3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಹೋಂಗಾರ್ಡ್ ಸಾವು, ಮತ್ತೊಬ್ಬನಿಗೆ ಗಾಯ


ಹುಣಸೂರು; ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿ ಮನೆಗೆ ವಾಪಸ್ ಅಗುವ ವೇಳೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್‌ಕಂಬಕ್ಕೆ ಡಿಕ್ಕಿ ಹೊಡೆದು ಹೋಂಗಾರ್ಡ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ಹುಣಸೂರು ತಾಲೂಕಿನ ವಡೇರಹೊಸಹಳ್ಳಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಹುಣಸೂರು ತಾಲೂಕಿನ ವಡೇರಹೊಸಹಳ್ಳಿಯ ದಾಸೇಗೌಡರ ಪುತ್ರ ಹುಣಸೂರು ಘಟಕದ ಹೊಂಗಾರ್ಡ್ ವಿ.ಡಿ. ಹರೀಶ (33) ಸಾವನ್ನಪ್ಪಿದವರು . ಇವರಿಗೆ ತಂದೆ-ತಾಯಿ. ಪತ್ನಿ. ಒಬ್ಬ ಮಗ ಇದ್ದಾನೆ. ಬೈಕ್ ಸವಾರ ಪ್ರಕಾಶ್ ಗಾಯಗೊಂಡು ಬಿಳಿಕೆರೆ ಸೂರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹುಣಸೂರು ನಗರ ಠಾಣೆಯಲ್ಲಿ ರಾತ್ರಿ ಕರ್ತವ್ಯ ಮುಗಿಸಿ ಮುಂಜಾನೆ 5.10 ರ ವೇಳೆಯಲ್ಲಿ ಮನೆಗೆ ತೆರಳುವ ವೇಳೆ ಬೈಕ್ ಕೆಟ್ಟಿದ್ದರಿಂದ ಮನೆಗೆ ಪೋನ್ ಮಾಡಿ ಮಾವನನ್ನು ಬರಲು ಹೇಳಿ ಮಾವ ಪ್ರಕಾಶ್ ಬೈಕಿನಲ್ಲಿ ಸ್ವಗ್ರಾಮಕಕ್ಕೆ ಹೋಗುತ್ತಿದ್ದ ವೇಳೆ ವಡೇರ ಹೊಸಹಳ್ಳಿ ಸಮೀಪದ ರಸ್ತೆಬದಿಯಲ್ಲಿ ಇತ್ತೀಚೆಗೆ ಅಳವಡಿಸಿದ್ದ ವಿದ್ಯುತ್ ಕಂಬ ಕುಸಿದು ರಸ್ತೆ ಕಡೆಗೆ ಬಾಗಿತ್ತು. ಗಮನಿಸದ ಬೈಕ್ ಸವಾರ ಡಿಕ್ಕಿ ಹೊಡೆದ ರಭಸಕ್ಕೆ ಪ್ರಕಾಶ ಬೈಕ್ ನಿಂದ ಹಾರಿ ಬಿದ್ದು ಸಣ್ಣಪುಟ್ಟಗಾಯಗೊಂಡು ಬಿಳಿಕೆರೆಯ ಆಸ್ಪತ್ರೆಗೆ ದಾಖಲಾಗಿದ್ದರೆ. ಹರೀಶ ಎದೆಗೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈಸಂಬAಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಇನ್ಸ್ ಪೆಕ್ಟರ್ ಪುನಿತ್ ಭೇಟಿ ಇತ್ತು ಪರಿಶೀಲಿಸಿದರು.
ಹೊಂಗಾರ್ಡ್ ಜಿಲ್ಲಾ ಡೆಪುö್ಯಟಿ ಕಮಾಂಡೆAಟ್ ಸುದರ್ಶ ನ್ ರಾವ್ ಗಾಯಕ್ ವಾಡ್, ಘಟಕಾಧಿಕಾರಿ ಸಂಪತ್ ಕುಮಾರ್, ಸಹಾಯಕ ಭೋದಕ ಮಂಜುನಾಥ್ ಹಾಗೂ ಸಹೊದ್ಯೋಗಿಗಳು ಭೇಟಿ ಇತ್ತು ಅಂತಿಮ ದರ್ಶನ ಪಡೆದರು.