Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಂಗೀತ ಮತ್ತು ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಪೂರಕ

ಮೈಸೂರು; ಸಂಗೀತ ಮತ್ತು ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಪೂರಕ ಹಾಗೂ ಮಾನಸಿಕ ಬೌದ್ಧಿಕ ವಿಕಸನಕ್ಕೆ ನೆರವಾಗುತ್ತದೆ ಎಂದು ವಿದುಷಿ ಮೀರಾ ಮಂಜುನಾಥ್ ಹೇಳಿದರು.

ನಗರದ ವಿಜಯ ವಿಠಲ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ನಗರ ಮಟ್ಟದ ಅಂತರಕಾಲೇಜು ಸಾಮಾನ್ಯe್ಞÁನ ರಸಪ್ರಶ್ನೆ ಮತ್ತು ಭಾವಗೀತೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಸಿಎ ವಿಶ್ವನಾಥ.ಎ ಮಾತನಾಡಿ, ಇಂದಿನ ಒತ್ತಡದ ಯುಗದಲ್ಲಿ ಸಂಗೀತ ಮತ್ತು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕ್ರಿಯಾಶೀಲರಾಗಬಹುದು. ಭಾವಗೀತೆಗಳನ್ನು ಕಲಿತು ಹಾಡುವುದರ ಮೂಲಕ ಜೀವನೋತ್ಸಾಹ ಹೆಚ್ಚಾಗುವುದು. ಸಂಗೀತ, ರಸಪ್ರಶ್ನೆ ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಮೂಲ ಜ್ಞಾನವನ್ನು ಅರಿಯಲು ಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನವಲ್ಲ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎಚ್.ಸತ್ಯಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ, ಶಿಸ್ತುಬದ್ಧ ಜೀವನ ಹಾಗೂ ದೇಶಪ್ರೇಮದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲೆ ಎಸ್.ಎ. ವೀಣಾ, ಸಿರಿ ಮತ್ತು ವೈಷ್ಣವಿ , ವರ್ಷ, ಶ್ರೀವಿದ್ಯಾ ಉಪಸ್ಥಿತರಿದ್ದರು.
ಭಾವಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ವಿದುಷಿ ಸುಜಲ ಗೋರೆ ಮತ್ತು ವಿದುಷಿ ಭುವನೇಶ್ವರಿ ಮತ್ತು ರಸಪ್ರಶ್ನೆ ಸ್ಪರ್ಧೆಯ ತೀರ್ಪುಗಾರರಾಗಿ ಉಪನ್ಯಾಸಕ ಗಣೇಶ್.ಎಸ್ ಕಾರ್ಯನಿರ್ವಹಿಸಿದರು.

ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲರಾದ ವೀಣಾ.ಎಸ್.ಎ. ಬಹುಮಾನಗಳನ್ನು ವಿತರಿಸಿದರು. ಗಾಯಿತ್ರಿ ಯೋಗೇಶ್, ಕಾರ್ಣಿಕಾ ವಿ ನಾಯಕ್, ತನಿಷ್ಕಾ ಕೆ ಹಾಜರಿದ್ದರು.

ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರು
ಭಾವಗೀತೆ ಸ್ಪರ್ಧೆ
ಪ್ರಥಮ ಬಹುಮಾನ : ವೇಣುಗೋಪಾಲ್ (ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜು)
ದ್ವಿತೀಯ ಬಹುಮಾನ : ಲಹರಿ (ಸೇಪಿಯೆಂಟ್ ಪದವಿಪೂರ್ವ ಕಾಲೇಜು)
ತೃತೀಯ ಬಹುಮಾನ : ರಕ್ಷಾ ರಾವ್ (ಜ್ಞಾನೋದಯ ಪದವಿಪೂರ್ವ ಕಾಲೇಜು)
ಸಮಾಧಾನಕರ ಬಹುಮಾನ : ೧. ನಿರಾಮಯ ವಿ ರಾವ್ (ಮರಿಮಲ್ಲಪ್ಪ ಪದವಿಪೂರ್ವ ಕಾಲೇಜು)
೨. ಸಾನ್ವಿ,.ಆರ್ (ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪದವಿಪೂರ್ವ ಕಾಲೇಜು)
ಪರ್ಯಾಯ ಪಾರಿತೋಷಕ : ಜ್ಞಾನೋದಯ ಪದವಿಪೂರ್ವ ಕಾಲೇಜು

ರಸಪ್ರಶ್ನೆ ಸ್ಪರ್ಧೆ
ಪ್ರಥಮ ಬಹುಮಾನ : ಜೀವನ್.ಜಿ ಮತ್ತು ಆಸ್ಟಿನ್ ಎ (ಸದ್ವಿದ್ವಾ ಸಂಯುಕ್ತ ಪದವಿಪೂರ್ವ ಕಾಲೇಜು)
ದ್ವಿತೀಯ ಬಹುಮಾನ : ಶರಧಿ ಜಿ ಶಾಸ್ತಿç ಮತ್ತು ಲಾಯಲ್ ರಿಚರ್ಡ್ ಪಸ್ಸನ್ಹ (ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಕಾಲೇಜು)
ತೃತೀಯ ಬಹುಮಾನ : ಧನುಷ್.ಆರ್ ಮತ್ತು ದುರ್ಗಾ ಪ್ರಸಾದ್ ಎನ್ (ಮರಿಮಲ್ಲಪ್ಪ ಪದವಿಪೂರ್ವ ಕಾಲೇಜು)
ಸಮಾಧಾನಕರ ಬಹುಮಾನ : ಭುವನ್ ಜಿ ಮತ್ತು ಯೋಗಾನಂದ (ಗುರುಕುಲ ಪದವಿಪೂರ್ವ ಕಾಲೇಜು)
ಪರ್ಯಾಯ ಪಾರಿತೋಷಕ : ಸದ್ವಿದ್ವಾ ಸಂಯುಕ್ತ ಪದವಿಪೂರ್ವ ಕಾಲೇಜು