3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೂನ್ 21ರಾಮಸಮುದ್ರದಲ್ಲಿ ಧಾರ್ಮಿಕ ಪೂಜೆ. ಬೆಳ್ಳಿ ಕಂಡಾಯ. ಪುಟಾಣಿ ಮಕ್ಕಳ ಹಾಲುರವೆ ಮೆರವಣಿಗೆ


ವರದಿ ಜಿ ಬಂಗಾರು
ಚಾಮರಾಜನಗರ. ಜೂನ್ 20;
ರಾಮಸಮುದ್ರದ ನಾಯಕರ ಬಡಾವಣೆಯಲ್ಲಿ
ಶ್ರೀ ಆಂಜನೇಯಸ್ವಾಮಿ, ಶ್ರೀ ಮಹರ್ಷಿ ವಾಲ್ಮೀಕಿ,ರಾಜವೀರ ಮದಕರಿನಾಯಕ ಪುತ್ಥಳಿಗಳು ಮತ್ತು ನೂತನವಾಗಿ ನಿರ್ಮಿಸಿರುವ ಮಹಾದ್ವಾರ ಉದ್ಘಾಟನೆ ಪೂಜಾ. ಹೋಮ ಪುಟಾಣಿ ಮಕ್ಕಳ ಹಾಲುರವೆ ಮಂಟೆಸ್ವಾಮಿ ದೇವರ ಮೆರವಣಿಗೆಮಹೋತ್ಸವದ
ದಿನಾಂಕ 21.6,2026 ಭಾನುವಾರ ಬೆಳಿಗ್ಗೆ 4. 15, ರಿಂದ 5.45, ಹೋಮ , ನಡೆಯಲಿದೆ.5,45, ಗೋಪೂಜೆ. 6,15. ಊರಿನ ಪ್ರಮುಖ ಬೀದಿಗಳಲ್ಲಿ ಪುಟಾಣಿ ಮಕ್ಕಳ ಹಾಲರವೆ, ಹಾಗೂ ಬೆಳ್ಳಿ ಕಂಡಾಯ. ಮಂಟೇಸ್ವಾಮಿ ದೇವರ ಉತ್ಸವ ಮೆರವಣಿಗೆ. ರಾಮ ಸಮುದ್ರದ ಸುಭದಾರ್ ಕಟ್ಟೆ. ಗಣಪತಿ ದೇವಸ್ಥಾನದಿಂದ ಪ್ರಾರಂಭವಾಗಿ. ಊರಿನ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಯಲಿದೆ ಭಕ್ತಾದಿಗಳು ತಮ್ಮ ತಮ್ಮ ಮನೆಗಳ ಮುಂದೆ ಸ್ವಚ್ಛಗೊಳಿಸಿ, ರಂಗೋಲಿಯಿಂದ ಅಲಂಕರಿಸಿ ದೇವರಿಗೆ ಪೂಜೆ ಸಲ್ಲಿಸಿ ಪೂಜಾ ದೇವರ ದರ್ಶನ ಪಡೆಬೇಕೆಂದು ವಿನಂತಿ
ನಂತರ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ, ಶ್ರೀ ಮಹರ್ಷಿ ವಾಲ್ಮೀಕಿ ಪೀಠದ ಜಗದ್ಗುರು
ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಗಳು ಸ್ವಾಮಿಗಳು.
ಶ್ರೀ ಆಂಜನೇಯ ದೇವರು. ಶ್ರೀ ವಾಲ್ಮೀಕಿ ದೇವರು. ಶ್ರೀ ರಾಜ ವೀರ ಮದಕರಿ ನಾಯಕ ಪುತ್ಥಳಿಗಳು, ಹಾಗೂ ನೂತನವಾಗಿ ನಿರ್ಮಿಸಿರುವ ಅರಳುಕೋಟೆ ಮುಖ್ಯ ದ್ವಾರ ಚಾಲನೆ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ. ಹಾಗೂ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ, ನಾಯಕ ಸಂಘದ ಅಧ್ಯಕ್ಷ ಎಂ ರಾಮ ಚಂದ್ರು ರವರು
ಮುಖ್ಯ ಅತಿಥಿಯಾಗಿ ನಗರಸಭೆ ಮಾಜಿ ಅಧ್ಯಕ್ಷ ರಾಮಸಮುದ್ರದ ಸುರೇಶ್ ‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ. ರಾಮಸಮುದ್ರದ ಜಿ ಚಂದ್ರಶೇಖರ್. ನಗರಸಭೆ ಮಾಜಿ ಉಪಾಧ್ಯಕ್ಷೆ ಸುಧಾ ಭಾಗವಹಿಸಲಿದ್ದಾರೆ. ನಂತರ 5000 ಹೆಚ್ಚು ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಊರಿನ ಮುಖಂಡರು ಗ್ರಾಮಸ್ಥರು ಆಗಮಿಸಿ ಯಶಸ್ವಿಯಾಗಿ ನಡೆಸಿಕೊಳ್ಳಬೇಕು ಎಂದು. ರಾಮಸಮುದ್ರ ನಾಯಕ ಜನಾಂಗದ ಯಜಮಾನರು. ಶ್ರೀ ವೀರ ಮದಕರಿ ನಾಯಕ ಸಂಘ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮಹಾದ್ವಾರ ಉಸ್ತುವಾರಿ ಸಮಿತಿಯ ಎಲ್ಲಾ ಸದಸ್ಯರು ಮನವಿ ಮಾಡಿದ್ದಾರೆ