
ಮೈಸೂರು; ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನರಂಗ ಶಾಲೆಯಲ್ಲಿ ವಾರಂತ್ಯದಲ್ಲಿ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ.
ನಟನ ಪಯಣ ರೆಪರ್ಟರಿ ತಂಡದ ‘ಕಣಿವೆಯಹಾಡು’ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ಅವರದ್ದು.ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ಒದಗಿಸಿದ್ದಾರೆ.ನಟನದ ಶ್ರೀ ಮೇಘ ಸಮೀರ ಮತ್ತುದಿಶಾ ರಮೇಶ್ಅವರು ಅಭಿನಯಿಸುತ್ತಿದ್ದು, ನಾಡಿನ ಹೆಸರಾಂತ ರಂಗತಜ್ಞ ಡಾ.ಶ್ರೀಪಾದ ಭಟ್ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.
ಎಕ್ಸ್ಪಿರೀಯನ್ಸ್ ಮೈಸೂರು ಅವರ ಆಯೋಜನೆಯಲ್ಲಿ ಈ ನಾಟಕವು ಪ್ರದರ್ಶನಗೊಳ್ಳಲಿದೆ.
ಕಣಿವೆಯ ಹಾಡು ನಾಟಕದ ಕುರಿತು:ಮೂಲತಃದಕ್ಷಿಣಆಫ್ರಿಕಾ ನೆಲದ ಕತೆಯಿದು. ಆದರೆ,ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ.ಅಂತಹ ಪ್ರಯತ್ನವಿದು.ಕಣಿವೆಯ ಹಾಡು ಕಣಿವೆದಾಟುವ, ಕಣಿವೆಯೊಳಗಿನ ಬದುಕುತನ್ನ ಹಾಡು ಮುಂದುವರಿಸುವ ಸಂಘರ್ಷದಕತೆ ಇದು.
ಹಾಗೂ ಜೂನ್ 28ರಂದು ಸಂಜೆ06.30ಕ್ಕೆ ಕಲಾಧ್ಯಾನಇನ್ಸಿಟ್ಯೂಟ್ ಫಾರ್ರ್ಟ್÷್ಸ ಬೆಂಗಳೂರು ಅಭಿನಯಿಸುವ ಆರ್ ಕೆ ನಾರಾಯಣ ಅವರ ಸಣ್ಣಕಥೆಯಿಂದ ಸ್ಪೂರ್ತಿ ಪಡೆದ ಕನ್ನಡ ನಾಟಕ ‘ಕಥೆಗಾರ’ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಮತ್ತು ನಿರ್ದೇಶನ ವಿವೇಕ ಅವರದ್ದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ 7259537777, 9480468327, 9845595505ನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.