Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜುಲೈ 5 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕರೆಂಟ್ ಇರಲ್ಲ
ಮೈಸೂರು: ಚಾಮುಂಡಿಪುರ0 ಉಪವಿಭಾಗದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಕಾಮಗಾರಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಜು. 5 ರಿಂದ 7 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಜುಲೈ 5 ರಂದು ಕೋರ್ಟ್ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಗೀತಾ ರಸ್ತೆ, ದೇವ ಪಾರ್ಥಿವ ರಸ್ತೆ, ರಾಮಸ್ವಾಮಿ ವೃತ್ತ, ಕೋರ್ಟ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಜುಲೈ 6 ರಂದು ಕನಕಗಿರಿ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಕನಕಗಿರಿ, ಸುಯೇಜ್ ಫಾರಂ ರಸ್ತೆ, ಆಟೋ ಸ್ಟಾö್ಯಂಡ್, ರಾಮಕೃಷ್ಣ ಆಸ್ಪತ್ರೆ ರಸ್ತೆ, ಭೈರವೇಶ್ವರ ನಗರ, ದತ್ತನಗರ, ಮುನೇಶ್ವರನಗರ, ಗುಂಡುರಾವ್‌ನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಜುಲೈ 7 ರಂದು ಭುವನೇಶ್ವರಿ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಲಾರಿ ಸ್ಟಾö್ಯಂಡ್, ಚಾಮುಂಡಿಬೆಟ್ಟದ ಪಾದ, ಜಾಕಿ ಕ್ವಾಟರ‍್ಸ್, ಚಾಮುಂಡಿ ಬೆಟ್ಟ, ತಾವರೆಕಟ್ಟೆ, ದೇವಿಕೆರೆ, ಕಸ್ತೂರಿ ನಿವಾಸ ಹೋಟೆಲ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.