
`
ಮೈಸೂರು; ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜ್ ನಲ್ಲಿ
2026-27ನೇ ಸಾಲಿನ ಪ್ರತಿಭಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಪ್ರತಿಭಾ ದಿನಾಚರಣೆಯ ಪ್ರಯುಕ್ತ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಫ್ಯಾಷನ್ ಶೋ ಮತ್ತು ಮಿಸೆಸ್ ಜೆಎಸ್‌ಎಸ್ ನಡೆಯಿತು. ಈ ಸ್ಪರ್ಧೆಯಲ್ಲಿ ಮಿಸೆಸ್ ಜೆಎಸ್‌ಎಸ್ ಕು. ಸಿಂಚನ ಎಂ ಬಿ, ಪೋಟೋ ಜೆನಿಕ್ ಆಗಿ ಕು. ಅನುಷ ಎಸ್ ವಿ ಎಂ, ಮಿಸೆಸ್ ಎಲಿಗೆಂಟ್ ಆಗಿ ಕು. ಅಪೂರ್ವ ಎ ಎಸ್, ಹಾಗೂ ಮಿಸೆಸ್ ಜ್ಯೂವೆಲಿಕ್ ಆಗಿ ಕು. ಭೂಮಿಕ ಹೆಚ್ ಆಯ್ಕೆಗೊಂಡರು. ನಿವೃತ ಸಹಾಯಕ ಪ್ರಾಧ್ಯಾಪಕರಾದ ಸುಜಾತಕುಮಾರಿ ತೀರ್ಪುಗಾರರಾಗಿ ಆಗಮಿಸಿ, ಆಯ್ಕೆಯಾದವರಿಗೆ ಕಿರೀಟ ತೊಡಿಸಿ ಹೂಗುಚ್ಚ ನೀಡಿ ಅಭಿನಂದಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.