Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾದ ಜಂಬೂಸವಾರಿಯಲ್ಲಿ ಭಾಗವಹಿಸಲು ಜಾನಪದ ಕಲಾತಂಡಗಳಿ0ದ ಅರ್ಜಿ ಆಹ್ವಾನ


ಮೈಸೂರು: ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದ್ದು, ಸೆ. ೧೬ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಮೆರವಣಿಗೆಯಲ್ಲಿ ಭಾಗವಹಿಸಲು ಬಯಸುವ ಕಲಾತಂಡಗಳು ಅರ್ಜಿ ಸಲ್ಲಿಸುವಾಗ ತಮ್ಮ ತಂಡದ ಉತ್ತಮ ಭಾವಚಿತ್ರದೊಂದಿಗೆ ತಂಡದ ಸದಸ್ಯರುಗಳ ವಿವರ, ಅಂಚೆ ವಿಳಾಸ ಮತ್ತು ತಂಡದ ಮುಖ್ಯಸ್ಮರ ಮೊಬೈಲ್, ದೂರವಾಣಿ ಸಂಖ್ಯೆ ವಿವರವನ್ನು ಒಳಗೊಂಡAತೆ ಅರ್ಜಿಯನ್ನು ಸಮನ್ವಯಾಧಿಕಾರಿಗಳು, ದಸರಾ ಮೆರವಣಿಗೆ ಮತ್ತು ಸ್ತಬ್ದಚಿತ್ರ ಉಪಸಮಿತಿ ಹಾಗೂ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು – ೫೭೦೦೦೫ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಎಂದು ದಸರಾ-೨೦೨೬ ಮೆರವಣಿಗೆ ಮತ್ತು ಸ್ತಬ್ಧಚಿತ್ರ ಉಪಸಮಿತಿಯ ಸಮನ್ವಯಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ.ಸುದರ್ಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.