Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಂಗೀತ ಕ್ಷೇತ್ರದ ಸಾಧಕರಿಗೆ “ಕಲಾ ಸಾರಥಿ ಪ್ರಶಸ್ತಿ” ಪ್ರಧಾನ


ಮೈಸೂರು; ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಸಂಗೀತ ಕ್ಷೇತ್ರದ ಸಾಧಕರಿಗೆ “ಕಲಾ ಸಾರಥಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರಾದ ದೇವಾನಂದ ವರಪ್ರಸಾದ್, ಕಿರಗಸೂರು ಪುರುಷೋತ್ತಮ್,
ವಿದುಷಿ ಆರ್ ಸಿ ರಾಜಲಕ್ಷ್ಮಿ, ಕೆ.ಎಸ್.ಭವತಾರಣಿ, ಶಿವು ಕುಮಾರ್( ಬಿಳಿಕೆರೆ), ಅವರಿಗೆ ಕಲಾ ಸಾರಥಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ, ಸಂಗೀತ ಕ್ಷೇತ್ರದ ಕಲಾವಿದರ ಸಾಧನೆ ಮೈಸೂರಿಗೆ ದೊಡ್ಡ ಹೆಮ್ಮೆಯ ವಿಚಾರ. ಇಂತಹ ಕಲಾವಿದರಿಂದ ಮೈಸೂರಿನ ಸಾಂಸ್ಕೃತಿಕ ಹಿರಿಮೆ ಹೆಚ್ಚಿದೆ ಎಂದು ತಿಳಿಸಿದರು.
ನಗರಪಾಲಿಕೆಯ ಮಾಜಿ ಸದಸ್ಯ ಬಿ.ವಿ.ಮಂಜುನಾಥ್ ಮಾತನಾಡಿ, ಸಂಗೀತಕ್ಕೆ ಜಾತಿ, ಧರ್ಮ ಗಡಿಯ ಎಲ್ಲೇ ಇಲ್ಲ. ಅದನ್ನು ಮೀರಿದ ಸಾಧನೆ ನಮ್ಮ ಕಲಾವಿದರದು. ಇಂತಹ ಸಾದಕರ ಸನ್ಮಾನದಿಂದ ಮೈಸೂರಿಗೆ ಕೀರ್ತಿ ಬಂದಿದೆ ಎಂದರು, ಸಮಾಜ ಸೇವಕ ನವೀನ್ ಕುಮಾರ್ ಮಾತಾನಾಡಿ, ನಿಮ್ಮ ಈ ಸಾಧನೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ, ನಿಮ್ಮೋಡನೆ ಸದ ಜೊತೆಗಿದ್ದು ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿರಗಸೂರು ರಾಜಪ್ಪ, ಚಿತ್ರನಟ ಸುನೀಲ್, ರಾಜಣ್ಣ, ಟ್ರಸ್ಟ್ ನ ಅಧ್ಯಕ್ಷ ನಾಗಶ್ರೀ, ಸುಚೀಂದ್ರ, ರೂಪ, ಪ್ರಿಯಾ, ಲಾವಣ್ಯ ಮತ್ತಿತರರು ಹಾಜರಿದ್ದರು.