Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಟೀo ಮೈಸೂರು ವತಿಯಿಂದ ಹಸಿರು ಮೈಸೂರು ಅಭಿಯಾನಕ್ಕೆ ಚಾಲನೆ

ಮೈಸೂರು ; ಟೀo ಮೈಸೂರು ವತಿಯಿಂದ ಇಂದು 2026-27ನೇ ಸಾಲಿನ ಹಸಿರು ಮೈಸೂರು ಅಭಿಯಾನದ ಅಂಗವಾಗಿ ಮೈಸೂರು ಮಹಾನಗರದ ಐಶ್ವರ್ಯ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ಸೇರಿ ಬಡಾವಣೆಯ ಪಾರ್ಕ್ ನಲ್ಲಿ ಮೊದಲ ದಿನ ವಿವಿಧ ತಳಿಯ 32 ಗಿಡಗಳನ್ನು ನೆಟ್ಟು, ಟ್ರೀ ಗಾರ್ಡ್ ಹಾಕಿ, ಹಸಿರು ಮೈಸೂರು ಅಭಿಯಾನಕ್ಕೆಂದೆ ಕೊಂಡುಕೊಂಡಿರುವ ಟ್ಯಾಂಕರ್ ಇಂದ ನೀರು ಉಣಿಸಿ ಈ ವರ್ಷದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್ ಅವರು ಟೀo ಮೈಸೂರಿನ ಕಾರ್ಯವನ್ನು ಶ್ಲಾಘಿಸಿದರು. ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್ ರವರು ಗಿಡಗಳನ್ನು ನಮ್ಮ ಮನೆಯ ಮಕ್ಕಳಂತೆ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಹರಿ ಮಾತನಾಡಿ, ಕಳೆದ 13 ವರ್ಷಗಳಿಂದ ಈ ತಂಡವು ನಿರಂತರವಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದು ಇತರ ಸಂಘ ಸಂಸ್ಥೆಗಳಿಗೆ ಟೀo ಮೈಸೂರು ಮಾದರಿಯಾಗಿದೆ ಎಂದು ಹೇಳಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ  ಬಿ ಕೆ ರಮೇಶ್, ಮಹೇಶ್ , ರಾಘವೇಂದ್ರ, ಸ್ಥಳೀಯ ನಿವಾಸಿಗಳಾದ  ರಾಮಚಂದ್ರ,  ಚಿಕ್ಕಮ್ಮ , ನಿರ್ಮಲ,  ಲಕ್ಷ್ಮಿ,  ರಮೇಶ್,  ದೇವರಾಜ್,  ಜಗದೀಶ್, ಮಿಥುನ್,  ಪರಮೇಶ್,  ಆರಾಧ್ಯ,  ನವೀನ್,  ನಾಗರಾಜ್,  ಹರ್ಷ, ಯುಎಸ್ ಮಹೇಶ್ ಉಪಸ್ಥಿತರಿದ್ದರು.

ತಂಡದ ಕಿರಣ್ ಜೈರಾಮ್ ಗೌಡ, ಅನಿಲ್, ಮನೋಹರ್, ಬಳ್ಳಾರಿ ಬಸವರಾಜು, ಹರೀಶ್ ಶೆಟ್ಟಿ, ಹಿರಿಯಣ್ಣ, ರಾಮಪ್ರಸಾದ್, ಬಾಲಕೃಷ್ಣ, ಹರೀಶ್ ಗೋಕುಲಂ,  ಮಂಜು ಹುಣಸೂರು, ರಮೇಶ್, ಕೃಷ್ಣ, ಹರೀಶ್ ಫಾರ್ಮ, ರವಿ, ಶ್ರೀಮತಿ ಸಹನ ಶ್ರೀಮತಿ ಶಾಂತಕುಮಾರಿ, ಕುಮಾರಿ ಕಲ್ಯಾಣಿ, ಪುಟಾಣಿಗಳಾದ ನಯನಿತಾ, ಅದ್ವಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು