Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿ ಕಿರುಕುಳ ಕೊಡಬೇಡಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ರಾಜ್ಯದಲ್ಲಿ ಬಳೆ ಬಾರದೆ ಬರಗಾಲ ಆವರಿಸಿದೆ. ಮೈಸೂರು ಜಿಲ್ಲೆಯ ೮ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ಕೊಡಬಾರದು, ಒತ್ತಡ ಹೇರಬಾರದು’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಮೈಸೂರಿನ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಂದ ಬೆಳೆ ವಿಮೆ ನೋಂದಣಿ ಮಾಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಈಗಾಗಲೇ ಬರದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವಿಮಾ ಪರಿಹಾರ ಸಿಗುವಂತೆ ಮಾಡಬೇಕು’ಬೆಳೆ ನಷ್ಟವಾಗಿರುವ ರೈತರಿಗೆ ವಿಮಾ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯದಲ್ಲಿ ತೀವ್ರ ಬರ ಉಂಟಾಗಿರುವುದರಿAದ ಜಿಲ್ಲೆಯಲ್ಲಿ ರೈತರು ಬಿತ್ತನೆೆ ಮಾಡಿರುವ ಬೆಳೆಯ ಪರಿಸ್ಥಿತಿ ಹೇಗಿದೆ ಎಂಬುವುದರ ಕುರಿತು ಜಂಟಿ ಸರ್ವೆ ನಡೆಸಿ, ಅಧಿಕಾರಿಗಳು ವರದಿ ನೀಡಬೇಕು. ಮೈಸೂರು ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಬರ ಪರಿಹಾರ ಸೌಲಭ್ಯಗಳು ರೈತರಿಗೆ ಪಾರದರ್ಶಕವಾಗಿ ದೊರೆಯುವಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ತಿಳಿಸಿದರು.
ಮುಸುಕಿನ ಜೋಳಕ್ಕೆ ಬಿಳಿ ಸುಳಿರೋಗ ಬಂದು ಹೆಚ್ಚಿನ ಬಳೆ ನಷ್ಟ ಆಗಿದ್ದು, ವಿಶೇಷವಾಗಿ ಪರಿಗಣಿಸಿ ಬೆಳೆ ನಷ್ಟದ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ.ಲಕ್ಷಿ÷್ಮÃಕಾಂತ ರೆಡ್ಡಿ, ಶೀಘ್ರದಲ್ಲೇ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗುವುದು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆಯಾಗಿದೆ. ಈಗಾಗಲೇ ೮ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪಿರಿಯಾಪಟ್ಟಣ ತಾಲ್ಲೂಕಲ್ಲೂ ಬಹಳ ನಷ್ಟ ಉಂಟಾಗಿದ್ದು, ಅದನ್ನೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಮಳೆ ಕೊರತೆ ಇರುವುದರಿಂದಾಗಿ, ಭತ್ತ ಹಾಕಲೇಬೇಡಿ ಎಂದು ರೈತರಿಗೆ ತಿಳಿಸಲಾಗುತ್ತಿದೆ’ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ‘ಜಿಲ್ಲೆಯಲ್ಲಿ ಶೇ.೪೭ರಷ್ಟು ಮಳೆ ಕೊರತೆ ಉಂಟಾಗಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿ ಕೆಲ ದಿನಗಳಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ವೇ ನಂಬರ್‌ವಾರು, ವಿಸ್ತೀರ್ಣವಾರು ಹಾಗೂ ಬೆಳೆವಾರು ಸಮೀಕ್ಷೆಗೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ ೫೦ರಷ್ಟು ಮಾತ್ರ ಬಿತ್ತನೆ ಆಗಿದೆ. ನೀರಾವರಿಯಲ್ಲಿ ಆಗಿರುವುದು ೨೩ಸಾವಿರ ಹೆಕ್ಟೇರ್ ಮಾತ್ರ. ಬಿತ್ತಿದ್ದರಲ್ಲೂ ಇಳುವರಿಯೇ ಸರಿಯಾಗಿ ಬಂದಿಲ್ಲ. ನೀರು ಕೊಡುವುದಿಲ್ಲ ಎಂದು ಹೇಳಿದ್ದರೂ ರೈತರು ಈಗಾಗಲೇ ೧೨ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಕಿಬಿಟ್ಟಿದ್ದಾರೆ’ ಎಂದರು.
ಸರ್ಕಾರಕ್ಕೆ ಶಿಫಾರಸು ಮುಸುಕಿನಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡಿದ್ದು, ಬಹಳ ನಷ್ಟ ಸಂಭವಿಸಿದೆ. ಈ ಕಾರಣದಿಂದಾಗಿ, ಮುಂದಿನ ಒಂದೆರಡು ವರ್ಷ ಆ ಬೆಳೆ ಹಾಕಿದರೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ, ಬೀಜ ವಿತರಿಸದಂತೆ, ದೊರೆಯದಂತೆ ನೋಡಿಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಎಚ್.ಡಿ. ಕೋಟೆ, ಸರಗೂರು ಭಾಗದಲ್ಲಿ ಬಹಳ ನಷ್ಟ ಆಗಿದೆ’ ಎಂದು ಹೇಳಿದರು.
೭೭ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಆಗಬೇಕಾಗಿತ್ತು. ಇನ್ಮುಂದೆ ರಾಗಿ ಹಾಕಿದರೆ ಪ್ರಯೋಜನವಿಲ್ಲ. ಹಿಂದೆ ಸರಾಸರಿ ೮ಸಾವಿರ ಮಂದಿ ಬೆಳೆ ವಿಮೆಗೆ ನೋಂದಾಯಿಸುತ್ತಿದ್ದರು. ಈ ಬಾರಿ ಪ್ರಚಾರ ಕೈಗೊಂಡಿದ್ದರಿAದ ೨೨ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದಾರೆ’ ಎಂದು ತಿಳಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಕುಶಾಲನಗರ ಹೈವೇ ಎನ್.ಎಚ್ ೨೭೫ ನ್ನು ಡಿಸೆಂಬರ್ ೨೦೨೭ ರ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್ ಫ್ಲೈ ಓವರ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಎಂದರು.

ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸಿ ಅಪಘಾತ ಸಂಭವಿಸದAತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹುಣಸೂರು ತಾಲೂಕಿನ ಲಕ್ಷ್ಮಣತೀರ್ಥ ನದಿಯ ಸೇತುವೆ ಕಾಮಗಾರಿ ವಿಳಂಬವಾಗಿದ್ದು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸಾಕು ಪ್ರಾಣಿಗಳಿಗೆ ನಾಯಿ ಕಚ್ಚಿದರೆ ರೇಬಿಸ್ ಚಿಕಿತ್ಸೆ ನೀಡಲು ದಾಸ್ತಾನು ಸಂಗ್ರಹಣೆ ಮಾಡಿಕೊಳ್ಳಿ, ನಾಯಿಗಳಿಗೆ ರೇಬಿಸ್ ಚಿಕಿತ್ಸೆ ನೀಡುವ ಮೂಲಕ ರೇಬಿಸ್ ಹರಡದಂತೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಪಶುಸಂಗೋಪನಾ ಇಲಾಖೆಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಮೈಸೂರಿನ ‘ವಿದ್ಯಾರಣ್ಯಪುರಂ ಘನತ್ಯಾಜ್ಯ ಘಟಕದಲ್ಲಿ ೫ ಲಕ್ಷ ಟನ್ ಕಸ ವಿಲೇವಾರಿಯನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಾಡಲಾಗಿದೆ. ಉಳಿದ ೨ ಲಕ್ಷ ಟನ್ ಕಸ ವಿಲೇವಾರಿ ಮಾಡಲು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದರು
ಸಭೆಯಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಡಿ. ಹರೀಶ್‌ಗೌಡ, ದಿನಾ ಸಮಿತಿ ಸದಸ್ಯರಾದ ಅಶ್ವಿನ್‌ಕುಮಾರ್, ಪ್ರೇಮಾ ಶಂಕರೇಗೌಡ, ನರಸಿಂಹಸ್ವಾಮಿ, ಜಿ.ಪಂ. ಸಿಇಒ ಎಸ್.ಯುಕೇಶ್‌ಕುಮಾರ್. ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರಪಾಲಿಕೆ ಆಯುಕ್ತ ಎಂ.ಕೆ. ಸವಿತಾ ಉಪಸ್ಥಿತರಿದ್ದರು.