Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

600 ಕೋಟಿರೂಗಳನ್ನು ವಿವಿಧ ಆಯೋಗಗಳ ಹೆಸರಿನಲ್ಲಿ ಖರ್ಚು ಮಾಡಿದ್ದರೂ, ಹಿಂದುಳಿದ ಸಮುದಾಯಕ್ಕೆ ಯಾವುದೇ ನೈಜ ಪ್ರಯೋಜನ ಸಿಕ್ಕಿಲ್ಲ; ಬಿಜೆಪಿ ಸಂಸದ ಪಿ.ಸಿ.ಮೋಹನ್

ಮೈಸೂರು: ಸರ್ಕಾರ ಸುಮಾರು 600 ಕೋಟಿ ರೂ ಸಾರ್ವಜನಿಕ ಹಣವನ್ನು ವಿವಿಧ ಆಯೋಗಗಳ ಹೆಸರಿನಲ್ಲಿ ಖರ್ಚು ಮಾಡಿದ್ದರೂ, ಹಿಂದುಳಿದ ಸಮುದಾಯಕ್ಕೆ ಯಾವುದೇ ನೈಜ ಪ್ರಯೋಜನ ಸಿಕ್ಕಿಲ್ಲ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಆರೋಪಿಸಿದರು.
ಗುರುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ನಿರಂತರ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು 2013ರಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಹುಸಿ ಆಶ್ವಾಸನೆಗಳನ್ನು ನೀಡಿ, ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿ, ಅಧಿಕಾರಕ್ಕೆ ಬಂದರು. 2014ರಲ್ಲಿ ಸಿದ್ದರಾಮಯ್ಯನವರ ಆಪ್ತರಾದ ಕಾಂತರಾಜು ಅವರ ನೇತೃತ್ವದಲ್ಲಿ ಆಯೋಗ ರಚಿಸಿ, 189 ಕೋಟಿ ರೂ. ಖರ್ಚು ಮಾಡಿದ ನಂತರವೂ ವರದಿಗೆ ಸಹಿ ಮಾಡದೆ ವಿಳಂಬ ಧೋರಣೆ ಅನುಸರಿಸಿದರು. ತದನಂತರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜವಾಬ್ದಾರಿಯನ್ನು ಜಯಪ್ರಕಾಶ್ ಹೆಗ್ಡೆ ಅವರಿಗೆ ವಹಿಸಿದರೂ, ಹತ್ತು ವರ್ಷ ಕಳೆದರೂ ಯಾವುದೇ ಅಂತಿಮ ವರದಿ ಬಿಡುಗಡೆಯಾಗಲಿಲ್ಲ. ಬಿಹಾರದಲ್ಲಿ ನಿತೀಶ್ ಕುಮಾರ್ ಹಾಗೂ ತೆಲಂಗಾಣ ಸರ್ಕಾರ ಕೇವಲ ಒಂದೇ ವರ್ಷದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿವೆ. ಆದರೆ ಕರ್ನಾಟಕದಲ್ಲಿ ಹತ್ತು ವರ್ಷಗಳಾದರೂ ಕಾಂಗ್ರೆಸ್ ಕೇವಲ ಕಾಲಹರಣ ಮಾಡಿದೆ ಎಂದರು ಕಿಡಿಕಾರಿದರು.
ಕುರ್ಚಿ ಅಲುಗಾಡಿದಾಗ ಜಾತಿ ಕಾರ್ಡ್ಬಳಕೆ: ಸಿದ್ದರಾಮಯ್ಯನವರು ತಮಗೆ ಮುಖ್ಯಮಂತ್ರಿ ಸ್ಥಾನದ ಗಂಡಾAತರ ಎದುರಾದಾಗಲೆಲ್ಲಾ ಹಿಂದುಳಿದ ವರ್ಗಗಳ ಮತ್ತು ಜಾತಿ ಗಣತಿಯ ಕಾರ್ಡ್ ಪ್ಲೇ ಮಾಡುತ್ತಾರೆ. ಕಳೆದ ವರ್ಷ ಜೂನ್ 15 ರಂದು ಮೂರೇ ತಿಂಗಳಲ್ಲಿ ವರದಿ ನೀಡುವುದಾಗಿ ಮಧುಸೂದನ್ ನಾಯಕ್ ಆಯೋಗ ರಚಿಸಲಾಗಿತ್ತು. ಆದರೆ ಒಂದು ವರ್ಷ ಕಳೆದರೂ ವರದಿ ಬರಲಿಲ್ಲ. ಕೊನೆಗೆ ದೆಹಲಿ ಹೈಕಮಾಂಡ್‌ನಿAದ ರಾಜೀನಾಮೆ ಸೂಚನೆ ಬಂದ ಬೆನ್ನಲ್ಲೇ, ಮೇ 27ರಂದು ತರಾತುರಿಯಲ್ಲಿ ವರದಿ ಒಪ್ಪಿಕೊಳ್ಳುವ ನಾಟಕವಾಡಿದರು ಎಂದು ಟೀಕಿಸಿದರು.
ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಮಧುಸೂದನ್ ನಾಯಕ್ ವರದಿಯನ್ನು ಮಂಡಿಸಿ ಚರ್ಚಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ಬಜೆಟ್ ಭಾಷಣದಲ್ಲಾಗಲಿ, ರಾಜ್ಯಪಾಲರ ಭಾಷಣದಲ್ಲಾಗಲಿ ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಸರ್ಕಾರ ಒಂದು ಪ್ರಸ್ತಾಪಿಸಿಲ್ಲ. ಇದು ಒಬಿಸಿ ಸಮುದಾಯಕ್ಕೆ ಮಾಡಿರುವ ದ್ರೋಹ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ ಮಧುಸೂದನ್ ನಾಯಕ್ ಆಯೋಗದ ವರದಿಯನ್ನು ಕಡ್ಡಾಯವಾಗಿ ಮಂಡಿಸಬೇಕು. ಸದನ ಹಾಗೂ ಸಾರ್ವಜನಿಕ ವಲಯದಲ್ಲಿ ಮುಕ್ತ ಚರ್ಚೆಯಾಗಬೇಕು. ಆ ಮೂಲಕ ಇಷ್ಟು ವರ್ಷಗಳ ಕಾಲ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಹಾಲಿ ಸರ್ಕಾರ ತಕ್ಷಣವೇ ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ವಿಭಾಗ ಪ್ರಭಾರಿ ಸ್ವಾಮಿ ಮರಳಪುರ, ಓಬಿಸಿ ಮುಖಂಡ ಬಾಬಣ್ಣ ನೂರೊಂದು ಶೆಟ್ಟಿ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ರಾಜೇ ಅರಸ್ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಗ್ರಾಮಾಂತರ ಓಬಿಸಿ ಅಧ್ಯಕ್ಷ ರಾಜೇಗೌಡ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ನಾಗೇಶ್ ಗೌಡ, ಮಾದಶೆಟ್ಟಿ ಇದ್ದರು.

——–ಕೋಟ್ ——–

ಮುಖ್ಯಮಂತ್ರಿ ಸಿದ್ದರಾಮಯ್ಯ 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಯಾಕೆ ಮೊದಲೇ ವರದಿ ಸ್ವೀಕರಿಸಲಿಲ್ಲ. ತರಾತುರಿಯಲ್ಲಿ ಸ್ವೀಕರಿಸುವ ಅಗತ್ಯವೇನಿತ್ತು. ಈ ವಿಷಯದಲ್ಲಿ ಸರ್ಕಾರ ಬದ್ಧತೆಯಿಂದ ನಡೆದುಕೊಳ್ಳಬೇಕು. ವರದಿಯನ್ನು ಜನರ ಮುಂದೆ ಇಡಬೇಕು.

  • ದೊಡ್ಡಗೌಡನ ಪಾಟೀಲ, ವಿಧಾನಸಭಾ ಸಚೇತಕ