Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರಿನ 7 ವರ್ಷದ ಗಾಯತ್ರಿ ಎಸ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸೇರ್ಪಡೆ


ಮೈಸೂರು: ನಗರದ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್ ನ 2ನೇ ತರಗತಿ ವಿದ್ಯಾರ್ಥಿನಿ ಗಾಯತ್ರಿ.ಎಸ್ ತಮ್ಮ ಅಸಾಧಾರಣ ಗಾಯನ ಕೌಶಲ್ಯದಿಂದ ರಾಷ್ಟ ಮಟ್ಟದ ದಾಖಲೆಯನ್ನು ನಿರ್ಮಿಸಿದ್ದಾರೆ.
ಐದು ವಿಭಿನ್ನ ಪ್ರಕಾರಗಳ ಹಾಡುಗಳನ್ನು ಪ್ರದರ್ಶಿಸಿದ ಅತ್ಯಂತ ವೇಗವಾಗಿ ಪ್ರಕಾರಗಳನ್ನು ಬದಲಾಯಿಸಿದ ಕಿರಿಯ ಗಾಯಕಿ ಎಂಬ ಶೀರ್ಷಿಕೆಯಡಿ ಅವರ ಹೆಸರು ನ್ಯಾಷನಲ್ ಬುಕ್ ಆಫ್ ರೆಕಾರ್ಡ – 2026ರಲ್ಲಿ ದಾಖಲಾಗಿದೆ.
ಗಾಯತ್ರಿ ಒಂದೇ ಪ್ರದರ್ಶನದಲ್ಲಿ 25ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ವಿಶೇಷವೆಂದರೆ ಒಂದು ಸೆಕೆಂಡ್‌ನೊಳಗೆ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ತಕ್ಷಣವೇ ಬದಲಾಯಿಸಿ ಹಾಡುವ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಪ್ರದರ್ಶಿಸಿದ 8 ಪ್ರಕಾರಗಳು: ಭಕ್ತಿಗೀತೆ, ಫಾಸ್ಟ್ ಬೀಟ್ ಹಾಡು, ಶಾಸ್ತಿçÃಯ ಸಂಗೀತ, ಚಲನಚಿತ್ರ ಶಾಸ್ತಿçÃಯ, ಜಾನಪದ, ಭಜನೆ, ದೇಶಭಕ್ತಿ ಗೀತೆ ಮತ್ತು ಭಾವಗೀತೆ. ಅವರ ಗಾಯನ ಪ್ರತಿಭೆ, ವೇದಿಕೆ ಮೇಲಿನ ಪ್ರದರ್ಶನ ಮತ್ತು ಸಂಗೀತದ ಮೇಲಿನ ಒಲವನ್ನು ಗುರುತಿಸಿ ಈ ರಾಷ್ಟಿಯ ದಾಖಲೆಗೆ ಆಯ್ಕೆಯಾಗಿದ್ದಾರೆ.