
ಮೈಸೂರು; ಪ್ರತಿ ಮಕ್ಕಳಲ್ಲೂ ನಾಯಕತ್ವದಗುಣ ಬೆಳೆಸಿ, ಗುರಿ ಸಾಧಿಸುವ ಮನೋಬಲ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳ ಪ್ರಮುಖ ಭಾಗವಾಗಬೇಕಿದೆ ಎಂದು ಮಹಾರಾಣಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ವಿಭಾಗದ ನಿರ್ದೇಶಕಿ ಡಾ. ಡಿ ರಮಣಿ ಹೇಳಿದರು.
ಮೈಸೂರಿನ ಆರ್.ಟಿ ನಗರ ನೈಪುಣ್ಯ ಸ್ಕೂಲ್‌ಆಫ್‌ಎಕ್ಸಲೆನ್ಸ್ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕ್ರಿಯಾಶೀಲತೆಯಲ್ಲಿ ಬದ್ಧತೆ ಹೆಚ್ಚಿಸಲು ನಾಯಕತ್ವದಗುಣ ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ, ಸಹಭಾಗಿತ್ವ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ಆಯೋಜಿಸುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕು. ಎಂದು ಸಲಹೆ ನೀಡಿದರು.
ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದತ್ತ ಮುನ್ನುಗ್ಗುತ್ತಿದ್ದು, ಈ ಸಂದರ್ಭದಲ್ಲಿ ಭವಿಷ್ಯತ್ತಿನ ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವುದು ಶಿಕ್ಷಣ ಸಂಸ್ಥೆಗಳ ಆದ್ಯಕರ್ತವ್ಯ ವಾಗಿದ್ದು, ಹಿಂದೆAದಿಗಿAತಲೂ ಇಂದು ರಾಷ್ಟ್ರ ನಿಷ್ಠೆಯ ಸಮರ್ಪಣಾ ಗುಣ ಭವಿಷ್ಯತ್ತಿನ ಮಕ್ಕಳು ರೂಢಿಸಿಕೊಳ್ಳುವಂತಾಗಲು ಶಿಸ್ತು, ಸಂಯಮ ಮೈಗೂಡಿಸಿಕೊಳ್ಳುವಂತೆ ಪ್ರೇರಣಾದಾಯಕ ಕಾರ್ಯಕ್ರಮಗಳು ಶಿಕ್ಷಣ ಚಟುವಟಿಕೆಯ ಭಾಗವಾಗಬೇಕು. ನಾಯಕತ್ವವೆಚಿದರೆ ಅಧಿಕಾರವಲ್ಲ, ಸೇವೆ. ವಿದ್ಯಾರ್ಥಿ ನಾಯಕರು ಆತ್ಮವಿಶ್ವಾಸ, ವಿನಯ ಮತ್ತು ಜವಾಬ್ದಾರಿಯಿಂದ ಮುನ್ನಡೆಯಬೇಕು ಎಂದು ತಿಳಿಸಿದರು.
ದೇಶ ಬೆಳೆದಂತೆ ಸವಾಲುಗಳೂ ಅಷ್ಟೇ ಪ್ರಮಾಣದಲ್ಲಿಎ ದುರಾಗುತ್ತವೆ. ಈ ನಿಟ್ಟಿನಲ್ಲಿ ಭಾರತೀಯರು ತಮ್ಮ ಮಕ್ಕಳಿಗೆ ದೇಶಕಟ್ಟುವ ರಾಷ್ಟ್ರ ಪ್ರೇಮವನ್ನು ಪ್ರೇರೇಪಿಸಲು ಬೆಂಬಲವಾಗಿ ನಿಲ್ಲಬೇಕೆಂದು ಹೇಳಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದಕಗಳನ್ನು ತೊಡಿಸಿ, ಪ್ರತಿಜ್ಞಾ ನುಡಿಗಳನ್ನು ಬೋಧಿಸಿ, ವಿವಿಧ ಹುದ್ದೆಗಳನ್ನು ನೀಡಿ ಜವಾಬ್ದಾರಿಯನ್ನು ವಹಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬಿಎಸ್‌ಇ ಪಠ್ಯಕ್ರಮದ ಪ್ರಾಂಶುಪಾಲ ಬಿ.ಆರ್. ಗುರುಪ್ರಸಾದ್ (ಸಿಬಿಎಸ್‌ಇ), ಐಸಿಎಸ್‌ಇ ಪಠ್ಯಕ್ರಮದ ಪ್ರಾಂಶುಪಾಲೆ ಕೆ.ಎಸ್.ದೇಚಮ್ಮ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.