Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹೆಬ್ಬಾಳ್ ಕಾಲೋನಿಯಲ್ಲಿ ೨.೧೩ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ


ಮೈಸೂರು; ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆ ವಲಯ ಕಛೇರಿ-೫ ರ ವಾರ್ಡ್ ನಂ. ೪ ರ ಲೋಕನಾಯಕನಗರದ ಹೆಬ್ಬಾಳ್ ಕಾಲೋನಿಯಲ್ಲಿ ಪಾಲಿಕೆ ನಿಧಿ ಶೇ ೭.೨೫ ರಡಿಯಲ್ಲಿ ರೂ. ೨.೧೩ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಇಂದು ಪಟ್ಟಲದಮ್ಮನ ದೇವಸ್ಥಾನದ ಬಳಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಸರ್ಕಾರಿ ಶಾಲೆಯ ೫, ೬ನೇ ಕ್ರಾಸ್ ರಸ್ತೆಯಲ್ಲಿ ಚರಂಡಿ ಅಭಿವೃದ್ಧಿ, ಸ್ಲಾ÷್ಯಬ್ ಅಳವಡಿಕೆ, ಎ.ಕೆ. ಕಾಲೋನಿ ಹಾಗೂ ಕಾಂಟೂರ್ ರಸ್ತೆಗೆ ಹೊಂದಿಕೊAಡಿರುವ ಸ್ಲಂ ಬೋರ್ಡ್ ಮನೆಗಳ ಅಡ್ಡ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ, ಡಕ್ ನಿರ್ಮಾಣ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ, ಸರ್ಕಾರಿ ಶಾಲೆ ಮುಂಭಾಗದ ರಸ್ತೆಯ ಮರುಡಾಂಬರೀಕರಣ ಹಾಗೂ ಒಳಚರಂಡಿ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಮೊದಲ ಆದ್ಯತೆ ಕ್ಷೇತ್ರದಲ್ಲಿನ ಒಳಚರಂಡಿ ಸಮಸ್ಯೆಗಳಿಂದ ಮುಕ್ತಗೊಳಿಸುವುದು. ಒಳಚರಂಡಿ ಕಾಮಗಾರಿ ಮಾಡಿದ ನಂತರವೇ ಮಳೆ ನೀರು ಚರಂಡಿ ಹಾಗೂ ರಸ್ತೆ ಮಾಡಲು ಸೂಚಿಸಿದ್ದು, ರಸ್ತೆ, ಚರಂಡಿ ಮತ್ತು ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ಷೇತ್ರದ ಹಲವು ವಾರ್ಡ್ ಗಳಲ್ಲಿ ಕಾಮಗಾರಿ ನಡೆಯುತ್ತಿರುವಂತೆ ಈ ಪ್ರದೇಶದಲ್ಲೂ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಗುಣಮಟ್ಟದ ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ ಕೊಪ್ಪಲು, ಮಾಜಿ ಪಾಲಿಕೆ ಸದಸ್ಯ ಶ್ರೀನಿವಾಸ್, ಮುಖಂಡರಾದ ಕೃಷ್ಣೇಗೌಡ, ಶ್ರೀನಿವಾಸ್, ಗಣೇಶಣ್ಣ, ಮುತ್ತು, ಮಾದೇವ, ಪುಟ್ಟ ಮಾದಯ್ಯ, ಚೆಲುವರಾಜು, ಕೃಷ್ಣಪ್ಪ, ಬನ್ನಾರಿ, ಬಾಬಣ್ಣ, ಪುಟ್ಟಲಕ್ಷ÷್ಮಮ್ಮ, ಬನ್ನಾರಿ ಚಿಯಾನ್, ವೆಂಕಟೇಶ್, ಚೆಲುವ, ಪಾಲಿಕೆ ವಲಯ ಅಭಿವೃದ್ಧಿ ಅಧಿಕಾರಿಯಾದ ಹಿತೇಂದ್ರ, ಸಹಾಯಕ ಇಂಜಿನಿಯರ್ ಅಶ್ವಿನಿ, ವಾಣಿ ವಿಲಾಸದ ಎಇಇ ಶುಶ್ರುತ್, ಇಂಜಿನಿಯರ್ ಗಿರೀಶ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು