Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆ ಆರ್ ಕ್ಷೇತ್ರದಲ್ಲಿ ಗೋ ಹತ್ಯೆಗೆ ಅವಕಾಶ ಇಲ್ಲ ; ಶಾಸಕ ಟಿ.ಎಸ್.ಶ್ರೀವತ್ಸ


ಮೈಸೂರು;
ಕೆ ಆರ್ ಕ್ಷೇತ್ರದಲ್ಲಿ ಗೋ ಹತ್ಯೆಗೆ ಅವಕಾಶ ಇಲ್ಲ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು. ಮೈಸೂರಿನ ನಾಚನಹಳ್ಳಿ ಪಾಳ್ಯದ ಪಕ್ಕದಲ್ಲಿರುವ ಪ್ರಕೃತಿ ಬಡಾವಣೆಯಲ್ಲಿ ಕಡೆದು ಹಾಕಿದ್ದ ಹಸುವಿನ ಅವಶೇಷಗಳನ್ನು ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯ ಪೊಲೀಸ್ ನಿರೀಕ್ಷಕ ಯೋಗಾಂಜನಪ್ಪ ರಿಂದ ಮಾಹಿತಿಯನ್ನು ಪಡೆದರು. ರಾತ್ರಿ 10:30 ರಲ್ಲಿ ಹಸುವಿನ ಕತ್ತಿನ ಭಾಗವನ್ನು ಈ ಸ್ಥಳಕ್ಕೆ ತಂದು ಬಿಸಾಡಿರುತ್ತಾರೆ. ಇದು ಹೊರಗಿನಿಂದ ತಂದು ಬಿಸಾಡಿರಬಹುದು ಅಥವಾ ಅಕ್ಕಪಕ್ಕದವರು ಬಿಸಾಡಿರಬಹುದು. ಈಗಾಗಲೇ ಈ ಸಂಬAಧ ಎಫ್.ಐ.ಆರ್ ದಾಖಲಾಗಿರುವ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಸಕರು ರಾತ್ರಿಯ ನಂತರ ಗರುಡ ವಾಹನಗಳು ಹೆಚ್ಚಾಗಿ ಈ ಭಾಗದಲ್ಲಿ ಓಡಾಡಬೇಕು ಎಂದು ತಿಳಿಸಿದರು. ನಂತರ ನನ್ನ ಕ್ಷೇತ್ರದಲ್ಲಿ ಗೋವಧೆ ಮಾಡುವುದನ್ನು ತಡೆಯಬೇಕು. ಅಂತ ಕೃತ್ಯ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಗೋಹತ್ಯೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ .ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ವೃತ್ತ ನಿರೀಕ್ಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ಬಿಜೆಪಿ ಮುಖಂಡರಾದ ಈಶ್ವರ್, ಜಯರಾಮ್, ವಡಿವೇಲು, ಪ್ರದೀಪ್ ಕುಮಾರ್, ಕಿಶೋರ್, ಕೀರ್ತಿ, ಕಿರಣ್, ಹರ್ಷ, ಶಾಸಕರ ಆಪ್ತ ಸಹಾಯಕ ಆದಿತ್ಯ ಹಾಗೂ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.