Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದೀನ, ದುರ್ಬಲರ ಬದುಕಿನ ಉದ್ದಾರಕಕ್ಕೆ ಜೀವನ ಸವೆಸಿದ ಸಂತ ಮಹಾಂತ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿ


ಮೈಸೂರು; ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಮೈಸೂರು ಇದರ ವತಿಯಿಂದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಹತ್ತಿರದ ಶಿವ ಸನ್ನಿಧಿ ಗೆಳೆಯರ ಬಳಗದ ಕಚೇರಿಯಲ್ಲಿ ಅಗಲಿದ ಚೇತನ ಡಾ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳವರ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಪೂಜ್ಯರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾತನಾಡಿದ ಕಲಾ ಬಳಗದ ಅಧ್ಯಕ್ಷ ಕಲ್ಮಳ್ಳಿ ನಟರಾಜು, ಸರ್ಕಾರಿ ಉದ್ಯೋಗ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವುದು ಅಷ್ಟು÷ ಸುಲಭದ ಮಾತಲ್ಲ. ಲೌಕಿಕವಾಗಿ ವೈಯಕ್ತಿಕ ಬದುಕನ್ನು ಹಸನುಮಾಡಿಕೊಳ್ಳುವುದರಿಂದ ನಾನು ಸುಖ ಸಂತೋಷವಾಗಿ ಜೀವಿಸಬಹುದೇ ಹೊರತು, ದುರ್ಬಲರ ಬದುಕಿಗೆ ಆಸರೆಯಾಗಲು ಸಾಧ್ಯವಿಲ್ಲ ಎನ್ನುವ ಅಂತರ್ಯಾದ ಒಳ ದನಿಗೆ ಕಿವಿಗೊಟ್ಟು, ಕೌಟುಂಬಿಕ ಬದುಕಿನಿಂದ ಹೊರ ಬಂದು, ಸಂತ ಪದವಿಯನ್ನು ತಪಸ್ಸು ಎಂದು ಪರಿಗಣಿಸಿ, ಅದನ್ನು ಸ್ವೀಕರಿಸಿ ಅದಕ್ಕೆ ತಮ್ಮ ಜೀವಿತ ಅವಧಿಯಲ್ಲಿ ಕಿಂಚಿತ್ತೂ ಕಳಂಕ ಬಾರದಂತೆ, ಅನ್ನ ಜ್ಞಾನ ಆಶ್ರಯ ನೀಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಟ್ಟ ಮಾತೃಹೃದಯದ ಸಂತ ಮಹಾಂತ ಎಂದರೆ ಅತಿಶಯೋಕ್ತಿ ಅಗಲಾರದು ಎಂದರು.
ತಮ್ಮ ಸೇವೆಗೆ ಜಾತಿ ಮತ ಪಂಥ ಯಾವುದನ್ನು ನೋಡದೆ ಸದ್ದಿಲ್ಲದೇ ಸೇವೆ ಗೈದ ನಡೆದಾಡುವ ದೇವರೆಂದೇ ಕರೆಯಿಸಿ ಕೊಂಡ ಲಿಂಗೈಕ್ಯ ಸಿದ್ದ ಗಂಗಾ ಮಠದ ಪೂಜ್ಯ ಡಾ ಶಿವ ಕುಮಾರ ಮಹಾ ಸ್ವಾಮಿಗಳು ಸೇವಾ ಬದುಕನ್ನೇ ಅನುಸರಿಸಿ ಆ ದಿಸೆಯಲ್ಲಿ ದೇಗುಲ ಮಠವನ್ನು ಮುನ್ನಡೆಸಿ ಸೇವಾ ಮುಕುಟ ಪ್ರಾಯರಾಗಿ ಕನಕಪುರದ ಹೆಸರಿಗೆ ತಕ್ಕಂತೆ ಅಮೂಲ್ಯ ಕನಕ ನಿಧಿಯಾದರು.
ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವಂತೆ ಈ ಮಹಾ ಚೇತನ ಅಗಲಿದ ದಿನ ಅವರನ್ನು ನೋಡಲು ಬಂದ ಎಲ್ಲ ಜಾತಿಯ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದು ಬಂದದ್ದನ್ನು ನೋಡಿದರೆ, ಶರಣರಿಗೆ ಸಾವಿಲ್ಲ, ಅವರು ನಿತ್ಯ ಮುಕ್ತರು ಸದಾ ಭಕ್ತರ ಹೃದಯದಲ್ಲಿ ಮನೆ ಮಾಡಿದ್ದಾರೆ ಎಂದರು
ಕಾರ್ಯಕ್ರಮದಲ್ಲಿ ಡಾ. ಕೆ.ವಿ.ಯೋಗೀಶ್, ಮಹದೇವಸ್ವಾಮಿ ತಮ್ಮ ಅನಿಸಿಕೆ ಹಂಚಿ ಕೊಂಡರು. ಮಹೇಶ್ ಪರಾಮಪುರ, ಶಿಕ್ಷಕ ಕೊತ್ತಲವಾಡಿ ಸಿದ್ದರಾಮೇಶ, ಎಲಕ್ಕೂರು ನಾಗೇಂದ್ರ, ಕಾಮಗೆರೆ ಬಸವಣ್ಣ, ಬಾಣಹಳ್ಳಿ ಸಂತೋಷ, ಭಜನೆ ಮತ್ತು ವಚನ ಚೂಡಾಮಣಿ ವಚನ ಗಾಯನ ನಡೆಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಪಂಚಾಯತ್ ಅಭಿರುದ್ದಿ ಅಧಿಕಾರಿ ಸೋಮಶೇಖರ್ , ರಂಗ ಕಲಾವಿದ ಮುಳ್ಳೂರ್ ಪಾರ್ವತಪ್ಪ, ಶಿವಕುಮಾರ್, ಸಿದ್ದಲಿಂಗಸ್ವಾಮಿ, ಗುರುಪಾದ, ಮೈಸೂರು ನಗರ ವೀರಶೈವ ಘಟಕದ ನಿರ್ದೇಶಕ ಪಡಗೂರು ಮಹದೇವಸ್ವಾಮಿ , ಪ್ರಾಂಶುಪಾಲ ಮಂಜಣ್ಣ, ಮೈಸೂರು ನಗರ ವೀರಶೈವ ಮಹಾ ಸಭಾ ನಿರ್ದೇಶಕಿ ಶಿಲ್ಪಾ, ಬಸವ ಬಳಗ ಪೂರ್ವ ವಲಯದ ಕಾರ್ಯದರ್ಶಿ ಲೋಹಿತ್, ಕೆರಹಳ್ಳಿ ಪುಟ್ಟ ಬುದ್ದಿ, ಪ್ರಭುಸ್ವಾಮಿ, ಚೇತನ್ ಕುಮಾರ್, ಸಿದ್ದೇಶ್, ಮಾನಸ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.