Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೇವಲ 15 ನಿಮಿಷದಲ್ಲಿ ಫಟಾಫಟನೇ ಇಡ್ಲಿ ರೆಡಿಮಾಡಬಹುದು ಹೇಗೆ ಗೊತ್ತಾ !

15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ

ಕೇವಲ 15 ನಿಮಿಷದಲ್ಲಿ ಫಟಾಫಟನೇ ಇಡ್ಲಿ ರೆಡಿಮಾಡಬಹುದು ! ಹೇಗೆ ಗೊತ್ತಾ !
ಇಡ್ಲಿ ಬೇಕು ಅಂದ್ರೆ ಒಂದು ದಿನ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಕ್ಕಿ, ಉದ್ದಿನಬೇಳೆಯನ್ನು ಕನಿಷ್ಠ 6 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ ಮತ್ತೆ ಆರರಿಂದ ಏಳು ಗಂಟೆ ಕಾಲ ನೆನೆಸಿಟ್ಟುಕೊಂಡು ಚೆನ್ನಾಗು ಹುದುಗು ಬಂದ್ರೆ ಮಾತ್ರ ಮಲ್ಲಿಗೆಯಂಥ ಇಡ್ಲಿ ಸವಿಯಲು ಸಿಗುತ್ತದೆ. ಇಂದು ನಾವು ನಿಮಗೆ ಕೇವಲ 15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ ಮಾಡುವ ರೆಸಿಪಿ ಹೇಳುತ್ತಿದ್ದೇವೆ

ಇನ್‌ಸ್ಟಂಟ್ ಸಬ್ಬಕ್ಕಿ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ನೈಲಾನ್ ಸಬ್ಬಕ್ಕಿ: 250 ಗ್ರಾಂ, ಹುಳಿ ಮೊಸರು: 100 ಗ್ರಾಂ, ಸಣ್ಣರವೆ: 100 ಗ್ರಾಂ, ಸಾಸವೆ: 1/2 ಟೀ ಸ್ಪೂನ್, ಚಿಟಿಕೆ ಇಂಗು, 8 ರಿಂದ 10 ಗೋಡಂಬಿ, 1 ಟೀ ಸ್ಪೂನ್ ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನಕಾಯಿ, ಕರೀಬೇವು, ಕತ್ತರಿಸಿಕೊಂಡ ಗಜ್ಜರಿ, ಕೋತಂಬರಿ ಸೊಪ್ಪು ಮತ್ತು ಎಣ್ಣೆ
ಮೊದಲಿಗೆ ಒಂದು ಬಾಣಲೆಗೆ ನೈಲಾನ್ ಸಬ್ಬಕ್ಕಿ ಮತ್ತು ಸಣ್ಣರವೆ ಹಾಕಿಕೊಂಡು ಎರಡು ನಿಮಿಷ ರೋಸ್ಟ್ ಮಾಡಿಕೊಳ್ಳಿ. ಈಗ ಮತ್ತೊಂದು ಪಾತ್ರೆಯನ್ನು ಒಲೆ ಮೇಲಿಟ್ಟುಕೊಂಡು ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಿ. ಸಾಸವೆ, ಜೀರಿಗೆ, ಹಸಿಮೆಣಸಿನಕಾಯಿ, ಕರೀಬೇವು, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ.

ಸಬ್ಬಕ್ಕಿ ಮತ್ತು ರವೆ
ತದನಂತರ ಇದೇ ಒಗ್ಗರಣೆಗೆ ರೋಸ್ಟ್ ಮಾಡಿಟ್ಟುಕೊಂಡಿರುವ ಸಬ್ಬಕ್ಕಿ ಮತ್ತು ರವೆಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಹುಳಿ ಮೊಸರು ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 10 ನಿಮಿಷ ಎತ್ತಿಟ್ಟುಕೊಳ್ಳಬೇಕು.

ಈಗ ಕೊನೆಯದಾಗಿ ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಸಿದ್ಧ ಮಾಡಿಕೊಂಡಿರುವ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಬ್ಯಾಟರ್ ಮೇಲೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕ್ಯಾರಟ್ ಮತ್ತು ಕೋತಂಬರಿ ಸೇರಿಸಿ ಸ್ಟೀಮ್ ಮಾಡಿಕೊಂಡ್ರೆ ರುಚಿಯಾದ ಇನ್‌ಸ್ಟಂಟ್ ಸಬ್ಬಕ್ಕಿ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ಚಟ್ನಿ, ಸಾಂಬಾರ್ ಜೊತೆ ಇಡ್ಲಿ ಸವಿಯಬಹುದು