Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಷಾಡ ಶುಕ್ರವಾರಗಳಂದು ಭಕ್ತಾರಿಗೆ ಯಾವುದೇ ಅನಾನುಕೂಲವಾಗದಂತೆ ಚಾಮುಂಡೇಶ್ವರಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ*ಜಿಲ್ಲಾಡಳಿತಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ


*ಚಾಮುಂಡಿ ಬೆಟ್ಟದಲ್ಲಿ ಪಾಸ್ಟಿಕ್ ಬ್ಯಾನ್ ಮಾಡಬೇಕು. ಡಸ್ಟ್ ಬಿನ್ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಯನ್ನು ಕಾಪಾಡಬೇಕು.

ಮೈಸೂರು; ಜುಲೈ ಹಾಗೂ ಆಗಸ್ಟ್ ತಿಂಗಳ ಆಷಾಢ ಮಾಸದ ಶುಕ್ರವಾರಗಳಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆಂದು ವಿವಿಧ ಪ್ರದೇಶಗಳಿಂದ ಬರುವ ಭಕ್ತಾಧಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಚಾಮುಂಡಿ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಆಷಾಡ ಶುಕ್ರವಾರ ಸಂಬAಧ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಷಾಢ ಮಾಸದಲ್ಲಿ ದರ್ಶನಕ್ಕೆ ಬರುವ ಭಕ್ತರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಕಾಲ್ತುಳಿತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜುಲೈ 17 ರಂದು ಮೊದಲ ಆಷಾಡ ಶುಕ್ರವಾರ, ಜುಲೈ 24 ರಂದು 2 ನೇ ಆಷಾಡ ಶುಕ್ರವಾರ, ಜುಲೈ 31 ರಂದು 3 ನೇ ಆಷಾಡ ಶುಕ್ರವಾರ, ಆಗಸ್ಟ್ 04 ರಂದು ಅಮ್ಮನವರ ಜನ್ಮೋತ್ಸವ, ಆಗಸ್ಟ್ 07 ರಂದು 4 ನೇ ಆಷಾಡ ಶುಕ್ರವಾರ ನಡೆಯುತ್ತದೆ.
ಪೋಲಿಸ್ ಇಲಾಖೆಯ ವತಿಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ಆಷಾಡ ಶುಕ್ರವಾರ ದಿನಗಳಂದು ಮುಂಜಾನೆ 5.30 ರಿಂದ ದೇವಾಲಯ ಮುಚ್ಚುವವರೆಗೆ ಚಾಮುಂಡೇಶ್ವರಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಅಮ್ಮನವರ ಜನ್ಮೋತ್ಸವ ದಿವಸ ಬೆಳಗ್ಗೆ 8 ಗಂಟೆಯಿAದ ಸಾರ್ವಜನಿಕ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗುವುದು. ವಿಐಪಿ ದರ್ಶನಕ್ಕೆ ಪ್ರತ್ಯೇಕವಾಗಿ ಮುಂಜಾನೆ 5.30 ರಿಂದ ಬೆಳಗ್ಗೆ 9.30 ರವರಿಗೆ ಸಮಯವನ್ನು ನಿಗದಿ ಪಡಿಸಲಾಗುವುದು ಎಂದರು.
ಚಾಮುAಡಿ ಬೆಟ್ಟದಲ್ಲಿ ಪಾಸ್ಟಿಕ್ ಬ್ಯಾನ್ ಮಾಡಬೇಕು. ಡಸ್ಟ್ ಬಿನ್ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಯನ್ನು ಕಾಪಾಡಬೇಕು. ಬೆಟ್ಟದಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ತೆಂದರೆ ಆಗದಂತೆ ಅವರ ಆಧಾರ್ ಕಾರ್ಡ್ ನೋಡಿ ಪ್ರವೇಶ ನೀಡಬೇಕು. ಬೆಟ್ಟದಲ್ಲಿ ಇರುವ ನಮ್ಮ ಕ್ಲಿನಿಕ್ ನಲ್ಲಿ ದಿನದ 24 ಗಂಟೆ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳು ಇರಬೇಕು. ದೇವಸ್ಥಾನದ ಬಳಿಯಲ್ಲಿ 3 ಆಂಬುಲೆನ್ಸ್ ವ್ಯವಸ್ಥೆ ಇರಬೇಕು. ಚೆಸ್ಕಾ ವತಿಯಿಂದ ಪಾರ್ಕಿಂಗ್ ಸ್ಥಳ ಹಾಗೂ ಬೆಟ್ಟಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ತಿಳಿಸಿದರು .
ನಗರ ಪಾಲಿಕೆಯ ವತಿಯಿಂದ ಅಗತ್ಯ ಸಂಖ್ಯೆಯ ಪೌರ ಕಾರ್ಮಿಕರನ್ನು ನಿಯೋಜನೆ ಮಾಡಬೇಕು. ಸಂಚಾರಿ ಶೌಚಾಲಯಗಳನ್ನು ಪಾರ್ಕಿಂಗ್ ಮತ್ತು ಬೆಟ್ಟದ ಮೇಲೆ ಮಾಡಬೇಕು. ಭಕ್ತಾದಿಗಳ ಅನುಕೂಲಕ್ಕಾಗಿ 6 ಬ್ಯಾಟರಿ ವಾಹನಗಳ ವ್ಯವಸ್ಥೆ ಮಾಡಬೇಕು. ಅಗತ್ಯ ಸಂಖ್ಯೆಯ ಸಿ ಸಿ ಟಿ ವಿ ಗಳನ್ನು ಅಳವಡಿಸಬೇಕು. ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ ಲಕ್ಷಿ÷್ಮÃಕಾಂತ ರೆಡ್ಡಿ ಮಾತನಾಡಿ, ನಗರದ ಲಲಿತ ಮಹಲ್ ಮೈದಾನದಿಂದ ಶುಕ್ರವಾರ ಶನಿವಾರ ಮತ್ತು ಭಾನುವಾರ ದಿನಗಳಂದು ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಾದರಕ್ಷೆಗಳನ್ನು ಬಿಡಲು ಲಲಿತ ಮಹಲ್ ಬಸ್ ಪಾರ್ಕಿಂಗ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗುವುದು. ಸಿಟಿ ಬಸ್ ನಿಲ್ದಾಣದಿಂದ ಬರುವ ಭಕ್ತಾದಿಗಳಿಗೆ ಪಾದರಕ್ಷೆಗಳನ್ನು ಬಿಡಲು ಸಿಟಿ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾದಿಕಾರದ ಕಾರ್ಯದರ್ಶಿ ರೂಪ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.