
ಮ್ಯೆಸೂರು; ನಗರದ ನಾದಬ್ರಹ್ಮ ಸಂಗೀತ ಮಹಾಸಭಾದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ 2026-2027 ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ, ಪ್ರತಿಭಾ ಪುರಸ್ಕಾರ,ಹಾಗೂ ಸ್ವಾಗತ ಸಮಾರಂಭ ದಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕ ಟಿ .ಎಸ್.ಶ್ರೀವತ್ಸ ಸನ್ಮಾನಿಸಿದರು.
ವಿಜ್ಞಾನ ವಿಭಾಗ ದಲ್ಲಿ ಕು.ಕಾವ್ಯ. ಆರ್ 600ಕ್ಕೆ 580 ಅಂಕಗಳು, ವಾಣಿಜ್ಯ ವಿಭಾಗದಲ್ಲಿ ಕು.ವ್ಯೆಷ್ಣವಿ.ಎಸ್ 600ಕ್ಕೆ 581 ಅಂಕಗಳು,ಕಲಾ ವಿಭಾಗದಲ್ಲಿ ಕು.ಮೌನ 600ಕ್ಕೆ 539ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರವಿಶಂಕರ್, ಶಿವಾನಂದ್ ಆಡಳಿತ ಮಂಡಳಿ ಸದಸ್ಯರಾದ ರಘುನಂದನ್ ಹಾಗೂ ಮಂಜುನಾಥ್ ಇದ್ದರು