
ಎಚ್.ಡಿ.ಕೋಟೆ : ಸ್ಯಾಂಡಲ್ ವುಡ್ ಯುವ ನಟ ಆರ್ಯನ್ ನಟಿ ಜೀವಿತಾ ಪ್ರಭಾಕರ್ ಅಭಿನಯದಲ್ಲಿ ಮೂಡಿಬರುತ್ತಿರುವ love 2 ಲಸ್ಸಿ ಸಿನಿಮಾ ಬಂಟ್ವಾಳ ಹುಡಿಗಿ ಮತ್ತು ಬೆಂಗಳೂರು ಹುಡುಗನ ನಡುವಿನ ನೈಜ ಪ್ರೇಮ ಕಥೆ ಹೊಂದಿರುವ ಚಲನಚಿತ್ರವಾಗಿದೆ, ಈ ಚಿತ್ರದಲ್ಲಿ ಅನೇಕ ಹೆಸರಾಂತ ಕಲಾವಿದರು ನಟಿಸುತ್ತಿದ್ದು ಜನರು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ನೋಡುವ ಸಿನಿಮಾ ಆಗಲಿದೆ ಎಂದು ಚಿತ್ರದ ಯುವ ನಿರ್ದೇಶಕ ಹರಿಪ್ರಾಣ ಹೇಳಿದರು.
ಎಚ್.ಡಿ.ಕೋಟೆ ತಾಲೂಕು ಪತ್ರಕರ್ತರ ಸಂಘದಲ್ಲಿ love 2 ಲಸ್ಸಿ ಚಿತ್ರ ತಂಡ ಸುದ್ದಿಗೋಷ್ಠಿ ನಡೆಸಿ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.
ನಾನು ಇದೆ ತಾಲ್ಲೂಕಿನ ದಾಸನಪುರ ನಿವಾಸಿ ಸುಂದರ್ ನಾಯಕ್ ಅವರ ಸುಪುತ್ರ ನಾನು 2018 ರಿಂದಲೂ ಗಾಂಧಿನಗರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ, ಈಗಾಗಲೇ ಕನ್ನಡ, ತಮಿಳು, ತೆಲಗು ಭಾಷೆಯ ಸುಮಾರು 78 ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಈಗ ನಾನೇ ಗಂಗಾ ತೀರ್ಥ ಮತ್ತು love 2 ಲಸ್ಸಿ ಚಿತ್ರವನ್ನು ವಿವಿಧ ಬ್ಯಾನರ್ ಅಡಿಯಲ್ಲಿ ನಿರ್ದೇಶನ ಮಾಡುತ್ತಿದ್ದು ಎರಡು ಚಿತ್ರಗಳ ಬಹುತೇಕ ಚಿತ್ರೀಕರಣ ಮುಗಿದಿದ್ದು ಎರಡು ಸಿನಿಮಾಗಳು ನೈಜ ಕಥೆಗಳನ್ನು ಒಳಗೊಂಡಿವೆ, ಏಕಕಾಲದಲ್ಲಿ 2 ಸಿನಿಮಾಗಳನ್ನು ತೆರೆಗೆ ತರಲು ತಯಾರಿ ನಡೆಯುತ್ತಿದೆ ಆಗಸ್ಟ್ ತಿಂಗಳಲ್ಲಿ ರಿಲೀಸ್ ನಿರ್ಧಾರ ಮಾಡಲಾಗಿದೆ ಎಂದರು.
love 2 ಲಸ್ಸಿ ಸಿನಿಮಾದಲ್ಲಿ ಯಾವುದೇ ಸಾಹಸ ದೃಶ್ಯಗಲಿಲ್ಲ 5 ಹಾಡುಗಳಿದ್ದು ಎಲ್ಲ ಹಾಡುಗಳನ್ನು ನಾನೇ ಬರೆದಿದ್ದೇನೆ, ಚಿತ್ರ ಉತ್ತಮವಾಗಿ ಮೂಡಿ ಬಂದಿದೆ, ಎಲ್ಲ ವರ್ಗದ ಜನರ ಮನಸ್ಸನ್ನು ಗೆಲ್ಲುವುದರ ಜೊತೆಗೆ ಸಾಕಷ್ಟು ಹಣವನ್ನು ತಂದು ಕೊಡಲಿದೆ ಎಂದ ಅವರು ನನ್ನ ಎರಡು ಸಿನಿಮಾಗಳ ಬಗ್ಗೆ ಈಡಿ ಕರ್ನಾಟಕದ ಎಲ್ಲ ಭಾಗಗಳಲ್ಲೂ ಪ್ರಚಾರ ಮಾಡುವ ಬಯಕೆಯೊಂದಿಗೆ ನನ್ನ ತವರು ನೆಲದಿಂದಲೇ ಪ್ರಚಾರ ಆರಂಭಿಸಿದ್ದೇನೆ ಸದ್ಯದಲ್ಲೇ ಎರಡು ಸಿನಿಮಾಗಳ ಟ್ರಯಲರ್ ಬಿಡುಗಡೆ ಆಗಲಿದೆ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆದ ಬಳಿಕೆ ನಮ್ಮ ಈಡಿ ಚಿತ್ರ ತಂಡ ಮತ್ತೊಮ್ಮೆ ತಾಲ್ಲೂಕಿಗೆ ಬಂದು ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ love 2 ಲಸ್ಸಿ ಸಿನಿಮಾದ ಕ್ಯಾಮರಾ ಮ್ಯಾನ್ ಲಕ್ಷ್ಮಿ ನಾರಾಯಣ್, ಸಹ ನಿರ್ದೇಶಕ ಹೆಮೇಶ್ ಇದ್ದರು.
————————————————–
ನಾನು ಎಚ್.ಡಿ.ಕೋಟೆ ತಾಲ್ಲೂಕಿನ ಮಗ ಸಾಕಷ್ಟು ಕನಸಿನೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟು ಶ್ರಮಪಟ್ಟು ದುಡಿದಿದ್ದೇನೆ ಕಲಿತಿದ್ದೇನೆ, ಈಗ ನಾನೇ ನೈಜ ಪ್ರೇಮ ಕಥೆಯ ಎರಡು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ನನ್ನಂತ ಗ್ರಾಮೀಣ ಯುವ ನಿರ್ದೇಶಕನ ಸಿನಿಮಾಗಳನ್ನು ಗೆಲ್ಲಿಸುವ ಮೂಲಕ ಜನರು ಆಶೀರ್ವಾದ ಮಾಡಬೇಕು.
ಹರಿಪ್ರಾಣ. ಯುವ ನಿರ್ದೇಶಕ
ದಾಸನಪುರ ಗ್ರಾಮ, ಎಚ್.ಡಿ.ಕೋಟೆ ತಾಲ್ಲೂಕು.