Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆಎಸ್ಒಯು ಪಿರಿಯಾಪಟ್ಟಣ ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಪಿರಿಯಾಪಟ್ಟಣ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2026-27 ನೇ ಸಾಲಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ದೂರ ಶಿಕ್ಷಣದಲ್ಲಿ ಪಡೆಯಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪಿರಿಯಾಪಟ್ಟಣ ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಯುಜಿ, ಪಿಜಿ ಕೋರ್ಸ್‌ಗಳಾದ ಎಂ.ಎ., ಎಂ.ಕಾಂ, ಎಂ.ಬಿ.ಎ., ಎಂ.ಸಿ.ಎ.,…

Read More

600 ಕೋಟಿರೂಗಳನ್ನು ವಿವಿಧ ಆಯೋಗಗಳ ಹೆಸರಿನಲ್ಲಿ ಖರ್ಚು ಮಾಡಿದ್ದರೂ, ಹಿಂದುಳಿದ ಸಮುದಾಯಕ್ಕೆ ಯಾವುದೇ ನೈಜ ಪ್ರಯೋಜನ ಸಿಕ್ಕಿಲ್ಲ; ಬಿಜೆಪಿ ಸಂಸದ ಪಿ.ಸಿ.ಮೋಹನ್

ಮೈಸೂರು: ಸರ್ಕಾರ ಸುಮಾರು 600 ಕೋಟಿ ರೂ ಸಾರ್ವಜನಿಕ ಹಣವನ್ನು ವಿವಿಧ ಆಯೋಗಗಳ ಹೆಸರಿನಲ್ಲಿ ಖರ್ಚು ಮಾಡಿದ್ದರೂ, ಹಿಂದುಳಿದ ಸಮುದಾಯಕ್ಕೆ ಯಾವುದೇ ನೈಜ ಪ್ರಯೋಜನ ಸಿಕ್ಕಿಲ್ಲ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಆರೋಪಿಸಿದರು.ಗುರುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ನಿರಂತರ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು 2013ರಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಹುಸಿ…

Read More

ತೆಂಗು, ಅಡಿಕೆ ಮತ್ತು ಬಾಳೆ ಬೆಳೆಗಳ ನಿರ್ವಹಣೆ’’ ಕುರಿತು ತರಬೇತಿ ಕಾರ್ಯಕ್ರಮ

ಮೈಸೂರು: ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೈಸೂರು ತಾಲ್ಲೂಕು ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದಲ್ಲಿ “ತೆಂಗು, ಅಡಿಕೆ ಮತ್ತು ಬಾಳೆ ಬೆಳೆಗಳ ನಿರ್ವಹಣೆ’’ ಕುರಿತು ಆಯೋಜಿಸಿದ್ದ ಒಂದು ದಿನದ ಹೊರಾಂಗಣ ತರಬೇತಿಗೆ ಕಾರ್ಯಕ್ರಮವನ್ನು ಅಧಿಕಾರಿಗಳು ಮತ್ತು ರೈತರು ಉದ್ಘಾಟಿಸಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಮಂಜುಳ ಎಂ.ಬಿ. ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನೆಡೆಯುವ ತರಬೇತಿಗಳಲ್ಲಿ ರೈತರು ಹೆಚ್ಚು ಭಾಗವಹಿಸಿ,…

Read More

ಅಮೀರ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ ಡಾ. ಹೇಮ ನಂದೀಶ್ ಒತ್ತಾಯ

ಮೈಸೂರು: ಹಿಂದೂ ಮಹಿಳೆಯರನ್ನು ಮದುವೆಚಿiÀiÁಗಿ, ಮತ್ತೆ ಕೆಲ ವರ್ಷಗಳ ನಂತರ ತಲಾಕ್ ನೀಡುವುದರೊಂದಿಗೆ, ಹಿಂದೂ ಹೆಣ್ಣುಮಕ್ಕಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಚಿತ್ರನಟ ಅಮೀರ್ ಖಾನ್ ಚಿತ್ರಗಳನ್ನು ಕೂಡಲೇ ಬಹಿಷ್ಕರಿಸಬೇಕು ಎಂದು ಹಿಂದೂ ಪರ ಮುಖಂಡರಾದ ಡಾ. ಹೇಮಾನಂದೀಶ್ ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಏಕೆ ಜಾರಿಯಾಗಬೇಕು ಎಂಬುದಕ್ಕೆ ವ್ಯವಸ್ಥಿತವಾಗಿ ಲವ್ ಜಿಹಾದ್ ಎಸಗುತ್ತಿರುವ ಆಮೀರ್ ಖಾನ್‌ನೇ ಒಂದು ದೊಡ್ಡ ಉದಾಹರಣೆ. ತಮ್ಮ ಇಸ್ಲಾಮಿನ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು…

Read More

65 ಲಕ್ಷರೂಗಳ ಯುಜಿಡಿ ಕಾಮಗಾರಿಗೆ ಶಾಸಕ ಟಿ.ಎಸ್ ಶ್ರೀವತ್ಸ ಚಾಲನೆ

ಮೈಸೂರು; ಕೆಆರ್ ಕ್ಷೇತ್ರದ ವಾರ್ಡ್ ನಂಬರ್ 62 ವ್ಯಾಪ್ತಿಯಲ್ಲಿ ಬರುವ ದೇವರಾಜ ಅರಸ್ ಕಾಲೋನಿ, ಹೊಸೂರು ಹಾಗೂ ನಾಚನಹಳ್ಳಿಪಾಳ್ಯ ಈ ಭಾಗಗಳಲ್ಲಿ ಸುಮಾರು 65 ಲಕ್ಷಗಳ ಯುಜಿಡಿ ಕಾಮಗಾರಿಗೆ ಶಾಸಕ ಟಿ.ಎಸ್ ಶ್ರೀವತ್ಸ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿ ಸದಸ್ಯೆ ಶಾಂತಮ್ಮ ವಡಿವೇಲು, ವಾರ್ಡ್ ಅಧ್ಯಕ್ಷ ರಾಘವೇಂದ್ರ ಎಂ. ಬಿಜೆಪಿ ಮುಖಂಡರಾದ ಎಂ ವಡಿವೇಲು, ಚಂದ್ರಣ್ಣ. ಪ್ರದೀಪ್ ಕುಮಾರ್, ಕಿಶೋರ್, ಮಹಾದೇವ, ನಾಗರಾಜು, ನವೀಂದ್ರ, ನವೀನ್ ಕುಮಾರ್, ಸಿದ್ದರಾಜು, ಮಹದೇವ,…

Read More

ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಿನಿ ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಾಗೂ ಶೈಕ್ಷಣಿಕ ಕಿಟ್‌ಗಳ ಕೊಡುಗೆ

ಮೈಸೂರು: ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಹಾಗೂ ಐ.ಐ.ಎಫ್.ಎಲ್. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಸಿ.ಎಸ್.ಆರ್. ಯೋಜನೆಯಡಿ ಮೈಸೂರಿನ ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಿನಿ ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್‌ಗಳನ್ನು ಕೊಡುಗೆಯಾಗಿ ನೀಡಿ ಶಾಲೆಯ ಶೈಕ್ಷಣಿಕ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಾಯಿತು.ಕಾರ್ಯಕ್ರಮದ ಶಾಲೆಯ ಪ್ರಭಾರ ಉಪಪ್ರಾಂಶುಪಾಲ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮರ್ಥನಂ ಟ್ರಸ್ಟ್ ಹಾಗೂ ಐ.ಐ.ಎಫ್.ಎಲ್. ಫೌಂಡೇಶನ್ ವತಿಯಿಂದ ದೊರೆತಿರುವ ಮಿನಿ ವಿಜ್ಞಾನ ಪ್ರಯೋಗಾಲಯ ಮತ್ತು ಡಿಜಿಟಲ್ ಸ್ಮಾರ್ಟ್ ಬೋರ್ಡ್…

Read More

ದಸರಾ ಹಬ್ಬದಲ್ಲಿ ಸರ್ಕಾರ ಕಂಬಳ ಕ್ರೀಡೆ ಆಯೋಜಿಸುವುದಕ್ಕೆ ಪರಿಸರಕ್ಕಾಗಿ ನಾವು ಸಂಘಟನೆ ತೀವ್ರ ವಿರೋಧ

ಮೈಸೂರು; ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಕಂಬಳ ಕ್ರೀಡೆ ಆಯೋಜಿಸುವುದಕ್ಕೆ ಪರಿಸರಕ್ಕಾಗಿ ನಾವು ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.ಈ ಕುರಿತು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬವು ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ, ಸಾಂಸ್ಕöÈತಿಕ ವೈಶಿಷ್ಟ÷್ಯಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಹೊಂದಿದೆ. ಪ್ರತಿ ವರ್ಷ…

Read More

ಕೆ ಆರ್ ಕ್ಷೇತ್ರದಲ್ಲಿ ಗೋ ಹತ್ಯೆಗೆ ಅವಕಾಶ ಇಲ್ಲ ; ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು; ಕೆ ಆರ್ ಕ್ಷೇತ್ರದಲ್ಲಿ ಗೋ ಹತ್ಯೆಗೆ ಅವಕಾಶ ಇಲ್ಲ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು. ಮೈಸೂರಿನ ನಾಚನಹಳ್ಳಿ ಪಾಳ್ಯದ ಪಕ್ಕದಲ್ಲಿರುವ ಪ್ರಕೃತಿ ಬಡಾವಣೆಯಲ್ಲಿ ಕಡೆದು ಹಾಕಿದ್ದ ಹಸುವಿನ ಅವಶೇಷಗಳನ್ನು ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯ ಪೊಲೀಸ್ ನಿರೀಕ್ಷಕ ಯೋಗಾಂಜನಪ್ಪ ರಿಂದ ಮಾಹಿತಿಯನ್ನು ಪಡೆದರು. ರಾತ್ರಿ 10:30 ರಲ್ಲಿ ಹಸುವಿನ ಕತ್ತಿನ ಭಾಗವನ್ನು ಈ ಸ್ಥಳಕ್ಕೆ ತಂದು ಬಿಸಾಡಿರುತ್ತಾರೆ. ಇದು ಹೊರಗಿನಿಂದ ತಂದು ಬಿಸಾಡಿರಬಹುದು ಅಥವಾ ಅಕ್ಕಪಕ್ಕದವರು ಬಿಸಾಡಿರಬಹುದು. ಈಗಾಗಲೇ ಈ ಸಂಬAಧ ಎಫ್.ಐ.ಆರ್…

Read More

ಶ್ರಮದಾನ ಮೂಲಕ ಪ್ಲಾಸ್ಟಿಕ್ ಮುಕ್ತ ಚಾಮುಂಡಿಬೆಟ್ಟಕ್ಕೆ ಜಾಗೃತಿ

ಮೈಸೂರು: ಆಷಾಢ ಮಾಸದ ಶುಕ್ರವಾರಗಳು, ಚಾಮುಂಡೇಶ್ವರಿಯ ಜಯಂತಿ ಪ್ರಯುಕ್ತ ಲಕ್ಷಾಂತರ ಮಂದಿ ಭಕ್ತರು ಚಾಮುಂಡಿಬೆಟ್ಟಕ್ಕೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಬರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಅವರ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳು ಗುರುವಾರ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದರು.ತಾಲ್ಲೂಕು ಪಂಚಾಯಿತಿ ಹಾಗೂ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಇಂದು ಮುಂಜಾನೆ ಬೆಟ್ಟದ ಪಾದದಿಂದ ದೇವಾಲಯದವರೆಗೂ ಮೆಟ್ಟಿಲುಗಳನ್ನು…

Read More

ಮೈಸೂರು ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ;23,49,006 ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು,ಶೇ 83.90% ರಷ್ಟು ಸಾಧನೆ

ಮೈಸೂರು; ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಪ್ರಕ್ರಿಯೆಯು ಅತ್ಯಂತ ಚುರುಕಿನಿಂದ ಸಾಗಿದ್ದು ಜುಲೈ 8 ರವೆರೆಗೆ 23,49,006 ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು,ಶೇ 83.90% ರಷ್ಟು ಸಾಧನೆಯಾಗಿದೆ.ಜಿಲ್ಲೆಯಲ್ಲಿ ಒಟ್ಟು 27,99,693 ಮತದಾರರಿದ್ದು, 2,915 ಮತಗಟ್ಟೆಗಳು ಇರುತ್ತದೆ. ಜಿಲ್ಲೆಯಲ್ಲಿ ಮತಗಟ್ಟೆಗಳ ಪೈ ಕಿ 927 (31.80%) ಮತಗಟ್ಟೆಗಳಲ್ಲಿ 100% ಫಾರ್ಮ್ ವಿತರಣೆ ಆಗಿದೆ.726 (24.90%) ಮತಗಟ್ಟೆಗಳಲ್ಲಿ 90% ಕ್ಕಿಂತ ಅಧಿಕ ವಿತರಣೆಯಾಗಿದೆ.11,419 ಮತದಾರರು ಸ್ವತಃ ಆನ್‌ಲೈನ್ ಮೂಲಕ ಫಾರ್ಮ್ಗಳನ್ನು ಸಲ್ಲಿಸಿದ್ದಾರೆ.ಜಿಲ್ಲೆಯಲ್ಲಿ ವಿತರಿಸಲಾದ ಫಾರ್ಮ್ಗಳ ಪೈಕಿ ಇದುವರೆಗೆ ಒಟ್ಟು…

Read More