3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಣ್ಣಿನ ಆರೋಗ್ಯವನ್ನು ಕಾಪಾಡುವುದರ ಮೂಲಕ ಬೆಳೆಗಳ ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸಬಹುದು


ಮೈಸೂರು ಹಾಗೂ ಹೆಚ್.ಡಿ. ಕೋಟೆತಾಲೂಕಿನಲ್ಲಿ ಖೇತ್ ಬಚಾವ್ ಅಭಿಯಾನ ಕಾರ್ಯಕ್ರಮ

ಮೈಸೂರು; ಜಿಲ್ಲೆಯ ಎಚ್.ಡಿಕೋಟೆ ತಾಲ್ಲೂಕಿನ ಕಂದೇಗಾಲ ಗ್ರಾಮ ಹಾಗೂ ಮೈಸೂರು ತಾಲ್ಲೂಕಿನ ಬರಡನಪುರ ಗ್ರಾಮದಲ್ಲಿ ಸುತ್ತೂರಿನ ಐಸಿಎಆರ್–ಜೆಎಸ್‌ಎಸ್ ಕೃಷಿವಿಜ್ಞಾನ ಕೇಂದ್ರವು ಮೈಸೂರಿನ ಕೃಷಿ ಇಲಾಖೆ ಸಹಯೋಗದೊಂದಿಗೆ“ಖೇತ್‌ಬಚಾವೋಅಭಿಯಾನ”ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಜ್ಞಾನೇಶ್ ಬಿ.ಎನ್. ರವರು “ಖೇತ್ ಬಚಾವೋ ಅಭಿಯಾನ”ದ ಮಹತ್ವವನ್ನು ವಿವರಿಸಿ, ಕೃಷಿ ಭೂಮಿ ಹಾಗೂ ಮಣ್ಣಿನ ಪುನಶ್ಚೇತನದ ಅಗತ್ಯತೆಯನ್ನು ತಿಳಿಸಿದರು. ಮಣ್ಣಿನ ಆರೋಗ್ಯವನ್ನು ಕಾಪಾಡುವುದರ ಮೂಲಕ ಬೆಳೆಗಳ ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸಬಹುದೆಂದು ಕಿವಿಮಾತು ಹೇಳಿದರು. ಕೃಷಿಯಲ್ಲಿಜೈವಿಕ ಗೊಬ್ಬರಗಳು ಮತ್ತು ಜೈವಿಕ ಶಿಲೀಂಧ್ರನಾಶಕಗಳ ಬಳಕೆಯ ಕುರಿತುಅರಿವು ಮೂಡಿಸಿದರು. ಮಣ್ಣಿನ ರಸ ಸಾರದ ಮಹತ್ವದ ಕುರಿತು ಮಾತನಾಡಿ, ಕೃಷಿಯಲ್ಲಿ ಕಳೆನಾಶಕಗಳ ಬಳಕೆ ಕಡಿಮೆ ಮಾಡಿ ಮಣ್ಣಿನ ಫಲವತ್ತತೆ ಹಾಗು ಮಣ್ಣಿನತೇವಾಂಶವನ್ನು ಕಾಪಾಡಿಕೊಳ್ಳಲು ಹಸಿರೆಲೆ ಗೊಬ್ಬರಗಳನ್ನು ಬಳಸಿ ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನಕೇಂದ್ರ ಬೇಸಾಯ ಶಾಸ್ತ್ರದ ವಿಷಯ ತಜ್ಞ ಶಾಮರಾಜ್‌ರವರು, ಸುಧಾರಿತ ಬೇಸಾಯ ಕ್ರಮಗಳು, ಮುಸುಕಿನ ಜೋಳದ ಸಮಗ್ರ ಬೆಳೆ ನಿರ್ವಹಣೆ, ಹಾಗೂ ರೋಗಗಳ ಬಾಧೆಗಳ ಮತ್ತು ಅವುಗಳ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಸ್ಯಸಂರಕ್ಷಣೆ ವಿಷಯ ತಜ್ಞ ಡಾ. ವೈ.ಪಿ. ಪ್ರಸಾದ್‌ರವರು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು, ರಾಸಾಯನಿಕ ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನುಕಡಿಮೆ ಮಾಡಿ, ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದುಕರೆನೀಡಿದರು. ತೋಟಗಾರಿಕೆ ವಿಷಯತಜ್ಞರಾದಡಾ. ವಿನಯ್‌ಜಿ.ಎಂ. ರವರು ನೈಸರ್ಗಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು, ಸ್ಥಳೀಯವಾಗಿ ಲಭ್ಯವಿರುವ ಕೃಷಿ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳ ಸಾವಯವಕೃಷಿಯಲ್ಲಿ ಬೆಳೆಯವುದರ ಕುರಿತು ಮಾಹಿತಿ ನೀಡಿದರು.
ಗೃಹ ವಿಜ್ಞಾನದ ವಿಷಯ ತಜ್ಞ ಡಾ. ದೀಪಕ ರವರು, ಮನೆಯ ಬಳಕೆಗಾಗಿ ಸುರಕ್ಷಿತ ಮತ್ತು ಪೌಷ್ಟಿಕ ತರಕಾರಿಗಳನ್ನು ಉತ್ಪಾದಿಸಲು, ಕುಟುಂಬದ ಪೋಷಣೆಯನ್ನು ಸುಧಾರಿಸಲು ಮತ್ತು ತರಕಾರಿಗಳ ಮೇಲಿನ ವೆಚ್ಚವನ್ನುಕಡಿಮೆ ಮಾಡಲು ಕೈತೋಟಗಳನ್ನು ಸ್ಥಾಪಿಸುವುದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ಕೃಷಿ ಹಾಗೂ ತೋಟಗಾರಿಕೆಯಲ್ಲಿ ವಿವಿಧಕೇಂದ್ರ ಹಾಗೂ ರಾಜ್ಯ ಸರ್ಕಾದರ ವಿವಿಧ ಉದ್ಯಮಶೀಲತೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಹೆಚ್.ಡಿಕೋಟೆತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್‌ರವರು ಕೃಷಿಯಲ್ಲಿ ಕೊಟ್ಟಿಗೆ ಹಾಗೂ ಹಸಿರೆಲೆಗೊಬ್ಬರಗಳ ಮಹತ್ವ ಕುರಿತು ತಿಳಿಸಿದರು. ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬೆಂಗಳೂರಿನ ಪ್ರಾದೇಶಿಕ ಕೇಂದ್ರೀಯ ಸಮಗ್ರ ಸಸ್ಯ ಪೀಡೆ ನಿರ್ವಹಣಾ ಕೇಂದ್ರದ ಸಹಾಯಕ ಸಸ್ಯ ಸಂರಕ್ಷಣಾಧಿಕಾರಿ ಪ್ರವೀಣ್‌ಎ.ಎಸ್‌ರವರು ಬೆಳೆಗಳಲ್ಲಿ ಬರುವ ಕೀಟನಾಶಕಗಳ ಸುರಕ್ಷತಾ ಕ್ರಮಗಳು ಹಾಗೂ ವಿವಿಧ ಮಿತ್ರಕೀಟಗಳು ಹಾಗೂ ಕೀಟನಾಶಕಗಳ ಬಳೆಕೆಯ ಕುರಿತುತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.