
ಮೈಸೂರು; ಮೈಸೂರಿನ ನಟನ ರಂಗ ಸಂಸ್ಥೆಯು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ, ನೀನಾಸಂ ನ ನಿರ್ಮಾತೃ ಶ್ರೀ ಕೆ.ವಿ ಸುಬ್ಬಣ್ಣಅವರ ನೆನಪಿನಲ್ಲಿ ನಟನವು ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹೀಗೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ಜುಲೈ 12ರಂದು ನಟನರೆಪರ್ಟರಿಯ ಹೊಚ್ಚ ಹೊಸನಾಟಕ ‘ಚೆಕ್‌ಪೋಸ್ಟ್ ನಂ.840 ಪ್ರದರ್ಶನ, ಹಾಗೂ ನಟನದ 2026-27ನೇ ಸಾಲಿನ ರಂಗಭೂಮಿಡಿಪ್ಲೋಮಾ ಹಾಗೂ ವಾರಾಂತ್ಯರAಗಶಾಲೆಯ ಮಕ್ಕಳ ಸ್ವಾಗತ ಸಡಗರ. ಜುಲೈ 13 ರಂದು ವಿಚಾರ ಸಂಕಿರಣ ಮತ್ತುಜುಲೈ 14 ನಟನರಂಗಮAದಿರ ಲೋಕಾರ್ಪಣೆಯಾಗಿ 11 ವರ್ಷ ಹಾಗೂ ಮಂಡ್ಯರಮೇಶ್‌ಅವರಜನ್ಮದಿನದ ಅಂಗವಾಗಿ ‘ಚೋರಚರಣದಾಸ’ ನಾಟಕದ 300ನೇ ಪ್ರದರ್ಶನ.
ಜುಲೈ 12ರಂದು ಸಂಜೆ 06.30ಕ್ಕೆ ನಟನ ಪಚಿiÀÄಣ ರೆಪರ್ಟರಿ ತಂಡದ ಹೊಚ್ಚ ಹೊಸ ನಾಟಕ ‘ಚೆಕ್‌ಪೋಸ್ಟ್ ನಂ.840’ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಮತ್ತು ನಿರ್ದೇಶನ ನಟನದ ಪ್ರಾಂಶುಪಾಲ ಮೇಘ ಸಮೀರ ಅವರದ್ದು. ಕನ್ನಡ ಮತ್ತು ಸಂಸ್ಕೃತಿ ಬೆಂಗಳೂರು ಇದರ ನಿರ್ದೇಶಕರಾದಡಾ. ಬಿ.ಎಸ್. ಮಂಜುನಾಥಸ್ವಾಮಿ ಹಾಗೂ ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ. ಎಂ,ಜಿ, ಮಂಜುನಾಥ ಉಪಸ್ಥಿತರಿರಲಿದ್ದಾರೆ.
ಜುಲೈ 13 ರಂದು ಸಂಜೆ 05.30ಕ್ಕೆ ಸರಿಯಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದ್ದು, ಸುಬ್ಬಣ್ಣ ಅವರ ಬದುಕು – ಬರಹಕುರಿತಾಗಿ ಖ್ಯಾತ ಚಿಂತಕ ಮಾಧವ ಚಿಪ್ಪಳ್ಳಿಅವರು ಹಾಗೂ ರಂಗಭೂಮಿ ಮತ್ತು ಮಾನಸಿಕ ಆರೋಗ್ಯದ ಕುರಿತಾಗಿ ಖ್ಯಾತ ರಂಗಕರ್ಮಿ ಮತ್ತು ಚಲನಚಿತ್ರ ನಿರ್ದೇಶಕ ಜಯತೀರ್ಥ ಮಾತನಾಡಲಿದ್ದಾರೆ.
ಜುಲೈ 14 ರಂದು ಸಂಜೆ 06.30ಕ್ಕೆ ಸರಿಯಾಗಿ ನಟನ ಪಚಿiÀÄಣರೆ ಪರ್ಟರಿಯ ಮಹತ್ವದ ಪ್ರಯೋಗ‘ಚೋರಚರಣದಾಸ’ 300ನೇ ಪ್ರದರ್ಶನಕಾಣಲಿದೆ. ಹಬೀಬ್ ತನ್ವೀರರ ಈ ನಾಟಕದ ಸಂಗೀತಶ್ರೀ ಚಂದ್ರಶೇಖರ ಆಚಾರ್ ಹಾಗೂ ಮರುರೂಪ ಮತ್ತು ನಿರ್ದೇಶನ ಮಂಡ್ಯರಮೇಶ್ ಅವರದ್ದು. ಅಂದು ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ರಾಮಕೃಷ್ಣಯ್ಯ, ಮತ್ತು ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟಾçರ್ ಬಿ. ನೀಲಮ್ಮ ಉಪಸ್ಥಿತರಿರಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ನಂ 7259537777, 9480468327, 9845595505ನ್ನು ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. .