Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಚ್.ಡಿ.ಕೋಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಆರ್.ನಾಗೇಶ್ ಆಯ್ಕೆ,

2 ಮತದ ರೋಚಕ ಜಯ, ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವ ವಕೀಲರು.


ಎಚ್.ಡಿ.ಕೋಟೆ : ತಾಲ್ಲೂಕು ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ಶನಿವಾರ ಚುನಾವಣೆ ನಡೆದು ವಕೀಲ ಆರ್.ನಾಗೇಶ್ 68 ಮತಗಳನ್ನು ಪಡೆಯುವ ಮೂಲಕ ಪ್ರತಿ ಸ್ಪರ್ಧಿ ಹಿರಿಯ ವಕೀಲ ಡಿ.ಆರ್.ಮಹೇಶ್ (66) ಅವರ ವಿರುದ್ಧ 2 ಮತಗಳ ಅಂತರದಲ್ಲಿ ರೋಚಕ ಜಯಗಳಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ತಾಲ್ಲೂಕು ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್.ನಾಗೇಶ್ ಹೆಸರು ಘೋಷಣೆ ಆಗುತ್ತಿದ್ದಂತೆ ಅವರನ್ನು ಬೆಂಬಲಿಸಿದ್ದ ವಕೀಲರ ಸಂಘದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಿರಿಯ ವಕೀಲರು ಹಾಜರಿದ್ದು ನೂತನ ಅಧ್ಯಕ್ಷ ಆರ್.ನಾಗೇಶ್ ಅವರಿಗೆ ಶುಭಾಶಯ ಕೋರಿ ಉತ್ತಮ ಆಡಳಿತ ನೀಡುವಂತೆ ಕಿವಿಮಾತು ಹೇಳಿದರು.

ಉಪಾಧ್ಯಕ್ಷರಾಗಿ ವಕೀಲ ಚಲುವಪ್ಪ, ಮಹಿಳಾ ಉಪಾಧ್ಯಕ್ಷರಾಗಿ ನಾಗಶ್ರೀ.ಪಿ, ಪ್ರಧಾನ ಕಾರ್ಯದರ್ಶಿ ಯಾಗಿ ಜಯಶಂಕರ್.ಕೆ,
ಜಂಟಿ ಕಾರ್ಯದರ್ಶಿ ರವಿಕುಮಾರ್,
ಮಹಿಳಾ ವಿಭಾಗದ ನಯನ ಕೆ.ಎಂ. ಖಜಾಂಚಿ ಸ್ಥಾನಕ್ಕೆ ಅಭಿಕುಮಾರ್ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಶಿವರಾಜು.ಎಂ, ಸಹ ಚುನಾವಣಾಧಿಕಾರಿಯಾಗಿ ನಾಗೇಂದ್ರ ಸುಹಾಸ್, ತನ್ಮಯಿ ಶ್ರೀನಾಥ್ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭ ಹಿರಿಯ ವಕೀಲರಾದ ಎಂ.ಎಲ್.ರವಿಶಂಕರ್, ಮಹದೇವಪ್ಪ, ಮೋಹನ್ ಕೆ.ಎಂ, ಲಿಂಗರಾಜು, ಉಮಾಶಂಕರ್, ಎ.ಟಿ.ಕೃಷ್ಣ, ವೇಲುಸ್ವಾಮಿ, ವಕೀಲರಾದ ರಮೇಶ್, ವೆಂಕಟೇಶ್, ಹನುಮೇಶ್, ಸೋಮಶೇಖರ್, ಮಹಾದೇವಸ್ವಾಮಿ, ಸಿದ್ದಪ್ಪಾಜಿ, ಕಂದೇಗಾಲ ಶಿವರಾಜು, ಸದಾಶಿವಪ್ಪ, ಜಯಸ್ವಾಮಿ, ಜೆ.ಸಿ.ಕುಮಾರ್, ಚೌದಲ್ಲಿ ಜವಾರಯ್ಯ, ಪಿ.ಜಿ. ಶಶಿಧರ,ಹೆಚ್.ಪಿ.ಮಹೇಶ್, ಪ್ರಸನ್ನಕುಮಾರ್. ಬಿ.ವಿ ಸೇರಿದಂತೆ ವಕೀಲರ ಸಂಘದ ಇನ್ನೀತರ ಸದಸ್ಯರು ಹಾಜರಿದ್ದರು.

——————————————————————————————–
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಾನು ಆಯ್ಕೆಯಾಗಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನನ್ನ ಅವಧಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ತಾಲ್ಲೂಕು ವಕೀಲರ ಸಂಘ ಹಾಗೂ ಸಂಘದ ಎಲ್ಲ ಸದಸ್ಯರ ಶ್ರೇಯೋಭಿವೃದ್ಧಿಗೆ ಸೇವೆ ಸಲ್ಲಿಸುತ್ತೇನೆ.
ಆರ್.ನಾಗೇಶ್. ಅಧ್ಯಕ್ಷರು,
ತಾಲ್ಲೂಕು ವಕೀಲರ ಸಂಘ ಎಚ್.ಡಿ.ಕೋಟೆ