
ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆ.1 ರಂದು ಅರಮನೆ ನಗರಿ ಮೈಸ್ರರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರ ಸ್ವಾಗತಕ್ಕೆ ಭರದ ಸಿದ್ಧತೆಗಳು ನಡೆದಿವೆ. ಅಲ್ಲದೆ ಪೊಲೀಸರು, ಗುಪ್ತದಳದವರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
ಮೋದಿಯವರು ಕಾರಿನಲ್ಲಿ ಹಾದು ಹೋಗುವ ರಸ್ತೆಗಳನ್ನು ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ರಸ್ತೆಯ ಪುಟ್‌ಪಾತ್‌ಗಳನ್ನು ಸರಿಪಡಿಸಲಾಗಿದೆ. ಅಲ್ಲದೇ ರಸ್ತೆಯ ಎರಡು ಕಡೆಗಳನ್ನು ಜನರು ರಸ್ತೆಗೆ ನುಗ್ಗದಂತೆ ತಡೆಯುವುದಕ್ಕಾಗಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ರಸ್ತೆಯ ಎರಡು ಬದಿಗಳಲ್ಲೂ ಬಣ್ಣಗಳನ್ನು ಹೊಡೆಯಲಾಗಿದೆ. ಕೆಟ್ಟಿರುವ ಬೀದಿ ದೀಪಗಳ ದುರಸ್ಥಿ ಕಾರ್ಯ ಮಾಡಲಾಗಿದೆ. ಅಲ್ಲದೇ ರಸ್ತೆಗಳನ್ನು ನಿತ್ಯವೂ ಸ್ವಚ್ಚವಾಗಿಡುವ ಕೆಲಸ ನಡೆಯುತ್ತಿದೆ.
ಈಗಾಗಲೇ ಮೋದಿಯವರು ಭೇಟಿ ನೀಡಲಿರುವ ಸ್ಥಳಗಳನ್ನು ಶ್ವಾನದಳ, ಬಾಂಬ್ ಪತ್ತೆ ದಳ, ನಿಷ್ಕಿçÃಯ ದಳದಿಂದ ಶೋಧ ಕಾರ್ಯ ನಡೆಸಲಾಗಿದೆ. ಅಲ್ಲದೇ ಮೋದಿಯವರು ಕಾರಿನ ಮೂಲಕ ಹಾದು ಹೋಗುವ ರಸ್ತೆಯ ಉದ್ದಕ್ಕೂ ಆಯಾ ಕಟ್ಟಿನ ಸ್ಥಳಗಳಲ್ಲಿ ಬಂದೋ ಬಸ್ತ್ಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಸ್ತು ವಾಹನಗಳು ನಿರಂತರವಾಗಿ ಚಲಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಿವೆ. ಮೋದಿಯವರು ಭೇಟಿ ನೀಡಲಿರುವ ಮೈಸೂರಿನ ಯಾದವvರಿಯಲ್ಲಿರುವ ರಾಮಕೃಷ್ಣಾಶ್ರಮಕ್ಕೆ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ಆಶ್ರಮಕ್ಕೆ ಬರುವ ಪ್ರತಿಯೊಬ್ಬರ ವಿವರಗಳು, ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ, ಅವರು ಯಾವ ಕಾರಣಕ್ಕೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಹಾಜರಾತಿ ಪುಸ್ತಕಗಳಲ್ಲಿ ನಮೂದಿಸಿ, ಬಳಿಕ ಅವರನ್ನು ಲೋಹ ಶೋಧಕ ಯಂತ್ರದಿAದ ತಪಾಸಣೆ ನಡೆಸಿ ಒಳಕ್ಕೆ ಬಿಡಲಾಗುತ್ತಿದೆ. ಆಶ್ರಮಕ್ಕೆ ಬರುವ ವಾಹನಗಳ ತಪಾಸಣೆ ನಡೆಸಿ, ಅವುಗಳ ಚಲನ, ವಲನದ ಮೇಲೂ ಕಣ್ಣಿಡಲಾಗಿದೆ.
6 ಸಾವಿರ ಪಾಸ್‌ಗಳ ವಿತರಣೆ; ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಆಶ್ರಮದಿಂದ ಭಕ್ತರಿಗೆ ಹಾಗೂ ಸಾರ್ವಜನಿP್ಪರಿಗೆ 6 ಸಾವಿರ ಪಾಸ್‌ಗಳ ವಿತರಣೆ ಮಾಡಲಾಗಿದ್ದು, ಪಾಸ್‌ಗಳು ಮುಗಿದೆ ಎಂಬ ಬೋರ್ಡ್ಗಳನ್ನು ಆಶ್ರಮದ ದ್ವಾರದಲ್ಲಿಯೇ ಹಾಕಲಾಗಿದೆ.
ನಗರದ ನಾರಾಯಣಶಾಸ್ತಿç ರಸ್ತೆಯಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆ.1ರಂದು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಮುಂಭಾಗವಿರುವ ಓವಲ್ ಮೈದಾನದಲ್ಲಿ ಸೇನಾ ಹೆಲಿಕಾಪ್ಟರ್ ಟ್ರಯಲ್ ಲ್ಯಾಂಡಿAಗ್ ತಾಲೀಮು ನಡೆಸಲಾಯಿತು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಭಾರತೀಯ ಸೇನೆಯ ವಿಶೇಷ ಹೆಲಿಕಾಪ್ಟರ್ ಮೂಲಕ ನೇರವಾಗಿ ನಗರದ ಓವಲ್ ಮೈದಾನಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ತೆರಳಿ ನಾರಾಯಣ ಶಾಸ್ತಿç ರಸ್ತೆಯಲ್ಲಿ ನಿರ್ಮಿಸಿರುವ ನೂತನ ವಿವೇಕ ಸ್ಮಾರಕ ಉದ್ಘಾಟಿಸಲಿದ್ದಾರೆ. ನಂತರ ರಾಮಕೃಷ್ಣ ಶಾಲೆಯ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್‌ಪಿಜಿ ಡಿಐಜಿ ನೇತೃತ್ವದಲ್ಲಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆಲಿಕಾಪ್ಟರ್ ಲ್ಯಾಂಡಿAಗ್ ತಾಲೀಮು ನಡೆಸಲಾಯಿತು. ಹೆಲಿಪ್ಯಾಡ್ ಸುತ್ತಮುತ್ತಲಿನ ವಾತಾವರಣ, ಮರಗಳು ಹಾಗೂ ವಿದ್ಯುತ್ ತಂತಿಗಳ ಅಡೆತಡೆಗಳ ಪರಿಶೀಲನೆ ಸೇರಿದಂತೆ ತುರ್ತು ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ಕೈಗೊಳ್ಳಲಾಯಿತು.
ಬಿಗಿ ಭದ್ರತೆ: ಪ್ರಧಾನಿಯವರ ಭದ್ರತೆಯ ದೃಷ್ಟಿಯಿಂದ ಓವಲ್ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು, ಮೈದಾನದ ಸುತ್ತಲೂ ಬಿಗಿ ಪೊಲೀಸ್ ಕಣ್ಗಾವಲು ಇಟ್ಟಿವೆ. ಪ್ರಧಾನಮಂತ್ರಿಯವರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ಸಾರ್ವಜನಿಕರಿಗೆ ಸಂಚಾರ ದಟ್ಟಣೆ ಉಂಟಾಗದAತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

