
ಅಂಬಾವಿಲಾಸ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿದ ಮೊದಲ ಹಂತದ ಗಜಪಡೆ
ಅರಮನೆಗೆ ಆಗಮಿಸಿದ ಗಜಪಡೆಗೆ ಸಾಂಪ್ರದಾಯಕ ಪೂಜೆ ಸಲ್ಲಿಸುವ ಮೂಲಕ ಸ್ವಾಗತ
*ವಾದ್ಯದ ಸದ್ದಿಗೆ ಬೆದರಿ ಹಿಂದೆ ಹೆಜ್ಜೆ ಹಾಕಿದ ಶ್ರೀರಾಮ
ಮೈಸೂರು: ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವ ಪ್ರಸಿದ್ದ ನಾಡಹಬ್ಬ ಮೈಸೂರು ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳಲೆಂದು ಕಾಡಿನಿಂದ ಅರಮನೆ ನಗರಿ ಮೈಸ್ರರಿಗೆ ಆಗಮಿಸಿರುವ ಮೊದಲ ಹಂತದ ಗಜಪಡೆ ಶುಕ್ರವಾರ ವಿಶ್ವಪ್ರಸಿದ್ಧ ಅಂಬಾವಿಲಾಸ ಅರಮನೆಯನ್ನು ಪ್ರವೇಶಿಸಿ ವಾಸ್ತವ್ಯ ಹೂಡಿದವು.
ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ವೀರನಹೊಸಹಳ್ಳಿಯಿಂದ ಗಜಪಯಣದ ಮೂಲಕ ಮೈಸೂರಿನ ಅರಣ್ಯ ಭವನದಕ್ಕೆ ಆಗಮಿಸಿ ಎರಡು ದಿನಗಳ ಕಾಲ ತಂಗಿದ್ದ ಗಜಪಡೆಗೆ ಶುಕ್ರವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಂಪ್ರದಾಯಿಕ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಬೆಳಿಗ್ಗೆ ೭.೪೫ ಕ್ಕೆ ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ನಡೆಯಿತು. ಆನೆಗಳಿಗೆ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಕಲ್ಲು ಸಕ್ಕರೆ, ಹೋಳಿಗೆ, ಬೆಲ್ಲ, ಕಬ್ಬು, ಮೋದಕ ನೈವೇದ್ಯ ನೀಡಿ ‘ಶೋಡಷೋಪಚಾರ’ ಪೂಜೆ ಮಾಡಿದರು. ಬಳಿಕ ಗಜಪಡೆಯನ್ನು ಅಲ್ಲಿಂದ ಬೀಳ್ಕೋಡಲಾಯಿತು. ಬಳಿಕ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಬಿಗಿ ಭದ್ರತೆಯಲ್ಲಿ ರಾಜ ಬೀದಿಯಲ್ಲಿ ರಾಜಗಾಂಭೀರ್ಯದಿAದ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಗಜಪಡೆಯನ್ನು ನೋಡಲು ಜನರು ರಸ್ತೆಯ ಇಕ್ಕಲೆಗಳಲ್ಲಿ ಜಮಾಯಿಸಿದರು. ಕಣ್ಣ ಮುಂದೆ ಸಾಗುತ್ತಿದ್ದ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಹಾಗೂ ಹೆಣ್ಣು ಆನೆಗಳಾದ ಲಕ್ಷಿ÷್ಮÃ ಮತ್ತು ಕಾವೇರಿ ಆನೆಗಳನ್ನು ನೋಡಿ ಕಣ್ತುಂಬಿಕೊAಡರು. ತಮ್ಮ ಮೊಬೈಲ್‌ಗಳಲ್ಲಿ ಆನೆಗಳ ಚಿತ್ರಗಳನ್ನು ಕಿಕ್ಲಿಸಿಕೊಂಡು ಖುಷಿಪಟ್ಟರು.
ರಾಜ ಬೀದಿಗಳಲ್ಲಿ ಸಾಗಿ ಕೊನೆಗೆ ವಸ್ತು ಪ್ರದರ್ಶನ ಮೈದಾನದ ಎದುರು ಇರುವ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಂದಾಗ ಅವುಗಳಿಗೆ ಅರಮನೆಯ ಆಡಳಿತ ಮಂಡಳಿಯ ವತಿಯಿಂದ ಸಾಂಪ್ರದಾಯಿಕ ಪುಷ್ಪಾರ್ಚನೆ ಮಾಡಲಾಯಿತು. ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಪೂಜೆ ಸಲ್ಲಿಸಿದರು. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದರು. ಶಾಸಕರುಗಳಾದ ಟಿ.ಎಸ್.ಶ್ರೀವತ್ಸ, ಕೆ. ಹರೀಶ್ ಗೌಡ,ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ,ಜಿಲ್ಲಾಧಿಕಾರಿ ಜಿ. ಲಕ್ಷಿಂಕಾAತರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಬಳಿಕ ನಾದಸ್ವರ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಗಜಪಡೆಯನ್ನು ಅರಮನೆಯ ಮುಂಭಾಗಕ್ಕೆ ಕರೆದ್ಯೋಯ್ದು ಸಾಲಾಗಿ ನಿಲ್ಲಿಸಲಾಯಿತು. ಅಲ್ಲಿ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬಗಳಿಗೆ ದಿನಬಳಿಕೆಗೆ ಅಗತ್ಯವಾಗಿರುವ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಯಿತು. ಬಳಿಕ ಮಾವುತರು, ಕಾವಾಡಿಗಳು ಆನೆಗಳನ್ನು ಅವುಗಳಿಗೆಂದು ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್‌ಗಳಿಗೆ ಕರೆದುಕೊಂಡು ಹೋಗಿ ಬಿಟ್ಟರು. ತಮಗೆ ನೀಡಲಾದ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸ್ತವ್ಯ ಹೂಡಿದರು.
ವಾದ್ಯದ ಸದ್ದಿಗೆ ಬೆದರಿ ಹಿಂದಕ್ಕೆ ಓಡಿದ ಶ್ರೀರಾಮ; ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬರುತ್ತಿದ್ದಂತೆ ವಾಲಗ, ವಾದ್ಯಗಳ ಸದ್ದು ಜೋರಾಯಿತು. ಇದರಿಂದ ಬೆದರಿ ಗಾಬರಿಯಾದ ಶ್ರೀರಾಮ ಆನೆ, ಒಳಕ್ಕೆ ಬಾರದೆ ಹಿಂತಿರುಗಿ ಹೆಜ್ಜೆ ಹಾಕತೊಡಗಿತು. ಅದು ಗಾಬರಿಯಾಗಿರುವುದನ್ನು ಅರಿತ ಮಾವುತ, ಕಾವಾಡಿಗಳು ಅದನ್ನು ನಿಯಂತ್ರಣಕ್ಕೆ ತಂದರು. ಬಳಿಕ ಸಮಾಧಾನಗೊಂಡ ಶ್ರೀರಾಮ ಅರಮನೆಯ ಆವರಣಕ್ಕೆ ಬಂದು ನಿಂತ. ಈ ಘಟನೆಯಿಂದಾಗಿ ಕೆಲಕಾಲ ಆತಂಕದ ಪರಿಸ್ಥಿತಿ ಎದುರಾಗಿತ್ತು.
——ಕೋಟ್ —
ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಹಾಗೂ ಹೆಣ್ಣು ಆನೆಗಳಾದ ಲಕ್ಷಿ÷್ಮÃ ಮತ್ತು ಕಾವೇರಿ ಅರಮನೆಗೆ ಪ್ರವೇಶ ಮಾಡಿದ ಆನೆಗಳಾಗಿದ್ದು, ಈ ಆನೆಗಳ ತೂಕದ ನಂತರ ಜಂಬೂಸವಾರಿಗೆ ಸಿದ್ಧ ಮಾಡುವ ತಾಲೀಮು ಆರಂಭವಾಗುತ್ತದೆ
- ಡಿಸಿಎಫ್ ಪ್ರಭುಗೌಡ

