
ಮೈಸೂರು: ಹಿಂದೂ ಮಹಿಳೆಯರನ್ನು ಮದುವೆಚಿiÀiÁಗಿ, ಮತ್ತೆ ಕೆಲ ವರ್ಷಗಳ ನಂತರ ತಲಾಕ್ ನೀಡುವುದರೊಂದಿಗೆ, ಹಿಂದೂ ಹೆಣ್ಣುಮಕ್ಕಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಚಿತ್ರನಟ ಅಮೀರ್ ಖಾನ್ ಚಿತ್ರಗಳನ್ನು ಕೂಡಲೇ ಬಹಿಷ್ಕರಿಸಬೇಕು ಎಂದು ಹಿಂದೂ ಪರ ಮುಖಂಡರಾದ ಡಾ. ಹೇಮಾನಂದೀಶ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಏಕೆ ಜಾರಿಯಾಗಬೇಕು ಎಂಬುದಕ್ಕೆ ವ್ಯವಸ್ಥಿತವಾಗಿ ಲವ್ ಜಿಹಾದ್ ಎಸಗುತ್ತಿರುವ ಆಮೀರ್ ಖಾನ್ನೇ ಒಂದು ದೊಡ್ಡ ಉದಾಹರಣೆ. ತಮ್ಮ ಇಸ್ಲಾಮಿನ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈತ ತಲಾಕ್ ನೀಡಿದ ಬಳಿಕ ಯಾವ ಒತ್ತಡಕ್ಕೆ ಒಳಗಾಗಿ ಆ ಹೆಣ್ಣು ಮಕ್ಕಳು ಮೌನವಾಗಿದ್ದಾರೆ ಎಂಬುದನ್ನು ಹಿಂದೂ ಸಮಾಜ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಹಿಂದೂ ಹೆಣ್ಣು ಮಕ್ಕಳನ್ನು ಮದುವೆಯಾಗುವುದು ಹಾಗೂ ಅವರಿಗೆ ಮಕ್ಕಳಾದ ತಕ್ಷಣ ಅವರನ್ನು ಇಸ್ಲಾಂ ಧರ್ಮದ ಪದ್ಧತಿಯಂತೆ ಹೆಸರಿಡುವುದು, ಮುಸ್ಲಿಂ ಜನಸಂಖ್ಯೆ ಹೆಚ್ಚಿಸುವುದು, ಇವೆಲ್ಲವೂ ವ್ಯವಸ್ಥಿತ ಷಡ್ಯಂತ್ರವೇ ಆಗಿದೆ. ಮೂರು ಜನ ಹೆಂಡAದಿರೂ ಹಿಂದೂ ಹೆಣ್ಣು ಮಕ್ಕಳೇ ಎಂಬುದು ಆತಂಕಕಾರಿ ಹಾಗೂ ನೋವಿನ ಸಂಗತಿ, ಬಾಲಿವುಡ್ ನಟ ಅಮೀರ್ ಖಾನ್ ತನ್ನ ಜೀವನದಲ್ಲಿ ಮೂರು ಮದುವೆ ಮಾಡಿಕೊಂಡಿದ್ದಾನೆ. ಆ ಮೂವರು ಪತ್ನಿಯರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಎಲ್ಲ ಶಾಲಾ,ಕಾಲೇಜುಗಳಲ್ಲಿ ಹಿಂದೂ ಸಭೆ ಸಮಾರಂಭಗಳಲ್ಲಿ ಇದರ ಕುರಿತಾಗಿ ಜಾಗೃತಿ ಮೂಡಿಸಲಾಗುವುದು, ಸಮಸ್ತ ಹಿಂದೂಗಳು ಜಾಗೃತರಾಗಿ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.