ಮೈಸೂರು: ಸಾಂಸ್ಕೃತಿಕ ದಬ್ಬಾಳಿಕೆಯ ಬಿಡುಗಡೆಗಾಗಿ ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ, ಸೂತ್ರಗಳನ್ನು ಪ್ರಾಣ ವಾಕ್ಯವಾಗಿಸಿಕೊಂಡು ಬದುಕಿದವರು ಕವಿಮುಳ್ಳೂರು ನಾಗರಾಜ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಗರದ ಕಲಾಮಂದಿರದಲ್ಲಿರುವ ಕಿರುರಂಗಮAದಿರದಲ್ಲಿ ಮೈಸೂರಿನ ನೆಲೆ ಹಿನ್ನೆಲೆ , ಚಾಮರಾಜ ನಗರದ ರಂಗವಾಹಿನಿ ಸಂಸ್ಥೆ ಹಾಗೂ ಡಾ. ರಾಮಮನೋಹರ ಲೋಹಿಯಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದ ಕಿರು ರಂಗಮAದಿರದಲ್ಲಿ ಆಯೋಜಿಸಿದ್ದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ 15ನೇ ವರ್ಷದ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಆಂದೋಲನ' ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಳ್ಳೂರು ನಾಗರಾಜ ಕೂಡ ಪಂಪ ಮತ್ತು ಬಸವಣ್ಣನ ಹಾದಿಯಲ್ಲಿ ನಡೆದರು. ಆದರೆ, ಕನ್ನಡ ಸಾಹಿತ್ಯದ ವಿಮರ್ಶಾ ಲೋಕ ರೋಗಗ್ರಸ್ತವಾಗಿದೆ. ಕಳಪೆ ಸಾಹಿತ್ಯವನ್ನು ವಿಜೃಂಭಿಸುವ ಬಾಲಬಡುಕರ ವಾತಾವರಣದಲ್ಲಿ ವಿಮರ್ಶಾ ಲೋಕ ಇದೆ. ಹೀಗಾಗಿ ಮುಳ್ಳೂರು ನಾಗರಾಜ ಅವರ ಸಾಹಿತ್ಯಕ್ಕೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದು ಹೇಳಿದರು. ಮುಳ್ಳೂರು ನಾಗರಾಜು ಶೋಷಿತರ ಮೇಲಿನ ಹಲ್ಲೆ, ಅತ್ಯಾಚಾರ, ಹತ್ಯೆ ಹಾಗೂ ಅಪಮಾನದ ವಿರುದ್ಧ ದಲಿತ ಸಂಘರ್ಷ ಸಮಿತಿ ರೂಪಿಸಿದ ಧರಣಿ, ಸತ್ಯಾಗ್ರಹ, ಜಾಥಾಗಳಲ್ಲಿ ನಡೆದವರು. ಹಸಿವು, ಬಡತನ, ಅಭದ್ರತೆಗಳನ್ನು ಸಾಯುವ ಕೊನೆಯ ವರೆಗೆ ತಮ್ಮ ಬೆನ್ನಿಗೆ ಕಟ್ಟಿಕೊಂಡು ಬಾಳಿದವರು ಎಂದು ಸ್ಮರಿಸಿದರು. ಮುಳ್ಳೂರು ನಾಗರಾಜ ಮತ್ತುಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರನ್ನು ಕುರಿತು ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ರಾಜಶೇಖರ ಕೋಟಿ ಅವರನ್ನು ಒಂಟಿ ಕಾಲಿನ ತಪಸ್ವಿ ಎಂದಿದ್ದರು. ಹಾಗೆಯೇ ಕೋಟಿ ಅವರು ಒಂಟಿ ಕಾಲಿನ ಓಟಗಾರ ಕೂಡ. ಕೋಟಿ ಅವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸಂದಿಗ್ಧತೆಯಲ್ಲಿ ತನ್ನ ಬದುಕನ್ನು ಕಟ್ಟಿ ಆಂದೋಲನ' ದಿನಪತ್ರಿಕೆಯನ್ನು ಸೃಷ್ಟಿಸಿದರು ಎಂದರು. ಪತ್ರಿಕೆಯೊAದರಿAದಲೇ ರಾಜಶೇಖರ ಕೋಟಿ ಅವರನ್ನು ಅರ್ಥ ಮಾಡಿಕೊಳ್ಳಲಾಗದು. ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ರಾಜಶೇಖರ ಕೋಟಿ ಅವರುಆಂದೋಲನ’ ಮಾಡಿದ್ದಾರೆ. ಒಬ್ಬ ಪತ್ರಕರ್ತ ಎಷ್ಟೋ ಎತ್ತರಕ್ಕೆ ಬೆಳೆಯ ಬಹುದು. ಆದರೆ, ಆಳಕ್ಕೆ ಇಳಿಯಬೇಕು. ಕೋಟಿ ಅವರು ಸಮಾಜದ ಆಳಕ್ಕೆ ಇಳಿದವರು ಎಂದು ಹೇಳಿದರು.
ಇದೇ ವೇಳೆ ಕವಿ ಎಸ್. ಮಂಜುನಾಥ ಅವರಿಗೆ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕöÈತರ ಕುರಿತು ಡಾ.ತ್ರಿವೇಣಿ ಮಾತನಾಡಿದರು. ಹಿರಿಯ ಕವಿ ಸುಬ್ಬು ಹೊಲೆಯಾರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಗೋಪಾಲಕೃಷ್ಣ, ಚಾಮರಾಜನಗರ ಜಿಲ್ಲೆ ಹನೂರಿನ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ನಂಜುAಡಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೇವಾನಂದ ವರಪ್ರಸಾದ್ ಮತ್ತು ತಂಡದವರು ಪ್ರಾರ್ಥಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿ ಎಂ.ಎನ್.ಪ್ರೇಮಕುಮಾರಿ ನಿರೂಪಿಸಿದರು. ಮುಳ್ಳೂರು ನಾಗರಾಜ ಅವರ ಪತ್ನಿ ಪುಟ್ಟಲಕ್ಷಿ÷್ಮ, ಪುತ್ರ ಕಿರಣ್, ಹಿರಿಯ ಪತ್ರಕರ್ತ ರಾದ ಮುಳ್ಳೂರು ರಾಜು, ಮಲೆಯೂರು ಸೋಮಯ್ಯ, ಪ್ರೊ.ಡಿ.ಆನಂದ್, ಸಿ.ಹರ ಕುಮಾರ್, ಪರಶಿವ ಮೂರ್ತಿ, ಬದನವಾಳು ಬಸವಣ್ಣ, ಡಾ.ಮಧುಸೂದನ್, ಹಾಸನ ಕೃಷ್ಣಮೂರ್ತಿ, ಡಿ.ಈರೇಶ್ ನಗರ್ಲೆ, ಚಂದನಾರಾಜು, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಕವಿಗಳಾದ ಸೋಸಲೆ ಗಂಗಾಧರ್, ಗೋವಿಂದ ಗುಂಡಾಪುರ, ಜಯಶಂಕರ್ ಮೇಸ್ತಿç, ತುಕಾರಾಮ್ ಚಂಡಾಳ, ದಸಂಸದ ಶಂಭಯ್ಯ, ಡಾ.ಮ.ಪು.ಪೂರ್ಣಾನಂದ, ಡಾ.ಎಂ.ಸಿ. ಮನೊಹರ, ಹಾಸನ ಕೃಷ್ಣದಾಸ್, ಸವಿತಾ ಪ.ಮಲ್ಲೇಶ್, ಹಗಿನವಾಳು ಚಿಕ್ಕಣ್ಣ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಸದಸ್ಯರಾದ ಕಲ್ಲಳ್ಳಿ ಕುಮಾರ್, ಮಂಜು, ಮೋಹನ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದಬ್ಬಾಳಿಕೆಯ ಬಿಡುಗಡೆಗಾಗಿ ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ, ಸೂತ್ರಗಳನ್ನು ಪ್ರಾಣ ವಾಕ್ಯವಾಗಿಸಿಕೊಂಡು ಬದುಕಿದವರು ಕವಿಮುಳ್ಳೂರು ನಾಗರಾಜ; ಎಸ್.ಜಿ.ಸಿದ್ದರಾಮಯ್ಯ
ಮೈಸೂರು: ಸಾಂಸ್ಕöÈತಿಕ ದಬ್ಬಾಳಿಕೆಯ ಬಿಡುಗಡೆಗಾಗಿ ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ, ಸೂತ್ರಗಳನ್ನು ಪ್ರಾಣ ವಾಕ್ಯವಾಗಿಸಿಕೊಂಡು ಬದುಕಿದವರು ಕವಿಮುಳ್ಳೂರು ನಾಗರಾಜ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.