Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಟಿ.ನರಸೀಪುರ ಹೆದ್ದಾರಿ ಅಗಲೀಕರಣಕ್ಕೆ 86 ಮರಗಳ ತೆರವು
ಮೈಸೂರು:
ಜಿಲ್ಲೆಯ ತಿ.ನರಸೀಪುರ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ, ಕೆಂಪಯ್ಯನಹುAಡಿ ರಾಷ್ಟ್ರೀಯ ಹೆದ್ದಾರಿ-766 ರ ಮೈಸೂರು-ತಿ.ನರಸೀಪುರ ಮುಖ್ಯರಸ್ತೆ 232.940 ಕಿ.ಮೀ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಉದ್ದೇಶಿಸಿರುವುದರಿಂದ 86 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
ಸದರಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿರುವ ರಸ್ತೆಯ ಎಡ ಬದಿಯಲ್ಲಿರುವ 03 ಸಂಖ್ಯೆ ಅರಳಿ, 03 ಸಂಖ್ಯೆ ಹೊಂಗೆ, 03 ಸಂಖ್ಯೆ ಅಮಟೆ ಮತ್ತು 19 ಸಂಖ್ಯೆ ಬೇವು. 02 ಸಂಖ್ಯೆ ಗೊಬ್ಬಳಿ, 01 ಸಂಖ್ಯೆ ಮಡ್ಡಿ, 01 ಸಂಖ್ಯೆ ಹೊಳೆಮತ್ತಿ, 04 ಸಂಖ್ಯೆ ಚೆರ್ರಿ (ಗಸೆಗಸೆ), 01 ಸಂಖ್ಯೆ ಸುಬಾಬುಲ್, 03 ಸಂಖ್ಯೆ ಗುಲ್‌ಮೊಹರ್, 01 ಸಂಖ್ಯೆ ಮಹಗನಿ ಒಟ್ಟು 41 ಮರಗಳು ಹಾಗೂ ರಸ್ತೆಯ ಬಲ ಬದಿಯಲ್ಲಿರುವ 15 ಸಂಖ್ಯೆ ಬೇವು, 02 ಸಂಖ್ಯೆ ರೈನ್ ಟೆವು ಸಂಖ್ಯೆಗುಲ್ ಮೊಹರ್ ಸಂಖ್ಯೆ ಹೊಂಗೆ, 07 ಸಂಖ್ಯೆ ಮಹಾಗನಿ, 06 ಸಂಖ್ಯೆ ಚೆರಿ (ಗಸೆಗಸೆ), 02 ಸಂಖ್ಯೆ ಮಾವು, 03 ಸಂಖ್ಯೆ ಕಾಡಬಾದಮಿ ಮತ್ತು 01 ಸಂಖ್ಯೆ ಹೊಳೆಮತ್ತಿ ಒಟ್ಟು 45 ಮರಗಳು ಒಟ್ಟಾರೆ 86 ಸಂಖ್ಯೆ ಮರಗಳನ್ನು ತೆರವುಗೊಳಿಸಲು ಭಾರತ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಉದ್ದೇಶಿಸಿದೆ.
ಅರಣ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಸದರಿ ಮರಗಳಿಗೆ ಮಹಜರು ಕ್ರಮ ಜರುಗಿಸಿ ಅಳತೆ ಪಟ್ಟಿಯನ್ನು ತಯಾರಿಸಲಾಗಿದ್ದು, ಆಗಸ್ಟ್ 03 ರೊಳಗೆ e-mಚಿiಟ: ಡಿಜಿoಣಟಿಠಿ@gmಚಿiಟ.ಛಿom ಅಥವಾ ವೃಕ್ಷಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು, ಪ್ರಾದೇಶಿಕ ಅರಣ್ಯ ವಲಯ ಕಛೇರಿ, ಹಳೇ ಸಂತೆಮಾಳ, ತಿ.ನರಸೀಪುರ ಟೌನ್-571124 ಅಂಚೆ ವಿಳಾಸಕ್ಕೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಟಿ.ನರಸೀಪುರ ಪ್ರಾದೇಶಿಕ ಅರಣ್ಯ ವಲಯದ ವೃಕ್ಷಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.