Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ;23,49,006 ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು,ಶೇ 83.90% ರಷ್ಟು ಸಾಧನೆ


ಮೈಸೂರು; ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಪ್ರಕ್ರಿಯೆಯು ಅತ್ಯಂತ ಚುರುಕಿನಿಂದ ಸಾಗಿದ್ದು ಜುಲೈ 8 ರವೆರೆಗೆ 23,49,006 ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗಿದ್ದು,ಶೇ 83.90% ರಷ್ಟು ಸಾಧನೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 27,99,693 ಮತದಾರರಿದ್ದು, 2,915 ಮತಗಟ್ಟೆಗಳು ಇರುತ್ತದೆ. ಜಿಲ್ಲೆಯಲ್ಲಿ ಮತಗಟ್ಟೆಗಳ ಪೈ ಕಿ 927 (31.80%) ಮತಗಟ್ಟೆಗಳಲ್ಲಿ 100% ಫಾರ್ಮ್ ವಿತರಣೆ ಆಗಿದೆ.726 (24.90%) ಮತಗಟ್ಟೆಗಳಲ್ಲಿ 90% ಕ್ಕಿಂತ ಅಧಿಕ ವಿತರಣೆಯಾಗಿದೆ.
11,419 ಮತದಾರರು ಸ್ವತಃ ಆನ್‌ಲೈನ್ ಮೂಲಕ ಫಾರ್ಮ್ಗಳನ್ನು ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ವಿತರಿಸಲಾದ ಫಾರ್ಮ್ಗಳ ಪೈಕಿ ಇದುವರೆಗೆ ಒಟ್ಟು 1,13,643 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಒಟ್ಟು 1,99,706 ಮತದಾರರ ಪೈಕಿ 1,94,998 ನಮೂನೆಗಳನ್ನು ವಿತರಿಸಲಾಗಿದ್ದು, 16,760 ಗಣಕೀಕೃತಗೊಂಡಿವೆ.
ಕೃಷ್ಣರಾಜನಗರ ಕ್ಷೇತ್ರದಲ್ಲಿ ಒಟ್ಟು 2,20,922 ಮತದಾರರ ಪೈಕಿ 1,99,931 ನಮೂನೆಗಳನ್ನು ವಿತರಿಸಲಾಗಿದ್ದು, 8,323 ಗಣಕೀಕೃತಗೊಂಡಿವೆ.
ಹುಣಸೂರು ಕ್ಷೇತ್ರದಲ್ಲಿ ಒಟ್ಟು 2,53,248 ಮತದಾರರ ಪೈಕಿ 2,46,013 ನಮೂನೆಗಳನ್ನು ವಿತರಿಸಲಾಗಿದ್ದು, 16,288 ಗಣಕೀಕೃತಗೊಂಡಿವೆ.
ಹೆಚ್.ಡಿ. ಕೋಟೆ ಕ್ಷೇತ್ರದಲ್ಲಿ ಒಟ್ಟು 2,34,521 ಮತದಾರರ ಪೈಕಿ 2,21,159 ನಮೂನೆಗಳನ್ನು ವಿತರಿಸಲಾಗಿದ್ದು, 16,258 ಗಣಕೀಕೃತಗೊಂಡಿವೆ.
ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 2,23,279 ಮತದಾರರ ಪೈಕಿ 2,09,745 ನಮೂನೆಗಳನ್ನು ವಿತರಿಸಲಾಗಿದ್ದು, 11,945 ಗಣಕೀಕೃತಗೊಂಡಿವೆ.
ಚಾಮುAಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 3,57,327 ಮತದಾರರ ಪೈಕಿ 2,95,876 ನಮೂನೆಗಳನ್ನು ವಿತರಿಸಲಾಗಿದ್ದು, 8,864 ಗಣಕೀಕೃತಗೊಂಡಿವೆ.
ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 2,63,632 ಮತದಾರರ ಪೈಕಿ 1,73,510 ನಮೂನೆಗಳನ್ನು ವಿತರಿಸಲಾಗಿದ್ದು, 2,300 ಗಣಕೀಕೃತಗೊಂಡಿವೆ.
ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,64,045 ಮತದಾರರ ಪೈಕಿ 1,76,266 ನಮೂನೆಗಳನ್ನು ವಿತರಿಸಲಾಗಿದ್ದು, 2,514 ಗಣಕೀಕೃತಗೊಂಡಿವೆ.
ನರಸಿAಹರಾಜ ಕ್ಷೇತ್ರದಲ್ಲಿ ಒಟ್ಟು 3,27,898 ಮತದಾರರ ಪೈಕಿ 2,14,468 ನಮೂನೆಗಳನ್ನು ವಿತರಿಸಲಾಗಿದ್ದು, 7,424 ಗಣಕೀಕೃತಗೊಂಡಿವೆ.
ವರುಣ ಕ್ಷೇತ್ರದಲ್ಲಿ ಒಟ್ಟು 2,42,363 ಮತದಾರರ ಪೈಕಿ 2,26,474 ನಮೂನೆಗಳನ್ನು ವಿತರಿಸಲಾಗಿದ್ದು, 13,964 ಗಣಕೀಕೃತಗೊಂಡಿವೆ.
ಟಿ. ನರಸೀಪುರ ಕ್ಷೇತ್ರದಲ್ಲಿ ಒಟ್ಟು 2,12,752 ಮತದಾರರ ಪೈಕಿ 1,90,566 ನಮೂನೆಗಳನ್ನು ವಿತರಿಸಲಾಗಿದ್ದು, 9,003 ಗಣಕೀಕೃತಗೊಂಡಿವೆ.
ಮನೆ ಮನೆ ಭೇಟಿಯ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿದ್ದ ದೋಷಗಳನ್ನು ಗುರುತಿಸಲಾಗುತ್ತಿದ್ದು, ಗೈರುಹಾಜರಾದ ಮತದಾರರು- 2,873, ಶಾಶ್ವತವಾಗಿ ಸ್ಥಳಾಂತರಗೊAಡವರು-1,033, ಮರಣ ಹೊಂದಿದ ಮತದಾರರು- 362,ಈಗಾಗಲೇ ಹೆಸರು ನೋಂದಾಯಿತವಾಗಿರುವವರು -51, ಇತರ ಪ್ರಕರಣಗಳು- 8 ಸೇರಿವೆ. ಜಿಲ್ಲೆಯಾದ್ಯಂತ ಒಟ್ಟು 4,327 ಜನರನ್ನು ‘ಂSಆಆಔ’ ಪಟ್ಟಿಗೆ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.