ಎ.ಟಿ.ಎಂ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ಮೈಸೂರು ರೈಲು ನಿಲ್ದಾಣದ ಕಾರಿಡಾರ್ ಹತ್ತಿರ ಪಂಜಾಬ್ ಎ.ಟಿ.ಎಂ ಬಳಿ ಪ್ರಜ್ಞಾಹೀನವಾಗಿ ಬಿದ್ದಿದ್ದ 35-40 ವರ್ಷದ ಅಪರಿಚಿತ ವ್ಯಕ್ತಿಯನ್ನು ರೈಲ್ವೆ ವೈದ್ಯಾಧೀಕರಿಗಳು ಪರಿಶೀಲಿಸಿ ಮೃತಪಟ್ಟಿರುವುದಾಗಿ ದೃಢಿಕರಿಸಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಮೃತನು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ , ಕೋಲು ಮುಖ, ನೇರವಾದ ಮೂಗು, ತಲೆಯಲ್ಲಿ ಸುಮಾರು 3.5 ಇಂಚು ಉದ್ದದ ಕಪ್ಪು ಕೂದಲು ಮತ್ತು 01 ಇಂಚು ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ. ಬಲಗೈಯಲ್ಲಿ ಗಣೇಶನ ಚಿತ್ರದ ಹಸಿರು ಬಣ್ಣದ ಹಚ್ಚೆ ಇದ್ದು, ಹಳದಿ ಮತ್ತು ನೀಲಿ ಬಣ್ಣದ ಚೌಕಾ ಕಾರದ ಬಾಕ್ಸ್ ಇರುವ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಮತ್ತು ನೀಲಿ ಬಣ್ಣದ ಬರ್ಮೋಡಾ ಧರಿಸಿರುತ್ತಾರೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಕಂಡುಬAದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ-0821-2516579, 9480802122 ನ್ನು ಸಂಪರ್ಕಿಸಬಹುದೆAದು ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--°C
Mysore, IN
Loading...