Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಾದಕ ವಸ್ತುಗಳ ವ್ಯಸನವು ಸಮಾಜದ ಒಂದು ದೊಡ್ಡ ಪಿಡುಗಾಗಿದೆ : ಎ ಎಸ್ ಐ  ಮಂಜುನಾಥ್ 

ಪಿರಿಯಾಪಟ್ಟಣ :ಮಾದಕ ವಸ್ತುಗಳ ವ್ಯಸನವು ಸಮಾಜದ ಒಂದು ದೊಡ್ಡ ಪಿಡುಗಾಗಿದೆ ಎಂದು ಬೆಟ್ಟದಪುರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ತಿಳಿಸಿದರು. ತಾಲೂಕಿನ ಬೆಟ್ಟದಪುರ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬೆಟ್ಟದಪುರ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಮ್ಮೆ ಮಾದಕ ವಸ್ತುಗಳ ಬಳಕೆ ಮಾಡುವುದಕ್ಕೆ ಹೋದರೆ ಮುಂದಿನ…

Read More

ಎನ್‌ಸಿಸಿ ಕೆಡೆಟ್‌ಗಳಿಗಾಗಿ ಸಂಚಾರ ಜಾಗೃತಿ

ಮೈಸೂರು; ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸುಮಾರು ೬೦೦ ಎನ್‌ಸಿಸಿ ಕೆಡೆಟ್‌ಗಳಿಗಾಗಿ ಸಂಚಾರ ಜಾಗೃತಿ ಮತ್ತು ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಚಾರ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವ ಬಗ್ಗೆ ಅರಿವು ಮೂಡಿಸಲಾಯಿತು. ಮಾದಕವಸ್ತುಗಳ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ಹಾನಿಕಾರಕ ಪರಿಣಾಮಗಳು. ಮತ್ತು ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ಮತ್ತು ಮಾದಕ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಶಿಸ್ತಿನ ನಾಗರಿಕರಾಗಿ ಎನ್‌ಸಿಸಿ ಕೆಡೆಟ್‌ಗಳ ಪಾತ್ರ. ಹಾಗು ಸಮಾಜದಲ್ಲಿ ಈ…

Read More

ಅಟಲ್ ಪಿಂಚಣಿ ಯೋಜನೆ ಕಾರ್ಯಾಗಾರ ಯಶಸ್ವಿ

ಮೈಸೂರು: ಅಟಲ್ ಪಿಂಚಣಿ ಯೋಜನೆ(ಎಪಿವೈ) ಪ್ರಚಾರ ಮತ್ತು ರಾಜ್ಯಮಟ್ಟದ ಕಾರ್ಯತಂತ್ರ ಪರಿಶೀಲನಾ ಸಭೆ ಸಂಪನ್ನವಾಯಿತು.ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್ಡಿಎ), ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್‌ಎಲ್ಬಿಸಿ) ಮತ್ತು ಲೀಡ್ ಬ್ಯಾಂಕ್(ಭಾರತೀಯ ಸ್ಟೇಟ್ ಬ್ಯಾಂಕ್) ಸಂಯುಕ್ತಾಶ್ರಯದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಅಟಲ್ ಪೆನ್ಶನ್ ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.ವಿವಿಧ ಬ್ಯಾಂಕ್ ಗಳ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಕಾರ್ಯಕ್ಷಮತೆ ಕುರಿತು ಸುದೀರ್ಘ ಸಂವಾದ ಮತ್ತು ಪ್ರಗತಿ ಪರಿಶೀಲನೆ ನಡೆಯಿತು.ಕರ್ನಾಟಕ…

Read More

ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳ ಸಾಧನೆ

ಮೈಸೂರು; 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಜಿ.ಕೆ. ವಿನ್ಯಾಸ ಯೋಗ ಕೇಂದ್ರವು ಶ್ರೀ ಕೃಷ್ಣ ಯೋಗಸ್ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯ ಶಾಲಾ ಮತ್ತು ಕಾಲೇಜು ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್-2026 ರಲ್ಲಿ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.ಈ ಚಾಂಪಿಯನ್‌ಶಿಪ್‌ನಲ್ಲಿ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು ಶ್ಲಾಘನೀಯ ಸ್ಥಾನಗಳನ್ನು ಗಳಿಸಿದ್ದಾರೆ. ಲೇಖನಾ ಎನ್. ದ್ವಿತೀಯ ಸ್ಥಾನ, ಕನಿಷ್ಕ ತೃತೀಯ ಸ್ಥಾನ, ಕನ್ನಿಕಾ ವೈ.ಎ. ಮತ್ತು ಅದಿತಿ ಸಿ. ಚತುರ್ಥ ಸ್ಥಾನ ಹಾಗೂ ಪಾವನಿ ಗೌಡ…

Read More

ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಗುಜರಾತ್ ಕರಕುಶಲ ಉತ್ಸವಕ್ಕೆ ಭರ್ಜರಿ ಸ್ಪಂದನೆ

• 100ಕ್ಕೂ ಹೆಚ್ಚು ಗುಜರಾತ್ ಕರಕುಶಲ ಕಲಾವಿದರ ವೈವಿಧ್ಯಮಯ ಕಲಾಕೃತಿಗಳು ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ನಡೆಯುತ್ತಿರುವ ಗುಜರಾತ್ ಕರಕುಶಲ ಉತ್ಸವ 2026ಕ್ಕೆ ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ ದೊರೆಯುತ್ತಿದ್ದು, ಉತ್ಸವ ಎಲ್ಲರ ಕಣ್ಮನ ಸೆಳೆಯುತ್ತಿದೆ.ಜುಲೈ 3ರಂದು ಆರಂಭಗೊAಡಿರುವ ಈ ಉತ್ಸವವು ಜುಲೈ 12ರವರೆಗೆ ನಡೆಯಲಿದ್ದು, ಗುಜರಾತ್‌ನ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ಕರಕುಶಲ ಕಲಾವಿದರು ತಮ್ಮ ಅಪರೂಪದ ಕೈಮಗ್ಗ, ಕರಕುಶಲ ಹಾಗೂ ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ.ಉತ್ಸವದಲ್ಲಿ…

Read More

ಮೈಸೂರಿನ 7 ವರ್ಷದ ಗಾಯತ್ರಿ ಎಸ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸೇರ್ಪಡೆ

ಮೈಸೂರು: ನಗರದ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್ ನ 2ನೇ ತರಗತಿ ವಿದ್ಯಾರ್ಥಿನಿ ಗಾಯತ್ರಿ.ಎಸ್ ತಮ್ಮ ಅಸಾಧಾರಣ ಗಾಯನ ಕೌಶಲ್ಯದಿಂದ ರಾಷ್ಟ ಮಟ್ಟದ ದಾಖಲೆಯನ್ನು ನಿರ್ಮಿಸಿದ್ದಾರೆ.ಐದು ವಿಭಿನ್ನ ಪ್ರಕಾರಗಳ ಹಾಡುಗಳನ್ನು ಪ್ರದರ್ಶಿಸಿದ ಅತ್ಯಂತ ವೇಗವಾಗಿ ಪ್ರಕಾರಗಳನ್ನು ಬದಲಾಯಿಸಿದ ಕಿರಿಯ ಗಾಯಕಿ ಎಂಬ ಶೀರ್ಷಿಕೆಯಡಿ ಅವರ ಹೆಸರು ನ್ಯಾಷನಲ್ ಬುಕ್ ಆಫ್ ರೆಕಾರ್ಡ – 2026ರಲ್ಲಿ ದಾಖಲಾಗಿದೆ.ಗಾಯತ್ರಿ ಒಂದೇ ಪ್ರದರ್ಶನದಲ್ಲಿ 25ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ವಿಶೇಷವೆಂದರೆ ಒಂದು ಸೆಕೆಂಡ್‌ನೊಳಗೆ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ತಕ್ಷಣವೇ…

Read More

ದಸರಾಪಾಸ್‌ಗಳನ್ನುಸಂಪೂರ್ಣವಾಗಿತಿರಸ್ಕರಿಸಿದ ಸಂಸದ ಯದುವೀರ್

* ಸಾರ್ವಜನಿಕರಿಗೆ ಪಾರದರ್ಶಕವಾಗಿ ಲಭ್ಯವಾಗುವ ವ್ಯವಸ್ಥೆಗೆ ಒತ್ತಾಯ ಬೆಂಗಳೂರು; ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ದಸರಾ ಸಮಿತಿ ಸಭೆಯಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿ, ಮುಂಬರುವ ನಾಡಹಬ್ಬ ಮೈಸೂರು ದಸರಾ ಸಿದ್ಧತೆಗಳ ಕುರಿತು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಸದರು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿ, ಸಂಸದರಿಗೆ ನೀಡಲಾಗುವ ಎಲ್ಲಾ ವಿಧದ ದಸರಾ ಪಾಸ್‌ಗಳನ್ನು ತಾವು ಸ್ವೀಕರಿಸುವುದಿಲ್ಲ ಎಂದು ತಿಳಿಸಿದರು. ದಸರಾ ಮಹೋತ್ಸವವು…

Read More

ಹಿರಿಯ ಲೇಖಕಿ ಸಿ.ಎನ್.ಮುಕ್ತಾ ನಿಧನ

ಮೈಸೂರು: ಖ್ಯಾತ ಲೇಖಕಿ ಸಿ.ಎನ್.ಮುಕ್ತಾ (ಕಳ್ಳಂಬೆಳ್ಳ ನರಸಿಂಹ ಮೂರ್ತಿ ಮುಕ್ತಾ) ಶುಕ್ರವಾರ ಬೆಳಗಿನ ಜಾವ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರಿಗೆ ಸೋದರ, ಸೋದರಿ ಇದ್ದಾರೆ. ಲೇಖಕರಾಗಿದ್ದ ನವರತ್ನರಾಮ್ ರಾವ್ ಅವರು ಇವರ ಚಿಕ್ಕಪ್ಪ.ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ 25 ವರ್ಷಕ್ಕೂ ಅಧಿಕವಾಗಿ ವಿವಿಧೆಡೆ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಅವರ ಕಾದಂಬರಿಗಳಲ್ಲಿ ಸುಖದ ಸೋಪಾನ, ಕ್ಷಮಯಾ ಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಅಮೃತಮಯಿ,…

Read More