
ಮೈಸೂರು: ದೇಶದ ಹಲವು ರಾಜ್ಯಗಳಲ್ಲಿ ಆವರಿಸಿರುವ ಬರದ ಛಾಯೆ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನು ಕಾಡಿದೆ. ಬಹುತೇಕ ಕೃಷಿಯನ್ನೇ ಅವಲಂಬಿಸಿರುವ ಪರಂಪರೆಯ ನೆಲ ಮೈಸೂರು ಕೂಡ ವರುಣನ ಕೃಪೆಗೆ ತುತ್ತಾಗಿದ್ದು, ಜಿಲ್ಲೆಯಲ್ಲಿ ಶೇಕಡ 50 ರಷ್ಟು ಅಧಿಕ ಪ್ರಮಾಣದ ಬಿತ್ತನೆ ಕುಂಠಿತವಾಗಿದೆ. ಹೀಗಾಗಿ ಕಡಿಮೆ ನೀರು ಆಶ್ರಯಿಸುವ ಪರ್ಯಾಯ ಬೆಳೆ ಬಗ್ಗೆ ಗಮನ ಹರಿಸುವಂತೆ ರೈತರಿಗೆ ಕೃಷಿ ಇಲಾಖೆ ಸೂಚಿಸಿದೆ.
ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಗಳು ರೈತರಲ್ಲಿ ಬರ ನಿರ್ವಹಣೆಯ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತ ಬಂದಿದ್ದು ಬೆಳೆ ವಿಮೆ ನೋಂದಣಿ ಹಾಗೂ ಪರ್ಯಾಯ ಬೆಳೆ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 837.4 ಮಿ.ಮೀ ಗಳಾಗಿದ್ದು ಜುಲೈ 15 ರ ನಂತರ ವಾಡಿಕೆ ಮಳೆ 355.8 ಮಿ.ಮೀ ಗಳಾಗಿದ್ದು, ಈವರೆಗೆ ಬಿದ್ದ ಮಳೆ 203.2 ಮಿ.ಮಿ ಅಂದರೆ ಶೇಕಡ 42.8 ರಷ್ಟು ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡಾ 13 ರಷ್ಟು ಅಧಿಕ ಅಂದರೆ 400 ಮಿಲಿ ಮೀಟರ್ ಮಳೆಯಾಗಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಕ್ರಮವಾಗಿ ಶೇಕಡ 56 ಮತ್ತು 54 ರಷ್ಟು ಮಳೆ ಕೊರತೆ ಉಂಟಾಗಿದೆ. ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನಲ್ಲಿ ಶೇಕಡ 46ರಷ್ಟು , ಹುಣಸೂರು ತಾಲ್ಲೂಕಿನಲ್ಲಿ ಶೇಕಡ 53ರಷ್ಟು ,ಕೆಆರ್ ನಗರ ತಾಲ್ಲೂಕಿನಲ್ಲಿ ಶೇಕಡ 46 ರಷ್ಟು , ಮೈಸೂರಿನಲ್ಲಿ ಶೇಕಡ 29ರಷ್ಟು, ನಂಜನಗೂಡು ತಾಲ್ಲೂಕಿನಲ್ಲಿ ಶೇಕಡ 32 ರಷ್ಟು ,ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶೇಕಡ 44 ರಷ್ಟು, ಟಿ ನರಸೀಪುರ ತಾಲ್ಲೂಕಿನಲ್ಲಿ ಶೇಕಡ 25 ರಷ್ಟು, ಸರಗೂರು ಶೇಕಡ 45 ರಷ್ಟು, ಸಾಲಿಗ್ರಾಮ ಶೇಕಡ 39 ರಷ್ಟು ವಾಡಿಕೆ ಮಳೆಯಲ್ಲಿ ಕೊರತೆ ಉಂಟಾಗಿದೆ.
ಬಿತ್ತನೆ ವಿವರ: ಜಿಲ್ಲೆಯಲ್ಲಿ ಬಿತ್ತನೆ ಗುರಿ 3.76609 ಹೆಕ್ಟೇರ್ ಪ್ರದೇಶದ ಬದಲಾಗಿ ಈವರೆಗೆ 1.64.355 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಶೇಕಡ 59. 86% ಸರಗೂರು ತಾಲ್ಲೂಕಿನಲ್ಲಿ ಶೇ 57.71 ಹುಣಸೂರು ತಾಲ್ಲೂಕಿನಲ್ಲಿ ಶೇಕಡ 41.75 ರಷ್ಟು, ಕೆ ಆರ್ ನಗರ ತಾಲ್ಲೂಕಿನಲ್ಲಿ ಶೇಕಡ 43.3 0 ಸಾಲಿಗ್ರಾಮ ತಾಲ್ಲೂಕಿನಲ್ಲಿ 40.56 ರಷ್ಟು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶೇಕಡ 54.02 ರಷ್ಟು, ಮೈಸೂರು 43.11, ನಂಜನಗೂಡು ತಾಲ್ಲೂಕಿನಲ್ಲಿ 39.82 ಟಿ ನರಸೀಪುರ ತಾಲ್ಲೂಕಿನಲ್ಲಿ ಶೇಕಡ 15.4 ರಷ್ಟು ಮಾತ್ರ ಬಿತ್ತನೆಯಾಗಿದೆ ಒಟ್ಟಾರೆ ಜಿಲ್ಲೆಯಲ್ಲಿ ಸರಾಸರಿ 43.75ರಷ್ಟು ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ ಏಕದಳ ಧಾನ್ಯಗಳಾದ ಭತ್ತ, ಜೋಳ, ರಾಗಿ, ಮುಸುಕಿನ ಜೋಳ, ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಹಲಸಂದೆ, ಅವರೇ ಎಣ್ಣೆ ಕಾಳುಗಳಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚಳ್ಳು, ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಹೊಸನಾಟಿ, ಕೊಳೆಬೇಳೆ, ತಂಬಾಕು ಅಥವಾ ಹೊಗೆ ಸೊಪುö್ಪಗಳನ್ನು ಬೆಳೆಯಾಗಿದ್ದರೂ ರಾಗಿಯ ಬಿತ್ತನೆ ಪ್ರಮಾಣ 3.2 ರಷ್ಟು ಅಂದರೆ 2536 ಹೆಕ್ಟರ್ ಜೋಳ ಕೂಡ 11 20 ಹೆಕ್ಟೇರ್ ಪ್ರದೇಶದ ಬಿತ್ತನೆ ಮಾಡಲಾಗಿದೆ. ಕಡಿಮೆ ನೀರಿನ ನೀರನ್ನು ಆಶ್ರಯಿಸುವ ಸಿರಿಧಾನ್ಯಗಳ ಬಿತ್ತನೆಯಾಗಿಲ್ಲ.
ಪ್ರಸ್ತುತ ಹವಾಮಾನ ಇಲಾಖೆಯ ತಜ್ಞರು ತಿಳಿಸಿರುವ ಪ್ರಕಾರ, ಮುಂಗಾರು ಮಳೆ ಅಷ್ಟೊಂದು ಆಶಾದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತ ಬಾಂಧವರು ಹೆಚ್ಚು ನೀರನ್ನು ಬಯಸುವ ಭತ್ತ ಮತ್ತು ಕಬ್ಬು ಬೆಳೆಯುವ ಬದಲು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಅಲಸಂದೆ ಹಾಗೂ ಅವರೆಯಂತಹ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕ ರವಿ ಮನವಿ ಮಾಡಿದ್ದಾರೆ.
ವಿಶೇಷವಾಗಿ ರಾಗಿ ಬೆಳೆಯು ಬರ ನಿರೋಧಕ ಶಕ್ತಿಯನ್ನು ಹೊಂದಿದ್ದು, ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ನೀಡುತ್ತದೆ. ಹಾಗೆಯೇ ದ್ವಿದಳ ಧಾನ್ಯಗಳಾದ ಅಲಸಂದೆ, ಅವರೆ ಮತ್ತು ಹೆಸರು ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿರುವುದಿಲ್ಲ; ಕಡಿಮೆ ಮಳೆಯಲ್ಲೂ ಇವು ಉತ್ತಮವಾಗಿ ಬೆಳೆಯುತ್ತವೆ. ಆದ್ದರಿಂದ, ಈ ಪರಿಸ್ಥಿತಿಯಲ್ಲಿ ರೈತರು ಕಡಿಮೆ ನೀರನ್ನು ಅಪೇಕ್ಷಿಸುವ ಬೆಳೆಗಳಿಗೆ ಆದ್ಯತೆ ನೀಡುವುದು ಅತ್ಯಂತ ಸೂಕ್ತವಾಗಿದೆ.
2026-27 ನೇ ಸಾಲಿನಲ್ಲಿ ಮಳೆ ಕೊರತೆಯಾಗಿರುವ ಹಿನ್ನಲೆಯಲ್ಲಿ ಸಕಾಲದಲ್ಲಿ ರೈತರಿಗೆ ಬರ ನಿರ್ವಹಣೆ ಕ್ರಮಗಳನ್ನು ಒದಗಿಸಲು ಮೇ ತಿಂಗಳಿನಿAದ ಇಲ್ಲಿಯವೆಗೆ ನಡೆದಿರುವ ಎಲ್ಲಾ ಜಿಲ್ಲಾಮಟ್ಟದ, ತಾಲ್ಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಸಭೆಗಳು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ರೈತರಿಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬರ ಸಹಿಷ್ಣುತೆ ಹೊಂದಿರುವ ಬೆಳೆಗಳು ಮತ್ತು ತಳಿಗಳ ಮಾಹಿತಿಯನ್ನು ಮತ್ತು ಬರ ನಿರ್ವಹಣಾ ಕ್ರಮಗಳು ಹಾಗೂ ಬೆಳೆ ವಿಮೆ ಯೋಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೃಷಿ ಇಲಾಖೆಯಿಂದ ಆಯೋಜಿಸಲಾಗಿರುತ್ತದೆ.
ಕೃಷಿ ವಿಜ್ಞಾನಿಗಳ ಸಹಯೋಗದಲ್ಲಿ ಗ್ರಾಮ ಮಟ್ಟದಲ್ಲಿ ಖೇತ್ ಬಚಾವೋ ಅಭಿಯಾನಗಳ ಮೂಲಕ ಹಾಗೂ ಬೆಳೆ ವಿಮೇ ಆಟೋ ಪ್ರಚಾರ ಕಾರ್ಯಕ್ರಮಗಳ ಜೊತೆ ಪರ್ಯಾಯ ಬೆಳೆ ಪದ್ಧತಿ ಕುರಿತು ರೈತರಿಗೆ ಅರಿವು ಮೂಡಿಸಲಾಗಿದೆ.
ಬಿತ್ತನೆ ಬೀಜ ಹಾಗೂ ರಸಗೊಬ್ಬರ ಲಭ್ಯತೆ; ಪ್ರಸ್ತುತ ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ ಒಟ್ಟು 21991 ಮೆ.ಟನ್ ರಸಗೊಬ್ಬರ ಬೇಡಿಕೆ ಇದು 52543 ಮೆ.ಟನ್ ದಾಸ್ತಾನು ಲಭ್ಯವಿರುತ್ತದೆ ಹಾಗೂ ಯಾವುದೇ ಕೊರತೆ ಇರುವುದಿಲ್ಲ ಎಂದು ಜಂಟಿ ನಿರ್ದೇಶಕರು ವಿವರ ಒದಗಿಸಿದ್ದಾರೆ.