Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಮಾಯಣ, ಮಹಾಭಾರತ, ವಿಕ್ರಮಾದಿತ್ಯನ ಕಾಲಘಟ್ಟಗಳಲ್ಲಿ ಜಾರಿಯಲ್ಲಿದ್ದ ನ್ಯಾಯ ನೀಡಿಕೆಯ ಕ್ರಮಗಳನ್ನು ನಾವು ಈಗಲೂ ಅನುಸರಿಸಬಹುದಾಗಿದೆ; ಸಿ.ವಿ.ಗೋಪಿನಾಥ್


ಮೈಸೂರು;
ಭಾರತ ಜ್ಞಾನ ಪರಂಪರೆ ಅಧ್ಯಯನ ಯೋಗ್ಯವಾಗಿರುವ ಈ ಕಾಲದಲ್ಲಿ ನಮ್ಮ ಪುರಾಣಗಳಲ್ಲಿ ರಾಮಾಯಣ, ಮಹಾಭಾರತ, ವಿಕ್ರಮಾದಿತ್ಯನ ಕಾಲಘಟ್ಟಗಳಲ್ಲಿ ಜಾರಿಯಲ್ಲಿದ್ದ ನ್ಯಾಯ ನೀಡಿಕೆಯ ಕ್ರಮಗಳನ್ನು ನಾವು ಈಗಲೂ ಅನುಸರಿಸಬಹುದಾಗಿದೆ ಎಂದು ಭಾರತ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಹೇಳಿದರು.
ಶನಿವಾರ ವಿದ್ಯಾವರ್ಧಕ ಕಾನೂನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ''ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ವಿವೇಚನೆ, ನೈತಿಕತೆ, ಅಂತಃಕರಣಗಳ ಒಳಪ್ರಜ್ಞೆಗಳ ಮೂಲಕ ಎರಡು ಕಡೆಯ ವಾದ ವಿವಾದಗಳನ್ನು ಕೇಳಿಸಿಕೊಂಡು ನ್ಯಾಯದಾನವನ್ನು ಮಾಡಲಾಗುತ್ತಿತ್ತು. ನ್ಯಾಯದ ತಕ್ಕಡಿ ಹಿಡಿದಿರುವವರಿಗೆ ತಾಯಿಯ ಅಂತಃಕರಣ ಮತ್ತು ಆತ್ಮಸಾಕ್ಷಿಗಳು ಇರಲೇಬೇಕು, ಅದುವೇ ನಿಜವಾದ ನ್ಯಾಯ ಅದುವೇ ನೈಸರ್ಗಿಕ ನ್ಯಾಯ'' ಎಂದು ನುಡಿದರು. ನಮ್ಮ ಕಾನೂನು, ಕಾನೂನು ಪುಸ್ತಗಳು ಯಾವ ತಪ್ಪಿಗೆ ಯಾವ ಶಿಕ್ಷೆ ಅನ್ನುವುದನ್ನು ಖಚಿತವಾಗಿ ಹೇಳುತ್ತವೆ. ಶಿಕ್ಷೆ ನೀಡಿಕೆಯ ಪ್ರಕ್ರಿಯೆಗಳು ನಮ್ಮಲ್ಲಿ ಕರಾರುವಕ್ಕಾಗಿವೆ. ಶಿಕ್ಷೆ ನೀಡುತ್ತಿರುವ ನ್ಯಾಯಾಧೀಶ ತನ್ನ ಆತ್ಮಸಾಕ್ಷಿಯ ದನಿಕೇಳಿ ಆ ತೀರ್ಪು ಕೊಡುತ್ತಿರುವನೇ ಎಂಬುದು ನಮಗೆ ಮುಖ್ಯವಾಗಬೇಕು. ಬೌದ್ಧರಲ್ಲಿ ಮನೋಗಥ, ಜೈನರಲ್ಲಿ ಸಂಕಲ್ಪ ಮತ್ತು ಮುಸ್ಲಿಮರಲ್ಲಿ ತಕ್ವಾ ಸಿದ್ದಾಂತಗಳು ನ್ಯಾಯನೀಡಿಕೆಯ ಮಾರ್ಗಗಳು ಸದಾ ಅಂತಃಕರಣ ಮತ್ತು ಆತ್ಮಸಾಕ್ಷಿಗೆ ಪೂರಕವಾಗಿರಬೇಕು ಅನ್ನುತ್ತವೆ. ತಪುö್ಪ ಮತ್ತು ಅಪರಾಧ ಮಾಡಿದವರಿಗೆ ದಂಡನೆ ಮತ್ತು ಪಶ್ಚಾತ್ತಾಪ ಎರಡಕ್ಕೂ ಅವಕಾಶಗಳು ನಮ್ಮ ನ್ಯಾಯಾಧೀಶರು ಮಾಡಿಕೊಡಬೇಕು. ಅದುವೇ ಆತ್ಮಸಾಕ್ಷಿಯ ನ್ಯಾಯದಾನವಾಗುತ್ತದೆ” ಎಂದು ಕಾನೂನು ವಿದ್ಯಾರ್ಥಿಗಳನ್ನು ಕುರಿತು ಹೇಳಿದರು.
ಕಾರ್ಯಕ್ರಮದ ಆದ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ವಹಿಸಿದ್ದರು. ಸಂಘದ ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ ಕೆ.ಎಮ್.ರಾಜಶೇಖರ್, ಪ್ರಾಂಶುಪಾಲ ಡಾ. ಪಿ. ದೀಪು, ಕಾರ್ಯಕ್ರಮದ ಸಂಯೋಜಕ ಡಾ.ಟಿ.ಎಮ್.ಪ್ರಶಾಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಕಾಲೇಜು, ರಾಜ್ಯ ಮತ್ತು ರಾಷ್ಟç ಮಟ್ಟದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಕಾರ್ಯಕ್ರಮದ ಅತಿಥಿಗಳು ನೀಡಿದರು.