
ಮೈಸೂರು: ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ನಿತ್ಯವೂ ಯೋಗಾಭ್ಯಾಸ ಮತ್ತು ವ್ಯಾಯಾಮ ಮಾಡಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ನಗರದ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮAದಿರದಲ್ಲಿ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಘಟಿಕೋತ್ಸವ ಉದ್ಘಾಟಿಸಿ, ಅರ್ಹರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು,
ಯೋಗವೆಂದರೆ ಮೈಸೂರು, ಮೈಸೂರು ಎಂದರೆ ಯೋಗ ಎಂಬAತೆ ಪ್ರಸಿದ್ಧಿಯಾಗಿದೆ. ಇಲ್ಲಿ ಯೋಗ ಕಲಿತವರು ವಿದೇಶಗಳಿಗೆ ಹೋಗಿ ಕಲಿಸುವ ಹಂತಕ್ಕೆ ತಲುಪಿದ್ದಾರೆ. ‘ನಾನೂ ನಾಲ್ಕು ತಿಂಗಳುಗಳಿAದ ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದೇನೆ’ ಎಂದರು.
ಸಂಗೀತ, ಭರತನಾಟ್ಯ, ಆಗಮ, ವೇದಾಧ್ಯಯನ, ಅರ್ಚಕ ಪೌರೋಹಿತ್ಯ ವೃತ್ತಿಗೆ ಬೇಕಾದ ಶಿಕ್ಷಣವೂ ಇಲ್ಲಿ ದೊರೆಯುತ್ತಿದೆ. ಉತ್ತರ ಕರ್ನಾಟಕದ ಭಾಗಗಳಿಂದಲೂ ನೂರಾರು ಮಂದಿ ಇಲ್ಲಿಗೆ ಬಂದು ವೇದಾಧ್ಯಯನ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪಿ.ಎನ್. ಗಣೇಶಕುಮಾರ್, ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಆರ್ಎಂಒ ಡಾ.ಎಚ್.. ಶಶಿರೇಖಾ ಮಾತನಾಡಿದರು. ಅಧ್ಯಾತ್ಮಿಕ ಚಿಂತಕಿ ಸುಚರಿತಾ ಸಾನ್ನಿಧ್ಯ ವಹಿಸಿದ್ದರು.
ಇದೇ ವೇಳೆ ನಿವೃತ್ತ ಡಿವೈಎಸ್ಪಿ ಉಮೇಶ್ಗಣಪತಿ ಶೇಟ್, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಐತಿಚಂಡ ರಮೇಶ್ ಉತ್ತಪ್ಪ, ನಿವೃತ್ತ ಡಿಡಿಪಿಐ ಮಂಜುಳಾ, ದುಬೈ ಯೋಗ ಶಿಕ್ಷಕಿ ಪಿ. ಭಾಗ್ಯಾ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಎಂ. ಮೋಹನ್ ರೇಖಾ ದಂಪತಿ, ಮಂಡ್ಯ ಸಹಾಯಕ ಜೈಲರ್ ಎಂ.ಎಸ್. ಕುಮಾರ್ ಗೀತಾ ದಂಪತಿ, ಯೋಗ ಪ್ರಚಾರಕ ವೆಂಕಟೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಂ.ವಿ. ಯೋಗಾಸ್ ಕಾರ್ಯದರ್ಶಿ ಭಾಸ್ಕರ್, ಹಿರಿಯ ಉಪಾಧ್ಯಕ್ಷ ದೇವಪ್ಪ, ಮೈಸೂರು ಯೋಗ ಒಕ್ಕೂಟದ ಯೋಗಕುಮಾರ್, ರಾಘವೇಂದ್ರ ಕೇಂದ್ರದ ಎನ್. ಪಶುಪತಿ ಉಪಸ್ಥಿತರಿದ್ದರು.