ಆ.1 ರಂದು ಮೈಸೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಉಡುಗೊರೆ
ಮೈಸೂರು: ಅರಮನೆ ನಗರಿ ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆ.1ರಂದು ಆಗಮಿಸಿ, ನಗರದ ರಾಮಕೃಷ್ಣ ಆಶ್ರಮದ ವತಿಯಿಂದ ನಿರ್ಮಿಸಲಾಗಿರುವ ನೂತನ ವಿವೇಕ ಸ್ಮಾರಕ (ಸ್ವಾಮಿ ವಿವೇಕಾನಂದ ಸಾಂಸ್ಕöÈತಿಕ ಯುವ ಕೇಂದ್ರ) ಲೋಕಾರ್ಪಣೆಗೊಳಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದ ವಿಶೇಷತೆಯಾಗಿ ಪ್ರಧಾನಿ ಮೋದಿಯವರಿಗೆ ನೀಡಲೆಂದು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ವಿಶೇಷ ಉಡುಗೊರೆಯೊಂದು ಸಿದ್ಧಗೊಂಡಿದೆ.
ಸAಪೂರ್ಣ ಬಿಳಿಯ ಬಣ್ಣದ ವೆಟ್ನಾಂ ಮಾರ್ಬಲ್ ಕಲ್ಲಿನಲ್ಲಿ ವಿವೇಕಾನಂದರ ಮೂರ್ತಿಯನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. ಸುಮಾರು 1.5 ಅಡಿ ಉದ್ದವಿರುವ ಈ ಮೂರ್ತಿ ಕೇವಲ 8.5 ಕೆಜಿ ತೂಕ ಹೊಂದಿದ್ದು, ಪ್ರಧಾನಿಯವರು ತಮ್ಮ ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳುವಂತೆ ಇದನ್ನು ರೂಪಿಸಲಾಗಿದೆ. ಕನ್ಯಾಕುಮಾರಿಯಲ್ಲಿ 1970ರಲ್ಲಿ ನಿರ್ಮಿಸಲಾಗಿರುವ ವಿವೇಕಾನಂದರ ರಾಕ್ ಮೆಮೋರಿಯಲ್ ಮಾದರಿಯಲ್ಲೇ ಈ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ. ಅರುಣ್ ಯೋಗಿರಾಜ್ ಅವರು ಕೇವಲ 15 ದಿನಗಳ ಅಲ್ಪಾವಧಿಯಲ್ಲಿ ಈ ಕಲಾಕೃತಿಯನ್ನು ಅತ್ಯಂತ ಸುಂದರವಾಗಿ ಕೆತ್ತಿ ಮುಗಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಯೋಗಿರಾಜ್, ರಾಮಕೃಷ್ಣ ಆಶ್ರಮದ ಗುರುಗಳಾದ ಮುಕ್ತಿದಾನಂದ ಸ್ವಾಮೀಜಿ ಅವರ ಬಳಿ ತಾವೇ ಸ್ವಯಂಪ್ರೇರಿತರಾಗಿ ಈ ಮೂರ್ತಿಯನ್ನು ಮಾಡಿಕೊಡುವುದಾಗಿ ಕೇಳಿಕೊಂಡಿದ್ದೆ. ಸ್ವಾಮೀಜಿ ಸಂತೋಷದಿAದ ಒಪ್ಪಿಗೆ ಸೂಚಿಸಿದ ಬಳಿಕ, ಪ್ರಧಾನಿಯವರು ಸುಲಭವಾಗಿ ಕೈಯಲ್ಲಿ ಹಿಡಿದುಕೊಳ್ಳುವಂತಿರಬೇಕು ಎಂಬ ಕಾರಣಕ್ಕೆ 10 ಕೆಜಿ ಒಳಗಿನ ತೂಕದಲ್ಲಿ ಮೂರ್ತಿ ನಿರ್ಮಿಸಲು ನಿರ್ಧರಿಸಲಾಗಿತ್ತು ಎಂದರು.
ಈ ಹಿಂದೆ 2022ರಲ್ಲಿ ಯೋಗ ದಿನಾಚರಣೆಗೆ ಬರುವಂತೆ ಆಹ್ವಾನಿಸಲು ಹೋದಾಗಲೂ ಮೋದಿ ಅವರನ್ನು ಭೇಟಿಯಾಗಿದ್ದೆ. ಮೋದಿ ಅವರು ಈ ದೇಶ ಕಂಡ ಮಹಾನ್ ನಾಯಕರು. ಅಂತಹ ಮಹಾನ್ ವ್ಯಕ್ತಿಗೆ ಉಡುಗೊರೆ ನೀಡಲು ತಮಗೆ ಅವಕಾಶ ಕಲ್ಪಿಸಿಕೊಟ್ಟ ರಾಮಕೃಷ್ಣ ಆಶ್ರಮಕ್ಕೆ ಮತ್ತು ಸ್ವಾಮೀಜಿಗಳಿಗೆ ಧನ್ಯವಾದ ಎಂದರು.
ನೀಟ್ ಕುರಿತು ಪ್ರತಿಕ್ರಿಯಿಸಿ, ದೇಶದ ಯುವಕರು ಹಾಗೂ ವಿದ್ಯಾರ್ಥಿಗಳ ನಾಡಿಮಿಡಿತ ಪ್ರಧಾನಿ ಮೋದಿಯವರಿಗೆ ಚೆನ್ನಾಗಿ ತಿಳಿದಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಪ್ರಧಾನಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೆನ್ ಜಿ ತಲೆಮಾರಿನ ಯುವಕರ ಬಗ್ಗೆಯೂ ಮೋದಿ ಅವರಿಗೆ ವಿಶೇಷ ಕಾಳಜಿಯಿದ್ದು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
--°C
Mysore, IN
Loading...