
ಮೈಸೂರು: ರಂಗಭೂಮಿಯ ಹಿರಿಯ ಕಲಾವಿದೆ ಇಂದಿರಾ ನಾಯರ್ (೭೬) ಹೃದಯಾಘಾತದಿಂದ ಶುಕ್ರವಾರ ಮೈಸೂರಿನಲ್ಲಿ ನಿಧನರಾದರು.
ಅವರಿಗೆ ಇಬ್ಬರು ಪುತ್ರರು ಇದ್ದಾರೆ.
ಅವರ ದೇಹದಾನ ಶನಿವಾರ ಎಂಎAಸಿಗೆ ಹಸ್ತಾಂತರಿಸಲಾಗುವುದು. ಈಗಾಗಲೇ ಅವರ ನೇತ್ರದಾನ ನಡೆಯಿತು.
ಶನಿವಾರ ಬೆಳಿಗ್ಗೆ ೧೧ ಗಂಟೆಯವರೆಗೆ ಮೈಸೂರಿನ ಬೋಗಾದಿಯ ೨ನೇ ಹಂತದ ೪ನೇ ಮುಖ್ಯರಸ್ತೆಯಲ್ಲಿರುವ ಅವರ. ಮನೆಯಲ್ಲಿ ಅಂತಿಮ ದರ್ಶನ ಪಡೆಯಬಹುದು.
ವೃತ್ತಿಯಿಂದ ವಾಕ್ ಮತ್ತು ಶ್ರವಣ ತಜ್ಞರಾಗಿದ್ದ ಅವರು, ರಂಗಭೂಮಿ, ಚಲನಚಿತ್ರ ಮತ್ತು ಕಿರುಚಿತ್ರಗಳಲ್ಲಿ ನಟಿಸಿದ್ದರು.
ಕಾಲೇಜು ದಿನಗಳಲ್ಲಿಯೇ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಅಭಿನಯದ ಮೂಲಕ ರಂಗಪಯಣ ಆರಂಭಿಸಿದ ಅವರು, ಉಲ್ಲಾಳ್ ಶೀಲ್ಡ್ ಸೇರಿದಂತೆ ಹಲವು ರಾಜ್ಯಮಟ್ಟದ ನಾಟಕೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದರು.
ವಿದ್ಯಾಭ್ಯಾಸದ ನಂತರ `ಸಮತೆಂತೋ’ ರಂಗತAಡದ ಪ್ರಮುಖ ನಾಟಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿವಾಹದ ನಂತರ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಸುಮಾರು ೩೫ ವರ್ಷಗಳ ಕಾಲ ರಂಗಭೂಮಿಯಿAದ ದೂರವಿದ್ದರೂ ರಂಗಭೂಮಿಯ ಮೇಲಿದ್ದ ಅಪಾರ ಪ್ರೀತಿ ಹಾಗೂ ಬದ್ಧತೆಯಿಂದಾಗಿ ೨೦೧೦ರಲ್ಲಿ ರಂಗಭೂಮಿಗೆ ಪ್ರವೇಶಿಸಿದರು.
ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಮೈಸೂರಿನ ರಂಗಕ್ಷೇತ್ರದಲ್ಲಿ ಮುಖ್ಯ ನಟಿಯಾಗಿ, ಸಂಘಟಕಿಯಾಗಿ ಮತ್ತು ಕಾರ್ಯಕರ್ತೆಯಾಗಿ ಶ್ರಮಿಸಿದರು.
ಯಾವುದೇ ಪಾತ್ರ ನೀಡಿದರೂ ಅದರ ಪ್ರತಿಯೊಂದು ಸೂಕ್ಷ÷್ಮತೆಯನ್ನು ಗ್ರಹಿಸಿ ಜೀವ ತುಂಬುವ ಅಭಿನಯ ಅವರದ್ದು. ಅವರು ಅಭಿನಯಿಸಿ ಮೆಚ್ಚುಗೆ ಪಡೆದ ಕೆಲವು ಪ್ರಮುಖ ನಾಟಕಗಳು:
ನೀರ್ಮಾದಳದ ಹೂವಿನೊಂದಿಗೆ… (ಲೇಖಕಿ ಕಮಲಾದಾಸ್ ಅವರ ಜೀವನವನ್ನಾಧರಿಸಿದ ಏಕವ್ಯಕ್ತಿ ಪ್ರದರ್ಶನ), ಭೂತಗಳು, ಹುಲಿಯ ನೆರಳು, ಅಂಧಗಾAಧಾರ, ಪುರುಷಾರ್ಥ, ಬೇರಿಲ್ಲದವರು, ಕಾಕ್ಟೆöÊಲ್ ಪಾರ್ಟಿ, ರುಡಾಲಿ, ಸೊನಾಟ, ಕದಡಿದ ನೀರು, ಮಾದ್ರಿಯ ಚಿತೆ, ಸ್ತಿçà ಸಂಭ್ರಮ.
ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ.
- ಕಿರುಚಿತ್ರಗಳು: ‘ಕಾಕಪೂ’, ‘ಕಡಲಾಸಪೂ’ ಮತ್ತು ‘ಏಕಾಂತತ’. (ಇದರಲ್ಲಿ ‘ಕಾಕಪೂ’ ಮತ್ತು ‘ಕಡಲಾಸಪೂ’ ಕಿರುಚಿತ್ರಗಳ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದರು).
ಪ್ರಶಸ್ತಿ ಮತ್ತು ಪುರಸ್ಕಾರಗಳು: - ಉತ್ತಮ ಪೋಷಕ ನಟಿ ಪ್ರಶಸ್ತಿ: ಕನ್ನಡದ ‘ಅವಲಕ್ಕಿ ಪವಲಕ್ಕಿ’ ಚಲನಚಿತ್ರದ ನಟನೆಗಾಗಿ.
- ಉತ್ತಮ ನಟಿ ಪ್ರಶಸ್ತಿ: ‘ಕಡಲಾಸಪೂ’ ಕಿರುಚಿತ್ರದ ಅದ್ಭುತ ಅಭಿನಯಕ್ಕಾಗಿ. (ಈ ಚಿತ್ರ ಹಾಗೂ ‘ಕಾಕಪೂ’ ಕಿರುಚಿತ್ರಗಳು ಹಲವು ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಆನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿವೆ).
೮ರAಗ ಪ್ರಶಸ್ತಿಗಳು: ಕಾಲೇಜು ದಿನಗಳಲ್ಲೇ ‘ಉಲ್ಲಾಳ್ ಶೀಲ್ಡ್’ ಸೇರಿದಂತೆ ವಿವಿಧ ನಾಟಕೋತ್ಸವಗಳಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿಗಳು.