Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗಿಡಗಳನ್ನು ನೆಡುವ ಮೂಲಕ ಕಾರ್ಗಿಲ್ ವಿಜಯ ದಿವಸ ಆಚರಣೆ


ಮೈಸೂರು; ಕಾರ್ಗಿಲ್ ವಿಜಯ ದಿವಸವನ್ನು ಇಂದು ಟೀಂ ಮೈಸೂರು ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು, ಇಂದಿರಾನಗರ ಜೊತೆಗೂಡಿ ೪೦ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.
ಇಟ್ಟಿಗೆಗೂಡಿನ ಮಕ್ಕಳ ಉದ್ಯಾನವನದಲ್ಲಿ ೪೦ ಗಿಡಗಳನ್ನು ನೆಟ್ಟು ವೀರ ಯೋಧರಿಗೆ ಗೌರವ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿಸಲಾಯಿತು.
ಈ ವೇಳೆ ಮಾತನಾಡಿದ ತಂಡದ ಮುಖಂಡ ಗೋಕುಲ್ ಗೋವರ್ಧನ್,ಯೋಧರು ದೇಶವನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿರುತ್ತಾರೆ, ಆದರೆ ದೇಶದ ಒಳಗೆ ಇರುವ ನಾಗರೀಕರು ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣ ನಮ್ಮ ಕರ್ತವ್ಯ ಎಂಬುದನ್ನು ಮರೆತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ವನರಾಜು , ಗ್ರಾ÷್ಯಜುಯೇಟ್ಸ್ ಬ್ಯಾಂಕ್ ನಿರ್ದೇಶಕ ರಾಜರಾಮ್, ಬಿಜೆಪಿ ಮುಖಂಡ ನವೀನ್, ಟೀಂ ಮೈಸೂರಿನ ಕಿರಣ್ ಜೈರಾಮ್ ಗೌಡ, ಹಿರಿಯಣ್ಣ, ತ್ರಿಮೂರ್ತಿ, ಬಸವರಾಜು ಬೆಳವಾಡಿ, ಬಾಲಕೃಷ್ಣ, ಮನೋಹರ್, ಬಸವರಾಜು ಬಳ್ಳಾರಿ, ಹೇಮಂತ್, ಮಂಜು ಹುಣಸೂರು, ಹರೀಶ್ ಎಲೆಕ್ಟಿçಕಲ್, ಶೇಖರ್ ಬ್ಯಾಟರಿ, ತಿಲಕ್, ಕೃಷ್ಣ ಕೇಬಲ್, ಹರೀಶ್ ಗೋಕುಲಂ, ಅರುಣ್ ಇಟ್ಟಿಗೆಗೂಡು, ಮಕ್ಕಳಾದ ನಯನೀತಾ ಮತ್ತು ಯಶ್ಮಿತ್, ಲಯನ್ಸ್ ಕ್ಲಬ್ ಆಫ್ ಮೈಸೂರು, ಇಂದಿರಾನಗರದ ಕಾರ್ಯದರ್ಶಿ ಆರ್. ಎಚ್. ಕುಮಾರ್, ಖಜಾಂಚಿ ಡಿ. ಪ್ರಶಾಂತ್, ಮಾಜಿ ಅಧ್ಯಕ್ಷ ವೆಂಕಟೇಶ್ ಹಾಗೂ ಸದಸ್ಯರು ಭಾಗವಹಿಸಿ ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಸಂಕಲ್ಪ ಮಾಡಿದರು.