ಜುಲೈ 5 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕರೆಂಟ್ ಇರಲ್ಲಮೈಸೂರು: ಚಾಮುಂಡಿಪುರ0 ಉಪವಿಭಾಗದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಕಾಮಗಾರಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಜು. 5 ರಿಂದ 7 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಜುಲೈ 5 ರಂದು ಕೋರ್ಟ್ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಗೀತಾ ರಸ್ತೆ, ದೇವ ಪಾರ್ಥಿವ ರಸ್ತೆ, ರಾಮಸ್ವಾಮಿ ವೃತ್ತ, ಕೋರ್ಟ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.ಜುಲೈ 6 ರಂದು ಕನಕಗಿರಿ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಕನಕಗಿರಿ, ಸುಯೇಜ್…
Day: July 4, 2026
ಎಚ್.ಡಿ.ಕೋಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಆರ್.ನಾಗೇಶ್ ಆಯ್ಕೆ,
2 ಮತದ ರೋಚಕ ಜಯ, ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವ ವಕೀಲರು. ಎಚ್.ಡಿ.ಕೋಟೆ : ತಾಲ್ಲೂಕು ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ಶನಿವಾರ ಚುನಾವಣೆ ನಡೆದು ವಕೀಲ ಆರ್.ನಾಗೇಶ್ 68 ಮತಗಳನ್ನು ಪಡೆಯುವ ಮೂಲಕ ಪ್ರತಿ ಸ್ಪರ್ಧಿ ಹಿರಿಯ ವಕೀಲ ಡಿ.ಆರ್.ಮಹೇಶ್ (66) ಅವರ ವಿರುದ್ಧ 2 ಮತಗಳ ಅಂತರದಲ್ಲಿ ರೋಚಕ ಜಯಗಳಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ತಾಲ್ಲೂಕು ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್.ನಾಗೇಶ್ ಹೆಸರು ಘೋಷಣೆ ಆಗುತ್ತಿದ್ದಂತೆ ಅವರನ್ನು ಬೆಂಬಲಿಸಿದ್ದ ವಕೀಲರ…
ಜುಲೈ 5ರಂದು ‘ಪಾರ್ಟಿ’ ನಾಟಕ ಪ್ರದರ್ಶನ
ಮೈಸೂರು; ಸಿ.ಜಿ.ಕೆ. ನೆನಪಿನ ಗ್ರೀಷ್ಮ ರಂಗೋತ್ಸವ 2026 ಅಂಗವಾಗಿ ನಿರಂತರ ರಂಗ ತಂಡ ಹಾಗೂ ರಂಗಾಯಣವತಿಯಿAದಜುಲೈ 5ರಂದು ‘ಪಾರ್ಟಿ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.ಖ್ಯಾತ ಮರಾಠಿ ನಾಟಕಕಾರ ಮಹೇಶ್ ಎಲ್ಕುಂಚವಾರ್ ಅವರ ಬಹುಚರ್ಚಿತ ನಾಟಕ ‘ಪಾರ್ಟಿ’ ಇದೇ ಜುಲೈ 5ರ ಭಾನುವಾರ ಸಂಜೆ 6.30 ಗಂಟೆಗೆ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮAದಿರದಲ್ಲಿ ಪ್ರದರ್ಶನಗೊಳ್ಳಲಿದೆ.ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಪಾರ್ಟಿ’ ನಾಟಕವು ಕಲೆ, ಸಾಹಿತ್ಯ, ಬೌದ್ಧಿಕ ವಲಯ, ಸಾಮಾಜಿಕ ಮೌಲ್ಯಗಳು ಹಾಗೂ ಮಾನವ ಸಂಬAಧಗಳ ಸಂಕೀರ್ಣತೆಯನ್ನು ಸೂಕ್ಷ÷್ಮವಾಗಿ ವಿಶ್ಲೇಷಿಸುವ…
ಶ್ರೀರಾಘವೇಂದ್ರಸ್ವಾಮಿಗಳ ಪಂಚಲೋಹ ಶಿಲಾ ಮತ್ತು ಬೃಂದಾವನ ಪ್ರತಿಷ್ಠಾಪನಾ ಕಾರ್ಯಕ್ರಮ
ಮೈಸೂರು; ಶ್ರೀರಾಘವೇಂದ್ರಸ್ವಾಮಿಗಳ ಪಂಚಲೋಹ ಶಿಲಾ ಮತ್ತುಬೃಂದಾವನ ಪ್ರತಿಷ್ಠಾಪನಾ ಕಾರ್ಯಕ್ರಮಮೈಸೂರಿನ ರಾಮಕೃಷ್ಣನಗರ ವಿವೇಕಾನಂದರಸ್ತೆಯಲ್ಲಿರುವ ಶ್ರೀದೇವಿ ಭೂದೇವಿ ಸಮೇತ ಶ್ರೀನಿವಾಸ ಗಣಪತಿವಾಯುದೇವ ದೇವಸ್ಥಾನದ ಆವರಣದಲ್ಲಿ ಜುಲೈ 5 ರಂದು ನಡೆಯಲಿದೆ.ಭಾನುವಾರ ಬೆಳಿಗ್ಗೆ 8.30ಕ್ಕೆ ಕಾರ್ಯಕ್ರಮವು ನೆರವೇರಲಿದೆ ಎಂದು ಟ್ರಸ್ಟಿಗಳಾದ ಸುಧಾರಾವ್, ಹರೀಶ್ರಾವ್, ಗುರುರಾಜರಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ವಿಬಿ-ಜಿ ರಾಮ್ ಜಿ ಜಾರಿ, ಕೂಲಿ ದರ ಹೆಚ್ಚಳ: ಜಿ.ಪಂ ಸಿಇಓ ಎಸ್.ಯುಕೇಶ್ ಕುಮಾರ್
ಮೈಸೂರು: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ (ಮ-ನರೇಗಾ) ಯೋಜನೆಗೆ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ ) ಯೋಜನೆಯು ಜುಲೈ 1 ರಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದ್ದು, ಅದೇ ದಿನವೇ ಕೇಂದ್ರ ಸರ್ಕಾರ ಯೋಜನೆಯಡಿ ದೊರೆಯುವ ಪರಿಷ್ಕöÈತ ಕೂಲಿ ದರ ಏರಿಕೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ .ಯುಕೇಶ್ ಕುಮಾರ್…
ಪುರುಷರಿಗೂ ನಿಮ್ಮ ಸಾಧನೆ ಸ್ಪೂರ್ತಿ : ರವಿಶಂಕರ್
ಮೈಸೂರು: ಮಹಿಳೆಯಾಗಿ ಜಮ್ಮಡ ಪ್ರೀತ್ ಅಪ್ಪಯ್ಯರ ಉತ್ಸಾಹ, ಆಶಯ ನೋಡಿದರೆ ಪುರುಷರಿಗೂ ಮಾದರಿಯಾಗಿದ್ದಾರೆ ಎಂದು ಲಕ್ಷಿಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್ ತಿಳಿಸಿದರು.ಕೆಎಂಪಿಕೆ ಚಾರಿಟಬಲ್ ಟ್ರಷ್ಟ್ ವತಿಯಿಂದ ನಗರದ ಚಾಮುಂಡಿಪುರAನ ಅಪೂರ್ವಹೋಟೆಲ್ ನಲ್ಲಿ ಆಯೋಜಿಸಿದ್ದ ಬೆಂಗಳೂರು ವಿಶ್ವ ವಿದ್ಯಾನಿಲಯದ ಶೂಟಿಂಗ್ ರೇಂಜ್ ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ರೈಫೆಲ್ ಅಸೋಸಿಯೇಷನ್(ಕೆಎಸ್‌ಆರ್‌ಎ) ವತಿಯಿಂದ ನಡೆದ 14ನೇ ರಾಜ್ಯ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್ ಶಿಪ್ 2026ರಲ್ಲಿ ಎರಡು ಚಿನ್ನದ ಪದಕಗಳಿಸಿದ ಮೈಸೂರಿನವರಾದ ಜಮ್ಮಡ…
ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ; ಸಂಸದ ಯದುವೀರ್
ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿಗುಂಪು ಗುಂಪಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಸುಸೂತ್ರವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಯಲು ಪೊಲೀಸ್ ಭದ್ರತೆಯ ಅಗತ್ಯವಿದೆ ಎಂದು ಹೇಳಿದರು. ಅಲ್ಪಸಂಖ್ಯಾತರೇ ಹೆಚ್ಚಿರುವ ಎನ್.ಆರ್. ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮಾನದಂಡದAತೆ ನಡೆಯುತ್ತಿಲ್ಲ. ಮಸೀದಿ, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು…
ರಾಮಾಯಣ, ಮಹಾಭಾರತ, ವಿಕ್ರಮಾದಿತ್ಯನ ಕಾಲಘಟ್ಟಗಳಲ್ಲಿ ಜಾರಿಯಲ್ಲಿದ್ದ ನ್ಯಾಯ ನೀಡಿಕೆಯ ಕ್ರಮಗಳನ್ನು ನಾವು ಈಗಲೂ ಅನುಸರಿಸಬಹುದಾಗಿದೆ; ಸಿ.ವಿ.ಗೋಪಿನಾಥ್
ಮೈಸೂರು; ಭಾರತ ಜ್ಞಾನ ಪರಂಪರೆ ಅಧ್ಯಯನ ಯೋಗ್ಯವಾಗಿರುವ ಈ ಕಾಲದಲ್ಲಿ ನಮ್ಮ ಪುರಾಣಗಳಲ್ಲಿ ರಾಮಾಯಣ, ಮಹಾಭಾರತ, ವಿಕ್ರಮಾದಿತ್ಯನ ಕಾಲಘಟ್ಟಗಳಲ್ಲಿ ಜಾರಿಯಲ್ಲಿದ್ದ ನ್ಯಾಯ ನೀಡಿಕೆಯ ಕ್ರಮಗಳನ್ನು ನಾವು ಈಗಲೂ ಅನುಸರಿಸಬಹುದಾಗಿದೆ ಎಂದು ಭಾರತ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಹೇಳಿದರು.ಶನಿವಾರ ವಿದ್ಯಾವರ್ಧಕ ಕಾನೂನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ”ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ವಿವೇಚನೆ, ನೈತಿಕತೆ, ಅಂತಃಕರಣಗಳ ಒಳಪ್ರಜ್ಞೆಗಳ ಮೂಲಕ ಎರಡು ಕಡೆಯ ವಾದ ವಿವಾದಗಳನ್ನು ಕೇಳಿಸಿಕೊಂಡು…
ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ: ನ್ಯಾಯಮೂರ್ತಿ ಎಸ್. ಜಿ. ಪಂಡಿತ್
ಮೈಸೂರು; ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಹೇಳಿದರು.ಈ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಹಾಗೂ ಗಿಡ ನೆಡುವ ಕೆಲಸಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಪ್ರತಿಯೊಂದು ಶಾಲೆಯನ್ನೂ ತಲುಪಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕುಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ವಕೀಲರ ಸಂಘ ಹಾಗೂ ತೋಟಗಾರಿಕಾ ಮಹಾವಿದ್ಯಾಲಯ, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಒಂದು…
ಜು. 7 ರ0ದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಎಚ್.ಡಿ.ಕೋಟೆ : ಪ್ರತಿಭಾನ್ವಿತ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ತಾಲ್ಲೂಕು ಆದಿ ಕರ್ನಾಟಕ ಮಹಾಸಭಾ ಮತ್ತು ಅಂಬೇಡ್ಕರ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜು. 7 ರ ಮಂಗಳವಾರ ಸರಗೂರು ಪಟ್ಟಣದಲ್ಲಿ ನಡೆಯುವ 135ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ಸರಗೂರು ತಾಲ್ಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನಾ ರಾಜಣ್ಣ ಹೇಳಿದರು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ…
- 1
- 2