ಖ್ಯಾತ ಬಹುಭಾಷಾ ಗಾಯಕಿ ಎಸ್.ಜಾನಕಿ ವಿಧಿ ವಶ
ಮೈಸೂರಿನಲ್ಲಿಯೇ ಎಸ್.ಜಾನಕಿಯವರ ಅಂತ್ಯಕ್ರಿಯೆ ಮೈಸೂರು; ಖ್ಯಾತ ಬಹುಭಾಷಾ ಗಾಯಕಿ ಎಸ್.ಜಾನಕಿ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೂಲತ ಆಂಧ್ರಪ್ರದೇಶದವರಾದ ಅವರು, ಇತ್ತೀಚೆಗೆ ಮೈಸೂರಿನ ಬೋಗಾದಿಯಲ್ಲಿ ನೆಲೆಸಿದ್ದರು. ಸಂಬAಧಿಕರ ಮನೆಯಲ್ಲಿ ವಾಸವಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷ ಮಗನನ್ನು ಕಳೆದುಕೊಂಡಿದ್ದರು. ಇಂದು ಮಧ್ಯಾಹ್ನ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮೈಸೂರಿನ ಅಪೋಲೋ ಆಸ್ಪತ್ರೆಗೆ ಮಧ್ಯಾಹ್ನ 12.49ರ ವೇಳೆಯಲ್ಲಿ ಕರೆ ತಂದು ದಾಖಲಿಸಲಾಯಿತು. ತಕ್ಷಣವೇ ಅವರನ್ನು ಪರೀಕ್ಷಿಸಿದ ವೈದ್ಯರು ಐಸಿಯುಗೆ…