ಲಿರುವ ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್‌ನಲ್ಲಿ 8-25 ವರ್ಷ ಸೇವೆ ಸಲ್ಲಿಸಿದ 14 ಮಂದಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವ ಕ್ರಮವನ್ನು ಖಂಡಿಸಿ, ಮೈಸೂರು ಡಿವಿಜನ್ ಯುನೈಟೆಡ್ ಇಂಡಸ್ಟಿçಯಲ್ ವರ್ಕಸ್ ಯೂನಿಯನ್‌ನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮೈಲ್ಯಾಕ್ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.
ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ (ಕರ್ನಾಟಕ ಸರ್ಕಾರದ ಉದ್ದಿಮೆ) ಸಂಸ್ಥೆಯಲ್ಲಿ ಶ್ರೀ ನಿಮಿಷಾಂಬಾ ಸೆಕ್ಯುರಿಟಿ ಬ್ಯೂರೋ & ಯುಟಿಲಿಟಿ ಸರ್ವೀಸಸ್ ಮೂಲಕ ಕಳೆದ 8 ರಿಂದ 25 ವರ್ಷಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ 32 ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಂಸ್ಥೆಯಲ್ಲಿ ಕಳೆದ ಸುಮಾರು 18 ವರ್ಷಗಳಿಂದ ಕಾರ್ಮಿಕರಿಗೆ ಕಾನೂನುಬದ್ಧ ಬೋನಸ್ ಪಾವತಿಸದೆ ಬಂದಿರುವ ಹಿನ್ನೆಲೆಯಲ್ಲಿ, ಸಂಘವು ಸಂಬAಧಿತ ಪ್ರಾಧಿಕಾರಗಳ ಮುಂದೆ ಬೋನಸ್ ಪ್ರಕರಣವನ್ನು ದಾಖಲಿಸಿದೆ. ಅದಲ್ಲದೆ ವೇತನ ಸಮಾನತೆ, ಸೇವಾ ಭದ್ರತೆ ಹಾಗೂ ಇತರೆ ಕೈಗಾರಿಕಾ ವಿವಾದಗಳು ಸಹ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿವೆ.
ಈ ವಿವಾದಗಳು ಬಾಕಿ ಇರುವಾಗಲೇ ಸಂಸ್ಥೆಯು ಹೊಸ ಗುತ್ತಿಗೆದಾರರನ್ನು ನೇಮಿಸಿದ್ದು, ಆರಂಭದಲ್ಲಿ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು ನಂತರ 14 ಕಾರ್ಮಿಕರಿಗೆ ಕೆಲಸ ನಿರಾಕರಿಸಲಾಗಿದೆ. ಮ್ಯಾನೇಜೈಂಟ್ “ಕೆಲಸದ ಇಲ್ಲ” ಎಂಬ ನೆಪ ಹೇಳುತ್ತಿದ್ದರೂ, ಬೋನಸ್ ಪ್ರಕರಣವನ್ನು ಹಿಂಪಡೆಯುವAತೆ ಪರೋಕ್ಷ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
8-25 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಕಾರ್ಮಿಕರನ್ನು ಯಾವುದೇ ನೋಟಿಸ್. ಪರಿಹಾರ ಅಥವಾ ಕಾನೂನು ಪ್ರಕ್ರಿಯೆ ಅನುಸರಿಸದೆ ಕೆಲಸದಿಂದ ಹೊರಗಿಡುವುದು ಸಂಪೂರ್ಣ ಅನ್ಯಾಯವಾಗಿದ್ದು, ಕೈಗಾರಿಕಾ ವಿವಾದಗಳ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಯೂನಿಯನ್ ನ ಪದಾಧಿಕಾರಿಗಳು, ಮುಖಂಡರು, ಕಾರ್ಮಿಕರು ಭಾಗವಹಿಸಿದ್ದರು.