Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಂಬೇಡ್ಕರ್ ಅವರ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು : ಡಾ. ಶಿವಕುಮಾರ್


ಮೈಸೂರು : ವಿದ್ಯಾರ್ಥಿಗಳು ಅಂಬೇಡ್ಕರ್ ಪುಸ್ತಕಗಳನ್ನು ಓದುವುದರೊಂದಿಗೆ ಜ್ಞಾನವನ್ನು ವೃದ್ಧಿಸಿಕೊಂಡು ಸಾಮಾಜಿಕವಾಗಿ ಆರ್ಥಿವಾಗಿ ಸಬಲರಾಗಬೇಕು ಎಂದು ಅಕ್ಕ ಐ.ಎ.ಎಸ್. ಅಕಾಡೆಮಿಯ ನಿರ್ದೇಶಕ ಡಾ. ಶಿವಕುಮಾರ್ ತಿಳಿಸಿದರು.
ನಗರದ ಬೋಗಾದಿ 2ನೇ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿದ್ಯಾರ್ಥಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನಾವರಣ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅರ್ಥಶಾಸ್ತçದಲ್ಲಿ ಪಿಹೆಚ್.ಡಿ. ಮಾಡಿದ ಮೊದಲ ವ್ಯಕ್ತಿಯಾಗಿದ್ದರೂ ಅವರಿಗೆ ಬರೋಡಾ ಸಂಸ್ಥಾನದಲ್ಲಿ ಬಾಡಿಗೆ ಮನೆ ಸಿಗುವುದಿಲ್ಲ. ಅವರನ್ನು ಕೀಳಾಗಿ ಕಂಡರು ಎಂದರು.
ಸ್ವಾತಂತ್ರ ಬಂದಾಗ ಶೇ. 3% ರಷ್ಟಿದ್ದ ಬ್ರಾಹ್ಮಣರು ದೇಶದ ಪ್ರಧಾನಿಯಾದರು. ಶೇ. 30% ರಷ್ಟಿದ್ದ ದಲಿತರು ಪ್ರಧಾನಿಯಾಗಲಿಲ್ಲ. ಅಂಬೇಡ್ಕರ್‌ಗೆ ಆವತ್ತಿನ ದಿನ ದೇಶಾದ್ಯಂತ ಬೆಂಬಲ ಸಿಗಲಿಲ್ಲ. ರಾಜಕೀಯವಾಗಿ ನಾವೆಲ್ಲರು ಸಮಾನ ಅವಕಾಶ ಪಡೆಯುತ್ತೇವೆ. ಈ ದೇಶವನ್ನು ಶೋಷಿತರು ಆಳಬೇಕೆಂಬುದು ಅಂಬೇಡ್ಕರ್‌ರವರ ಆಸೆಯಾಗಿತ್ತು. ಅವರ ಧ್ಯೇಯ ಇನ್ನು ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಹಿಂದವರ್ಗದ ಜನರನ್ನು ಬಡವರನ್ನಾಗಿ ಮಾಡುವ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ. ಆದ್ದರಿಂದ ಯುವಜನತೆ ಎಚ್ಚರಗೊಂಡು ಚೆನ್ನಾಗಿ ಓದಿಕೊಂಡು ಸ್ವಾವಲಂಬಿಗಳಾಗಿ, ಈ ದೇಶವನ್ನು ಕಟ್ಟುವ ಆಳುವ ನಾಯಕರಾಗಿ ಅಂಬೇಡ್ಕರ್‌ರವರ ಕನಸನ್ನು ನನಸು ಮಾಡಬೇಕು ಎಂದರು.
ನಂಜನಗೂಡು ಕ್ಷೇತ್ರದ ಶಾಸಕ ದರ್ಶನ ಧ್ರುವನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳು ಚೆನ್ನಾಗಿ ಓದಿಕೊಂಡು ತಂದೆ ತಾಯಿಗೆ ಕೀರ್ತಿ ತರಬೇಕು. ಕೆ.ಎ.ಎಸ್., ಐ.ಐ.ಎಸ್. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂದು ವಿವಿಧ ಹುದ್ದೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ನಿಲಯಪಾಲಕ ಎಸ್. ಮಹೇಶ್, ಜಿಲ್ಲಾ ವಾರ್ಡನ್ ಸಂಘದ ಅಧ್ಯಕ್ಷ ಶಿವಮಲ್ಲಯ್ಯ, ನಿಲಯಪಾಲಕರಾದ ಚಿಕ್ಕೀರಯ್ಯ, ಮಹೇಶ್, ಚಂದ್ರಮ್ಮ, ಪವಿತ್ರ, ಮಹೇಶ, ಕಾರ್ತಿಕ್, ಪ್ರದೀಪ್‌ಕುಮಾರ್, ಮೋಹನ್‌ಕುಮಾರಿ, ಪ್ರಸಾದ್ ಹಾಜರಿದ್ದರು.