
ಮೈಸೂರು; ವಿದ್ಯಾರ್ಥಿಗಳು ಸಮಯ ಪರಿಪಾಲನೆಯನ್ನು ಓದಿನಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಶಾರದಾವಿಲಾಸ ಸಂಸ್ಥೆಯ ಗೌರವ ಕಾರ್ಯದರ್ಶಿ ದಿನೇಶ್.ಆರ್ ಹೇಳಿದರು.
ಮೈಸೂರಿನ ಶಾರದಾವಿಲಾಸ ಪದವಿಪೂರ್ವಕಾಲೇಜಿನ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ನವಿಶೇಷ ಸಿಇಟಿ ಬೋಧನಾ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಾಲೇಜಿನಲ್ಲಿ ಸಿಗುವ ವಿಶೇಷ ಬೋಧನಾ ತರಗತಿಗಳ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಮುಂದೆ ಬರಬೇಕೆಂದು ತಿಳಿಸಿದರು. ತಾಳ್ಮೆಯಿಂದ ಏಕಾಗ್ರತೆಯಲ್ಲಿ ಓದಿನಲ್ಲಿ ತೊಡಗಿದಾಗ ಗುರಿಯನ್ನು ಹಾಗೂ ಜೀವನದಲ್ಲಿ ಯಶಸ್ಸನ್ನು ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಿ ಮುಂಬರುವ ಪರೀಕ್ಷೆಯ ಫಲಿತಾಂಶದಲ್ಲಿ ಗಣನೀಯ ಪ್ರಮಾಣದಲ್ಲಿ ತೇರ್ಗಡೆ ಹೊಂದಿ ಕೀರ್ತಿಯನ್ನು ತರಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಂತೋಷ್ ಮಾತನಾಡಿ, ಪಠ್ಯಪುಸ್ತಕಗಳನ್ನು ನಿರಂತರವಾಗಿ ಓದಿದಾಗ ಮಾತ್ರ, ಹೆಚ್ಚಿನ ಫಲಿತಾಂಶ ಬರಲು ಸಾಧ್ಯವಾಗುತ್ತದೆ.ಒಂದು ನಿಮಿಷದ ಅವಧಿಯಲ್ಲಿ ಉತ್ತರಿಸುವ ಸುಲಭ ವಿಧಾನಗಳನ್ನು ಸ್ಮಾರ್ಟ್ ವರ್ಕ್ಗಳ ಮೂಲಕ ನಾವು ತರಗತಿಗಳಲ್ಲಿ ಕಲಿಸಿಕೊಡುತ್ತೇವೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಕೆ.ಅಶೋಕ್ ಕುಮಾರ್ ಮಾತನಾಡಿ, ಮೊಬೈಲ್ ಹಾಗೂ ಟಿವಿ ಗೀಳನ್ನು ಬಿಟ್ಟು ಇಂದಿನ ಯುವಕರು ಓದಿನಲ್ಲಿ ತೊಡಗಿಸಿಕೊಳ್ಳಬೇಕು.ಶಿಸ್ತನ್ನು ಬೆಳಸಿಕೊಂಡು ಪರಿಶ್ರಮ ಮತ್ತು ಏಕಾಗ್ರತೆಯಲ್ಲಿ ಓದಿದಾಗ ಮಾತ್ರ ಸಾಧನೆ ಸುಲಭವಾಗುತ್ತದೆ ಮತ್ತು ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಸತ್ಯನಾರಾಯಣ್, ಇಂಟಿಗ್ರೆಟೆಡ್ ವಿಭಾಗದ ಸಂಚಾಲಕ ರಶ್ಮಿ ಎಂ.ಕೆ, ಜೀವಶಾಸ್ತç ವಿಭಾಗದ ಮುಖ್ಯಸ್ಥ ಹೆಚ್.ಆರ್.ಪರಮೇಶ್, ರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಡಾ.ಡಿ.ಸಿ.ಉಮೇಶ್, ಹಿರಿಯಉಪನ್ಯಾಸಕರಾದ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಕಾವ್ಯಾಶ್ರೀ ಆರ್‌ರಾವ್, ದಿವ್ಯಾ, ಸಂದೇಶ್ ಉಪಸ್ಥಿತರಿದ್ದರು.